ಆಂತರಿಕ ತನಿಖೆಗೆ ಆದೇಶಿಸಿದ ಭಾರತೀಯ ವಾಯುಪಡೆ.

ಧ್ಯಪ್ರದೇಶದಲ್ಲಿ ಎರಡು ಯುದ್ಧ ವಿಮಾನಗಳು ಪತನಗೊಂಡಿರುವ ಬಗ್ಗೆ ಭಾರತೀಯ ವಾಯುಪಡೆ ಆಂತರಿಕ ತನಿಖೆಗೆ ಆದೇಶಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಾಯುಪಡೆ ಮುಖ್ಯಸ್ಥರಾದ ಅನಿಲ್ ಚೌಹಾಣ್ ಮತ್ತು ಐಎಎಫ್ ಚೀಫ್ ಮಾರ್ಷಲ್ ಚೌಧರಿ ಅವರಿಗೆ ಕರೆ ಮಾಹಿತಿ ಪಡೆದಿದ್ದಾರೆ.

ವಾಯುಪಡೆಯ ಪೈಲಟ್‌ಗಳ ಯೋಗಕ್ಷೇಮ ವಿಚಾರಿಸಿದರು.

ಮಧ್ಯಪ್ರದೇಶದ ನಿರ್ಜನ ಅರಣ್ಯಗಳಲ್ಲಿ ಎರಡು ಯುದ್ಧ ವಿಮಾನಗಳು ಪತನಗೊಂಡಿದ್ದರಿಂದ ಭಾರತೀಯ ವಾಯುಪಡೆಗೆ ದೊಡ್ಡ ಹೊಡೆತ ಬಿದ್ದಿದೆ. ಮಧ್ಯಪ್ರದೇಶದಲ್ಲಿ ತರಬೇತಿ ಪಡೆಯುತ್ತಿದ್ದ ಎರಡು ಯುದ್ಧ ವಿಮಾನಗಳು ಇಂದು ಪತನಗೊಂಡಿವೆ. ಸುಖೋಯ್-30 ಮತ್ತು ಮಿರಾಜ್ ವಿಮಾನಗಳು ಮಧ್ಯಪ್ರದೇಶದ ಮೊರೆನಾ ಬಳಿ ಪತನಗೊಂಡಿವೆ. ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳು ತಾಂತ್ರಿಕ ದೋಷದಿಂದ ಪತನಗೊಂಡಿವೆಯೇ? ಅಥವಾ ಬೇರೆ ಕಾರಣಗಳಿವೆಯೇ? ಇದು ತಿಳಿದು ಬರಬೇಕು.

ಎರಡು ಯುದ್ಧ ವಿಮಾನಗಳು ಪತನಗೊಂಡಿರುವುದು ಕೂಡ ಸಂಚಲನ ಮೂಡಿಸಿದೆ. ಎರಡು ಸುಖೋಯ್-30 ಮತ್ತು ಮಿರಾಜ್ ಯುದ್ಧ ವಿಮಾನಗಳು ಮಧ್ಯಪ್ರದೇಶದ ಮೊರೆನಾ ಬಳಿ ಪತನಗೊಂಡಿವೆ. ರಕ್ಷಣಾ ತಂಡಗಳು ಮಧ್ಯಪ್ರದೇಶದಲ್ಲಿ ಅಪಘಾತದ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರನೆ ನಡೆಸುತ್ತಿವೆ. ಓರ್ವ ಪೈಲೆಟ್‌ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಇಂದು ಮುಂಜಾನೆ 5.30ಕ್ಕೆ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಪೈಲಟ್‌ಗಳು ಸುಖೋಯ್-30 ವಿಮಾನದಿಂದ ಸುರಕ್ಷಿತವಾಗಿ ಹೊರಬಂದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಂಶಾಬಾದ್ ಏರ್ ಪೋರ್ಟ್'ನಲ್ಲಿ ಗೊಂದಲ, ಪ್ರಯಾಣಿಕರಲ್ಲಿ ಆತಂಕ.

Sat Jan 28 , 2023
ಶಂಶಾಬಾದ್ : ಹೈದರಾಬಾದ್ ಶಂಶಾಬಾದ್ ಏರ್ ಪೋರ್ಟ್’ನಲ್ಲಿ ವಿಮಾನ ಲ್ಯಾಂಡಿಂಗ್ ವಿಚಾರದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ. ಏರ್ಪೋರ್ಟ್’ನಲ್ಲಿ ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ಗಮ್ಯ ತಲುಪಿದೆ ಎಂದುಕೊಂಡಿದ್ದ ಪ್ರಯಾಣಿಕರಿಗೆ ಶಾಕ್ ಕಾದಿತ್ತು. ಲ್ಯಾಂಡಿಂಗ್ ವೇಳೆ ಏಕಾಏಕಿ ವಿಮಾನ ಟೇಕಾಫ್ ಆಗಿದ್ದರಿಂದ ಪ್ರಯಾಣಿಕರು ಗಾಬರಿಗೊಂಡಿದ್ದು, ಸ್ವಲ್ಪ ಹೊತ್ತಿನ ನಂತ್ರ ಪೈಲಟ್ ಮತ್ತೆ ವಿಮಾನವನ್ನ ಸುರಕ್ಷಿತವಾಗಿ ಇಳಿಸಿದರು. ಆಗ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ವೈಜಾಗ್ನಿಂದ ಹೈದರಾಬಾದ್ಗೆ ಹೊರಟು ಅಲ್ಲಿಂದ ಸುರಕ್ಷಿತವಾಗಿ ಟೇಕಾಫ್ […]

Advertisement

Wordpress Social Share Plugin powered by Ultimatelysocial