ಪಾಕ್‌ಗೆ ಚೀನಾ ಸಾಲ:

ವಾಷಿಂಗ್ಟನ್‌: ಪಾಕಿಸ್ತಾನ ಸಹಿತ ನೆರೆಹೊರೆಯ ರಾಷ್ಟ್ರಗಳಿಗೆ ಚೀನಾ ನೀಡಿರುವ ಸಾಲದ ಬಗ್ಗೆ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದು ಸಾಲ ನೀಡಿದ ರಾಷ್ಟ್ರಗಳನ್ನು ಬಲವಂತವಾಗಿ ಹತೋಟಿಯಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಎಂದು ಅದು ಹೇಳಿದೆ.’ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ ಹಾಗೂ ನೇಪಾಳಕ್ಕೆ ಚೀನಾ ನೀಡಿರುವ ಸಾಲ ತೀವ್ರ ಕಳವಳಕಾರಿಯಾಗಿದ್ದು, ಇದನ್ನು ಬಲವಂತದ ಹತೋಟಿಗೆ ಬಳಕೆ ಮಾಡುವ ಸಾಧ್ಯತೆ ಇದೆ’ ಎಂದು ದಕ್ಷಿಣ ಹಾಗೂ ಮಧ್ಯ ಏಷ್ಯಾಗೆ ಸಹ ಕಾರ್ಯದರ್ಶಿಯಾಗಿರುವ ಡೊನಾಲ್ಡ್‌ ಲು ಹೇಳಿದ್ದಾರೆ.ಈ ದೇಶಗಳು ತಮ್ಮದೇ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಹಾಗೂ ಹೊರಗಿನ ಯಾವುದೇ ಪಾಲುದಾರರ ಬಲವಂತಕ್ಕೆ ಒಳಗಾಗದೇ ಇರಲು ನಾವು ಅವರೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ.’ಹೇಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಹಾಗೂ ಇತರ ಪಾಲುದಾರರ ಬಲವಂತಕ್ಕೆ ಒಳಗಾಗದೇ ಇರಲು ಅವರಿಗೆ ಸಹಾಯ ಮಾಡುವ ಬಗ್ಗೆ ನಾವು ಭಾರತದೊಂದಿಗೆ ಮಾತುಕತೆ ನಡೆಸುತ್ತೇವೆ’ ಎಂದು ಅವರು ಹೇಳಿದ್ದಾರೆ.ಮಾರ್ಚ್‌ 1 ರಿಂದ 3ರ ವರೆಗೆ ಲು ಅವರು ಭಾರತ ಪ್ರವಾಸದಲ್ಲಿ ಇರಲಿದ್ದಾರೆ.’ಚೀನಾ ಸಂಬಂಧ ಭಾರತದೊಂದಿಗೆ ಈಗಾಗಲೇ ಗಂಭೀರ ಚರ್ಚೆಗಳು ನಡೆದಿದ್ದು, ಇದು ಮುಂದುವರಿಯುವ ವಿಶ್ವಾಸ ಇದೆ’ ಎಂದು ಲು ನುಡಿದಿದ್ದಾರೆ.ಭೀಕರ ಆರ್ಥಿಕ ಹಿಂಜರಿತಕ್ಕೆ ತುತ್ತಾಗಿರುವ ಪಾಕಿಸ್ತಾನಕ್ಕೆ, ನೆರವು ನೀಡಲು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ನಿರಾಕರಿಸಿದರೂ, 700 ಮಿಲಿಯನ್‌ ಡಾಲರ್‌ ಮೊತ್ತದ ಸಹಾಯ ಮಾಡಲು ಚೀನಾ ಮುಂದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೃಷಭ ರಾಶಿ ಭವಿಷ್ಯ.

Sat Feb 25 , 2023
ಇಂದು, ನಿಮ್ಮ ಆರೋಗ್ಯವು ಆರೋಗ್ಯಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇಂವು ನಿಮಗೆ ನಿಮ್ಮ ಸಹೋದರ ಅಥವಾ ಸಹೋದರಿಯ ಸಹಾಯದಿಂದ ಹಣದ ಲಾಭವಾಗುವ ಸಾಧ್ಯತೆ ಇದೆ ನೀವು ಅಪರೂಪಕ್ಕೆ ಭೇಟಿ ಮಾಡುವ ಜನರನ್ನು ಸಂಪರ್ಕಿಸಲು ಒಳ್ಳೆಯ ದಿನ. ಸ್ನೇಹ ಆಳವಾದ ಹಾಗೆ ಪ್ರಣಯ ನಿಮ್ಮೆಡೆ ಬರುತ್ತದೆ. ಇಂದು ಮನೆಯ ಸದಸ್ಯರೊಂದಿಗೆ ಮಾತನಾಡುವ ಸಮಯದಲ್ಲಿ ನಿಮ್ಮ ಮುಖದಿಂದ ಮನೆಯ ಸದಸ್ಯರು ಕೋಪಗೊಳ್ಳುವಂತಹ ಯಾವುದೇ ಮಾತು ಬರಬಹುದು. ಇದರ ನಂತರ ಮನೆಯ ಸದಸ್ಯರನ್ನು ಮನವರಿಕೆ ಮಾಡಲು […]

Advertisement

Wordpress Social Share Plugin powered by Ultimatelysocial