ಲೈಸನ್ಸ್, ಇನ್ಸೂರೆನ್ಸ ಇಲ್ಲದ ವಾಹನಗಳಿಗೆ ಜಪ್ತಿ ಮಾಡಿದ ಪಿ ಎಸ್ ಐ ಪ್ರಕಾಶ್ ರೆಡ್ಡಿ

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ದ್ವಿಚಕ್ರ ವಾಹನ ಲೈಸನ್ಸ, ಇನ್ಸೂರೆನ್ಸ ಇಲ್ಲದೆ ಸಾರ್ವಜನಿಕರು ವಾಹನಗಳನ್ನು ಚಲಾಯಿಸುತ್ತದ್ದನ್ನು ಗಮನಿಸಿದ ಮುದಗಲ್ ಠಾಣೆಯ ಪಿ.ಎಸ್,ಐ ಪ್ರಕಾಶ ರೆಡ್ಡಿ ಡಂಬಳ ಮತ್ತು ಸಿಬ್ಬಂದಿಗಳು ಬುದುವಾರ ರಸ್ತೆಗಿಳಿದು ವಾಹನಗಳ ಪರಿಶೀಲನೆಯಲ್ಲಿ ದಾಖಲಾತಿ ಇಲ್ಲದ ವಾಹನಗಳನ್ನು ಜಪ್ತಿ ಮಾಡಿದರು.

ಜಪ್ತಿ ಮಾಡಿದ ದ್ವಿಚಕ್ರ ವಾಹನ ಸವಾರರ ಮೇಲೆ ಮೋಟಾರು ವಾಹನ ಕಾಯ್ದೆ ಕ್ರಮ ಜರುಗಿಸಲಾಗುವದು.

ಪೊಲೀಸ್ ಇಲಾಖೆಯವರು ವಾಹನ ಮಾಲಿಕರಿಗೆ ಸ್ಥಳದಲ್ಲಿಯೇ ಬ್ರೂಕರ ಮೂಲಕ ಇನ್ಸುರೆನ್ಸ ಮಾಡಿಕೊಡಲಾಯಿತು. ಇನ್ಸುರೆನ್ಸ ಮಾಡಿಸದೇ ಇರುವ ವಾಹನ ಮಾಲಿಕರಿಗೆ ಕಾನೂನ ಅಡಿಯಲ್ಲಿ ದಂಡ ವಿದಿಸಲಾಯಿತು.

ಪೊಲೀಸ್ ಇಲಾಖೆ ದಾಖಲಾತಿ ಪರಿಶೀಲನೆ ಶಾಲಾ ಮಕ್ಕಳು ದ್ವಿಚಕ್ರ ವಾಹನಗಳನ್ನು ಚಲಾವಣೆ ಮಾಡುತಿದ್ದು ಇತ್ತೀಚೆಗೆ ವಾಹನ ಅಪಘಾತಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಇದರಿಂದಾಗಿ ಪೊಲೀಸ್ ಇಲಾಖೆಯವರು ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಪ್ರಾಣಾಕ್ಕಾಗಿ ರಸ್ತೆ ನಿಯಮ ಪಾಲಿಸಿ ರಸ್ತೆ ಸುರಕ್ಷಾ ಕ್ರಮಗಳ ಉಲ್ಲಂಘನೆಯಿಂದ ಆಗುವ ಅಪಘಾತಗಳು ಸಾಕಷ್ಟು ಸಾವು ನೋವು ಕಂಡು ಬಂದಿದ್ದು, ಅದನ್ನು ತಡೆಯುವ ಉದ್ದೆಶದಿಂದ ಇಂದು ಕಾರ್ಯಚರಣೆ ನಡೆಸಿ ವಾಹನ ಜಪ್ತಿ ಮಾಡುವ ಮೂಲಕ ಎಚ್ಚರಿಸುತ್ತಿದ್ದೇವೆ ವಾಹನ ಸವಾರರು ಮಾನ ಪ್ರಾಣ ಹಿತದೃಷ್ಟಿಯಿಂದ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕೆಂದು ಹೇಳಿದರು. ಪೊಲೀಸ್ ಠಾಣಾ ಸಿಬ್ಬಂದಿ ಹನುಮಂತ, ಕನಕಗೌಡ, ಅಮರೇಶ, ಮಹಿಳಾ ಪೊಲೀಸ್ ಹಸಿನಾಬಾನು ಇನ್ನಿತರರು ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Букмекерская Контора Mostbet : Бонус 100 Рублей

Thu Jul 7 , 2022
Обзор Mostbet Content Экспресс В Мостбет: Особенности Формата Пари В Букмекерской Конторе Преимущества Бк Мостбет Описание Mostbet (мостбет) Обзор Сайта Мостбет В Узбекистане – Мошенники Или Нет? Вывод Денег На Электронные Кошельки Акции И Бонусы Остались Вопросы? Mostbet Partners — Отзывы, Обзор Партнерской Программы Способы Вывода Mostbet Как Вывести Деньги […]

Advertisement

Wordpress Social Share Plugin powered by Ultimatelysocial