ಚೀನಾದಲ್ಲಿ 4 ವರ್ಷದ ಬಾಲಕನಿಗೆ ಹಕ್ಕಿ ಜ್ವರ ದೃಢ;

ಬೀಜಿಂಗ್: ಚೀನಾದಲ್ಲಿ ಹಕ್ಕಿ ಜ್ವರ (ಏವಿಯನ್‌ ಫ್ಲೂ) ಎಚ್‌3ಎನ್‌8 ಮನುಷ್ಯರಿಗೆ ಹರಡಿದ ಮೊದಲ ಪ್ರಕರಣ ದೃಢಗೊಂಡಿದೆ. ಆದರೆ ಈ ಸೋಂಕು ಜನರಲ್ಲಿ ವ್ಯಾಪಕವಾಗಿ ಹರಡುವ ಸಾಧ್ಯತೆ ಕಡಿಮೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಮಧ್ಯ ಹೇನನ್‌ ಪ್ರಾಂತ್ಯದ ನಿವಾಸಿಯಾಗಿರುವ ನಾಲ್ಕು ವರ್ಷದ ಬಾಲಕನೊಬ್ಬನಿಗೆ ಈ ಸೋಂಕು ದೃಢಪಟ್ಟಿದೆ.

ಬಾಲಕನನ್ನು ಕೆಲ ದಿನಗಳ ಹಿಂದೆ ಜ್ವರ ಮತ್ತಿತರ ಗುಣಲಕ್ಷಣಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಾಲಕನ ಮನೆಯಲ್ಲಿ ಕೋಳಿ ಸಾಕಣೆ ನಡೆಸಲಾಗುತ್ತಿದೆ ಹಾಗೂ ಆತ ವಾಸಿಸುವ ಪ್ರದೇಶದಲ್ಲಿ ಬಾತುಕೋಳಿಗಳು ಸಾಕಷ್ಟು ಸಂಖ್ಯೆಯಲ್ಲಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

ಬಾಲಕನಿಗೆ ಕೋಳಿಗಳಿಂದಲೇ ಸೋಂಕು ಹರಡಿದೆ ಆದರೆ ಇದು ಮನುಷ್ಯರಲ್ಲಿ ವ್ಯಾಪಿಸುವ ಸಾಧ್ಯತೆ ಕಡಿಮೆ ಹಾಗೂ ಬಾಲಕನ ಹತ್ತಿರದ ಸಂಪರ್ಕಗಳಲ್ಲಿ ಯಾರಲ್ಲೂ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿಸಲಾಗಿದೆ.

ಆದರೂ ಸತ್ತ ಅಥವಾ ಅಸೌಖ್ಯಪೀಡಿತ ಕೋಳಿಗಳಿಂದ ದೂರವುಳಿಯುವಂತೆ ಆರೋಗ್ಯ ಆಯೋಗ ನಾಗರಿಕರಿಗೆ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್;

Wed Apr 27 , 2022
  ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೋವಿಡ್ 4ನೇ ಅಲೆ ಆತಂಕದ ನಡುವೆ ಜನಸಾಮಾನ್ಯರಿಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ-ಕೆಎಂಎಫ್ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಹಾಲಿನ ದರ ಏರಿಕೆ ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ. ನಂದಿನಿ ಹಾಲಿನ ದರಕ್ಕೆ ಹೋಲಿಸಿದರೆ ಇತರ ಸಂಸ್ಥೆಗಳ ಹಾಲಿನ ದರ ಲೀಟರ್ ಗೆ 8ರಿಂದ 10 ರೂಪಾಯಿ ಹೆಚ್ಚಿವೆ. […]

Advertisement

Wordpress Social Share Plugin powered by Ultimatelysocial