ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಎರಡು ದಶಕಗಳನ್ನು ಪೂರೈಸಿದ ಮ್ಯೂಸಿಕ್‌ ಡೈರೆಕ್ಟರ್‌

ಮಣಿಕಾಂತ್‌ ಕದ್ರಿ, ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಪುತ್ರ. ಸಿನಿಮಾ ಸಂಗೀತ ನಿರ್ದೇಶನದ ಹೊರತಾಗಿ ಮಣಿಕಾಂತ್‌ ಕದ್ರಿ, ತಮ್ಮ ತಂದೆ ಹೆಸರಲ್ಲಿ ಟ್ರಸ್ಟ್ ತೆರೆದು ಯುವ ಕಲಾವಿದರಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ.ಮಣಿಕಾಂತ್‌ ಕದ್ರಿ ಸಂಗೀತ ನಿರ್ದೇಶಕನಾಗಿ ಕರಿಯರ್ ಆರಂಭಿಸಿದ್ದು 2006ರಲ್ಲಿ ತೆರೆ ಕಂಡ ಮಲಯಾಳಂನ ‘ಸ್ಮಾರ್ಟ್‌ ಸಿಟಿ’ ಚಿತ್ರದ ಮೂಲಕ. ‘ಗಣೇಶ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕನಾಗಿ ಹೆಜ್ಜೆ ಇಟ್ಟ ಮಣಿಕಾಂತ್ ಕದ್ರಿ ಕ್ರೇಜಿಲೋಕ, ಪೃಥ್ವಿ, ಸವಾರಿ, ಸವಾರಿ 2, ರನ್ ಆಂಟನಿ, ನಡುವೆ ಅಂತರವಿರಲಿ, ಮೂಕಹಕ್ಕಿ, ಮಳೆ ಬಿಲ್ಲೆ, ಸ್ವಯಂವರ, ಜಾತ್ರೆ, ಮಿಸ್ಟರ್ ಗರಗಸ, ಟಕ್ಕರ್‌, ಲವ್‌ ಯು ರಚ್ಚು ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಮುಂಬರುವ, ‘ಆಡಿಸಿದಾತ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರೆ, ‘ಮೇಲೊಬ್ಬ ಮಾಯಾವಿ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ತುಳು ಚಿತ್ರರಂಗಕ್ಕೂ ಇವರ ಕೊಡುಗೆ ಅಪಾರ. ಎಲ್ಲಾ ಭಾಷೆಗಳೂ ಸೇರಿ ಇದುವರೆಗೂ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ, ಹಿನ್ನೆಲೆ ಸಂಗಿತ ನೀಡಿದ್ದಾರೆ.ಮಣಿಕಾಂತ್‌ ಕದ್ರಿ ಸಂಗೀತ ನಿರ್ದೇಶನವಿರುವ ಹಲವು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಡಾರ್ಲಿಂಗ್ ಕೃಷ್ಣ ಅಭಿನಯದ ‘ಮಿಸ್ಟರ್ ಬ್ಯಾಚುಲರ್’, ಬಿ.ಎಸ್. ಲಿಂಗದೇವರು ನಿರ್ದೇಶನದ ‘ವಿರಾಟಪುರ ವೈರಾಗಿ’, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ಬಿರ್ದುದ ಕಂಬಳ’, ಗುರುದೇಶಪಾಂಡೆ ನಿರ್ಮಾಣದ ‘ಪೆಂಟಗಾನ್’, ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣ ಆಗುತ್ತಿರುವ ‘ಲೈನ್ ಮ್ಯಾನ್’ ಚಿತ್ರಗಳು ಶೀಘ್ರದಲ್ಲೇ ಬಿಡುಗಡೆ ಆಗಲಿವೆ.ಮಣಿಕಾಂತ್‌ ಕದ್ರಿ, ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಪುತ್ರ. ಸಿನಿಮಾ ಸಂಗೀತ ನಿರ್ದೇಶನದ ಹೊರತಾಗಿ ಮಣಿಕಾಂತ್‌ ಕದ್ರಿ, ತಮ್ಮ ತಂದೆ ಹೆಸರಲ್ಲಿ ಟ್ರಸ್ಟ್ ತೆರೆದು ಯುವ ಕಲಾವಿದರಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ. ಅಷ್ಟೇ ಅಲ್ಲ, ನಶಿಸಿ ಹೋಗುತ್ತಿರುವ ಜಾನಪದ ಹಾಡುಗಳನ್ನು ಉಳಿಸಿಕೊಳ್ಳುವ ಕೆಲಸ ಕೂಡಾ ಈ ಟ್ರಸ್ಟ್ ಮೂಲಕ ನಡೆಯುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

 

Please follow and like us:

Leave a Reply

Your email address will not be published. Required fields are marked *

Next Post

ಹಲವು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು "ವೈಶಂಪಾಯನ ತೀರ" ದ ಟ್ರೇಲರ್!

Wed Dec 28 , 2022
ರಂಗಕರ್ಮಿ ರಮೇಶ್ ಬೇಗಾರು ನಿರ್ದೇಶಿಸಿರುವ ‘ವೈಶಂಪಾಯನ ತೀರ’ ಚಿತ್ರದ ಟ್ರೇಲರ್ ಹಲವು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಗಿದೆ. ಚಿತ್ರ ಜನವರಿ 6 ರಂದು ತೆರೆಗೆ ಬರಲಿದೆ.ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚಿಗೆ ‘ವೈಶಂಪಾಯನ ತೀರ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದೆ. ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ, ಸಂಗೀತ ನಿರ್ದೇಶಕ ಗುರುಕಿರಣ್, ಹಿರಿಯ ಪತ್ರಕರ್ತ ಎನ್. ಎಸ್ ಶ್ರೀಧರಮೂರ್ತಿ, ಕರ್ನಾಟಕ ಚಲನಚಿತ್ರ […]

Advertisement

Wordpress Social Share Plugin powered by Ultimatelysocial