ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಮಳೆಯಿಂದಾಗಿ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಳೆಯಿಂದಾಗಿ ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚತೊಡಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 57 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಯೋಜನಾ ಪ್ರದೇಶ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ತುಂಗಾ ನದಿ ಪಾತ್ರದಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ಗಾಜನೂರಿನ ತುಂಗಾ ಅಣೆಕಟ್ಟೆಯಿಂದ 46 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದಾಗಿ ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ಮಲೆನಾಡಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾಡಳಿತ ಸಾಗರ ತೀರ್ಥಹಳ್ಳಿ ಹೊಸನಗರ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಮಳೆಯಂದಾಗಿ ತುಂಗೆಯ ಒಡಲು ಭರ್ತಿಯಾಗಿದ್ದು, ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ಸಾಗುವ ತುಂಗಾ ನದಿಯ ಅಚ್ಚುಕಟ್ಟು ಪ್ರದೇಶದ ಜನತೆ ನೆರೆ ಭೀತಿ ಎದುರಿಸುತ್ತಿದ್ದಾರೆ. ಶರಾವತಿ ಕಣಿವೆ ಪ್ರದೇಶದಲ್ಲಿ ಕೂಡ ಉತ್ತಮ ಮಳೆಯಾಗುತ್ತಿದ್ದು, ಲಿಂಗನಮಕ್ಕಿ ಡ್ಯಾಂ ನ ನೀರಿನ ಪ್ರಮಾಣ ಹೆಚ್ಚತೊಡಗಿದೆ.ಗರಿಷ್ಠ 1819 ಅಡಿ ನೀರಿನ ಸಂಗ್ರಹಮಟ್ಟ ಹೊಂದಿರುವ ಲಿಂಗನಮಕ್ಕಿ ಡ್ಯಾಂ ನಲ್ಲಿ 1769 ಅಡಿ ನೀರು ಸಂಗ್ರಹಗೊಂಡಿದೆ. ಲಿಂಗನಮಕ್ಕಿಗೆ ಒಂದೇ ದಿನ 3.75 ಅಡಿ ನೀರು ಹರಿದು ಬಂದಿದೆ

ಕಳದೆರಡು ದಿನಗಳಿಂದ ಹೊಸನಗರ ತಾಲೂಕಿನಾದ್ಯಂತ ವರುಣನ ಆರ್ಭಟ ಜೋರಾಗಿದ್ದು ತಾಲೂಕಿನ ಜನಜೀವನ ಅಸ್ತವ್ಯಸ್ತಗೊಂಡಿದೆ.
ಗುರುವಾರ ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಹೊಸನಗರದಲ್ಲಿ ಅತ್ಯಧಿಕ 32 ಸೆಂಟಿಮೀಟರ್ ಮಳೆಯಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ :
ಹೊಸನಗರ 315.2 ಮಿ.ಮೀ.
ಸಾವೇಹಕ್ಲು : 276 ಮಿ.ಮೀ.
ಹುಲಿಕಲ್ : 256 ಮಿ.ಮೀ.
ಚಕ್ರಾನಗರ : 206 ಮಿ.ಮೀ.
ಬಿದನೂರು ನಗರ : 193 ಮಿ.ಮೀ.
ಯಡೂರು : 192 ಮಿ.ಮೀ.
ಮಾಣಿ : 172 ಮಿ.ಮೀ
ಮಾಸ್ತಿಕಟ್ಟೆ : 164 ಮಿ.ಮೀ
ಲಿಂಗನಮಕ್ಕಿ : 163.2 ಮಿ.ಮೀ
ಹುಂಚ : 104.6 ಮಿ.ಮೀ
ಅರಸಾಳು : 71.6 ಮಿ.ಮೀ.
ರಿಪ್ಪನ್‌ಪೇಟೆ :54.2 ಮಿ.ಮೀ.

ತುಂಗಾ ಜಲಾಶಯ
ದಿನಾಂಕ: 07/07/2022
ಇಂದಿನ ಮಟ್ಟ: 587.48 ಅಡಿ
ಗರಿಷ್ಠ ಮಟ್ಟ : 588.24 ಅಡಿ
ಒಳಹರಿವು: 44720 cusecs
ಹೊರಹರಿವು: 49638 cusecs
ನೀರು ಸಂಗ್ರಹ: 2.815 Tmc
ಸಾಮರ್ಥ್ಯ: 3.24 Tmc
ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24 ಅಡಿ

ಭದ್ರಾ ಜಲಾಶಯ
ದಿನಾಂಕ: 07/07/2022
ಇಂದಿನ ಮಟ್ಟ: 163’9″ ಅಡಿ
ಗರಿಷ್ಠ ಮಟ್ಟ : 186 ಅಡಿ
ಒಳಹರಿವು: 31667 cusecs
ಹೊರಹರಿವು: 139 cusecs
ನೀರು ಸಂಗ್ರಹ: 46.495 Tmc
ಸಾಮರ್ಥ್ಯ: 71.535 Tmc
ಕಳೆದ ವರ್ಷ ಈ ದಿನದ ನೀರು ಸಂಗ್ರಹ 155’6″ ಅಡಿ

ಲಿಂಗನಮಕ್ಕಿ ಜಲಾಶಯ
ದಿನಾಂಕ: 07/07/2022
ಇಂದಿನ ಮಟ್ಟ: 1769.05 ಅಡಿ
ಗರಿಷ್ಠ ಮಟ್ಟ : 1819 ಅಡಿ
ಒಳಹರಿವು: 57638 cusecs
ಹೊರಹರಿವು: 2444.68 cusecs
ನೀರು ಸಂಗ್ರಹ: 38.36 Tmc
ಸಾಮರ್ಥ್ಯ: 151.64 Tmc
ಕಳೆದ ವರ್ಷ ಈ ದಿನ ನೀರು ಸಂಗ್ರಹ: 1784.15 ಅಡಿ
Vo-03

ಮಳೆಯಿಂದ ಹಾನಿ
ಮಳೆ ಆರ್ಭಟ: ಗೋಡೆ ಕುಸಿದು ಮೂರು ದ್ವಿಚಕ್ರ ವಾಹನ ಜಖಂ:
ಮನೆ ಬೀಳುವ ಆತಂಕದಲ್ಲಿ ಕುಟುಂಬಸ್ಥರು..
ಸಾಗರ, ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಸಾಗರ ನಗರಸಭೆ ವ್ಯಾಪ್ತಿಯ ನೆಹರು ನಗರಕ್ಕೆ ಹೋಗುವ ಮಾರ್ಗದ ಟಿವಿಎಸ್ ಶೋರೂಮ್ ಬಳಿ ಪ್ರದೀಪ್ ಎಂಬುವರ ಮನೆಯ ಗೋಡೆ ಕುಸಿದು ಮೂರು ದ್ವಿಚಕ್ರ ವಾಹನ ಜಖಂಗೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಸಾಗರ ತಾಲೂಕಿನಾದ್ಯಂತ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಬುಧುವಾರ ಬೆಳಗ್ಗೆಯಿಂದ ಬಿಡದೆ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಟಿವಿಎಸ್ ಶೋರೂಮ್ ಬಳಿ ಬುಧವಾರ ರಾತ್ರಿ ಪ್ರದೀಪ್ ಎಂಬುವರ ಮನೆಯ ಗೋಡೆ ಬಿದ್ದಿರುವ ರಭಸಕ್ಕೆ ಮನೆಯ ಮುಂದೆ ನಿಲ್ಲಿಸಿದ ಮೂರು ದಿವ್ಚಕ್ರ ವಾಹನ ಸಂಪೂರ್ಣ ಜಖಂಗೊಂಡಿದೆ. ಘಟನೆ ಸಂದರ್ಭದಲ್ಲಿ ಪ್ರದೀಪ್ ಹಾಗೂ ಅವರ ಪತ್ನಿ ಮತ್ತು ಮೂವರು ಚಿಕ್ಕ ಮಕ್ಕಳು ಮನೆಯಲ್ಲಿ ವಾಸವಾಗಿದ್ದು ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತೀರ್ಥಹಳ್ಳಿಯಲ್ಲಿ ಮನೆಯೊಂದರ ಮೇಲೆ ತೆಂಗಿನ ಮರಬಿದ್ದು, ಮನೆ ಜಖಂಗೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲೈಸನ್ಸ್, ಇನ್ಸೂರೆನ್ಸ ಇಲ್ಲದ ವಾಹನಗಳಿಗೆ ಜಪ್ತಿ ಮಾಡಿದ ಪಿ ಎಸ್ ಐ ಪ್ರಕಾಶ್ ರೆಡ್ಡಿ

Thu Jul 7 , 2022
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ದ್ವಿಚಕ್ರ ವಾಹನ ಲೈಸನ್ಸ, ಇನ್ಸೂರೆನ್ಸ ಇಲ್ಲದೆ ಸಾರ್ವಜನಿಕರು ವಾಹನಗಳನ್ನು ಚಲಾಯಿಸುತ್ತದ್ದನ್ನು ಗಮನಿಸಿದ ಮುದಗಲ್ ಠಾಣೆಯ ಪಿ.ಎಸ್,ಐ ಪ್ರಕಾಶ ರೆಡ್ಡಿ ಡಂಬಳ ಮತ್ತು ಸಿಬ್ಬಂದಿಗಳು ಬುದುವಾರ ರಸ್ತೆಗಿಳಿದು ವಾಹನಗಳ ಪರಿಶೀಲನೆಯಲ್ಲಿ ದಾಖಲಾತಿ ಇಲ್ಲದ ವಾಹನಗಳನ್ನು ಜಪ್ತಿ ಮಾಡಿದರು. ಜಪ್ತಿ ಮಾಡಿದ ದ್ವಿಚಕ್ರ ವಾಹನ ಸವಾರರ ಮೇಲೆ ಮೋಟಾರು ವಾಹನ ಕಾಯ್ದೆ ಕ್ರಮ ಜರುಗಿಸಲಾಗುವದು. ಪೊಲೀಸ್ ಇಲಾಖೆಯವರು ವಾಹನ ಮಾಲಿಕರಿಗೆ ಸ್ಥಳದಲ್ಲಿಯೇ ಬ್ರೂಕರ […]

Advertisement

Wordpress Social Share Plugin powered by Ultimatelysocial