ಚಳಿಗಾಲದಲ್ಲಿ ಕಾಡುವ ಕಾಯಿಲೆಗಳನ್ನು ಹೊಡೆದೋಡಿಸುತ್ತೆ ಮೊಳಕೆ ಬರಿಸಿದ ಹೆಸರು ಕಾಳು..!

ಬೇಳೆ-ಕಾಳುಗಳು ನಮ್ಮ ದೈನಂದಿನ ಆಹಾರದ ಅವಿಭಾಜ್ಯ ಅಂಗಗಳಾಗಿವೆ. ಅವುಗಳಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳಿವೆ. ಅದರಲ್ಲೂ ಹೆಸರು ಕಾಳಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಕಂಡುಬರುತ್ತದೆ.ಇದು ಸ್ನಾಯುಗಳ ಬೆಳವಣಿಗೆಗೆ ಬಹಳ ಸಹಾಯಕವಾಗಿದೆ.ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಮೊಳಕೆ ಬರಿಸಿದ ಹೆಸರು ಕಾಳನ್ನು ತಪ್ಪದೇ ಸೇವಿಸಿ. ಅದರಿಂದ ನೀವು ಅದ್ಭುತವಾದ ಪ್ರಯೋಜನಗಳನ್ನು ಪಡೆಯುತ್ತೀರಿ.ನೆನೆಸಿದ ಹೆಸರುಕಾಳು ಚಳಿಗಾಲದಲ್ಲಿ ಕಾಡುವ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೊಳಕೆ ಕಟ್ಟಿದ ಹೆಸರುಕಾಳನ್ನು ಸಲಾಡ್‌ಗಳಲ್ಲಿ ಬೆರೆಸಿ ಬಳಸಬಹುದು. ಮೊಳಕೆಯೊಡೆದ ಹೆಸರುಕಾಳು ದೇಹದಲ್ಲಿರುವ ಹೆಚ್ಚುವರಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಪ್ರತಿದಿನ ಬೆಳಗ್ಗೆ ಮೊಳಕೆಯೊಡೆದ ಹೆಸರುಕಾಳು ಸೇವಿಸಿದರೆ ದೇಹದಲ್ಲಿನ ಅಗತ್ಯ ಪ್ರೋಟೀನ್ ಕೊರತೆಯನ್ನು ಅದು ನಿವಾರಿಸುತ್ತದೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ.ರಕ್ತದಲ್ಲಿ ಅಧಿಕ ಸಕ್ಕರೆಯ ಅಂಶ ಹೊಂದಿರುವವರಿಗೆ ಇದು ವರದಾನಕ್ಕಿಂತ ಕಡಿಮೆಯಿಲ್ಲ. ಮಧುಮೇಹಿಗಳಿಗೆ ಉಂಟಾಗುವ ಮಲಬದ್ಧತೆಯ ಸಮಸ್ಯೆ ಹೆಸರುಕಾಳು ಸೇವನೆಯಿಂದ ದೂರವಾಗುತ್ತದೆ. ಅಧಿಕ ರಕ್ತದೊತ್ತಡವನ್ನು ಸಹ ಇದು ಕಡಿಮೆ ಮಾಡುತ್ತದೆ. ನೀವು ಪ್ರತಿದಿನ ವರ್ಕೌಟ್ ಮಾಡುತ್ತಿದ್ದರೆ ತಪ್ಪದೇ ಮೊಳಕೆ ಬರಿಸಿದ ಹೆಸರುಕಾಳನ್ನು ಸೇವಿಸಿ. ಇದರಿಂದ ದಿನವಿಡೀ ನಿಮ್ಮ ದೇಹದಲ್ಲಿ ಶಕ್ತಿ, ಚೈತನ್ಯ ತುಂಬಿರುತ್ತದೆ. ಸ್ನಾಯು ಚೇತರಿಕೆ ವೇಗವಾಗಿರುತ್ತದೆ. ಇದು ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ನಿವಾರಿಸುತ್ತದೆ. ಮೊಳಕೆ ಬರಿಸಿದ ಹೆಸರು ಕಾಳು ತಿನ್ನುವುದರಿಂದ ರಕ್ತಹೀನತೆ ಉಂಟಾಗುವುದಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರತಿದಿನ ಮಲಗುವ ಮುನ್ನ ಈ ಕೆಲಸ ಮಾಡಿದ್ರೆ ಹಿಮ್ಮಡಿ ಬಿರುಕಿನಿಂದ ಸಿಗುತ್ತೆ ಮುಕ್ತಿ

Fri Dec 30 , 2022
ಚಳಿಗಾಲ ಬಂದ ಕೂಡಲೇ ನಮ್ಮ ತ್ವಚೆ ಹೊಳಪು ಕಳೆದುಕೊಂಡು ಒಣಗಿ ಹೋಗುತ್ತದೆ. ಮುಖ ಮತ್ತು ತುಟಿಗಳ ರಕ್ಷಣೆಗೆ ನಾವು ಸಾಕಷ್ಟು ಕಸರತ್ತು ಮಾಡುತ್ತೇವೆ. ಆದರೆ ಒಡೆದ ಹಿಮ್ಮಡಿ ಬಗ್ಗೆ ಹೆಚ್ಚು ಗಮನ ಹರಿಸುವುದೇ ಇಲ್ಲ. ಚಳಿಗಾಲದಲ್ಲಿ ಹಿಮ್ಮಡಿಗಳು ಬಿರುಕು ಬಿಡುತ್ತವೆ, ಇದರಿಂದಾಗಿ ನಡೆಯಲು ಕೂಡ ಕಷ್ಟವಾಗಬಹುದು.ಹಾಗಾಗಿ ತ್ವಚೆಯ ಜೊತೆಗೆ ಹಿಮ್ಮಡಿಗಳು ಒಡೆಯದಂತೆ ಜೋಪಾನ ಮಾಡಬೇಕು. ಈ ಸಮಸ್ಯೆಗೆ ಹಾಲಿನಲ್ಲಿ ಪರಿಹಾರವಿದೆ.ಹಾಲಿನಲ್ಲಿ ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಲಕ್ಷಣಗಳಿವೆ. ಇದು […]

Advertisement

Wordpress Social Share Plugin powered by Ultimatelysocial