ಮಯಂಕ್ ಪಡೆಗೆ ಅಗ್ರಸ್ಥಾನ ಉಳಿಸಿಕೊಳ್ಳುವ ಛಲ.

 

ಬೆಂಗಳೂರು: ಮಯಂಕ್ ಅಗರವಾಲ್ ನಾಯಕತ್ವದ ಬಳಗವು ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನವನ್ನು ಎದುರಿಸಲಿದೆ.ಸದ್ಯ ಸಿ ಗುಂಪಿನ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಕರ್ನಾಟಕದ ಖಾತೆಯಲ್ಲಿ 19 ಅಂಕಗಳಿವೆ.ಎರಡನೇ ಸ್ಥಾನದಲ್ಲಿರುವ ರಾಜಸ್ಥಾನದ ಬಳಿ 14 ಅಂಕಗಳಿವೆ. ಕ್ವಾರ್ಟರ್‌ಫೈನಲ್ ತಲುಪಬೇಕಾದರೆ ತಂಡವು ತನ್ನ ಮೊದಲ ಸ್ಥಾನವನ್ನು ಕಾಯ್ದುಕೊಳ್ಳುವುದು ಮುಖ್ಯ. ರಾಜಸ್ಥಾನ ಎದುರು ಸೇರಿದಂತೆ ಇನ್ನೂ ಮೂರು ಪಂದ್ಯಗಳನ್ನು ಮಯಂಕ್ ಬಳಗ ಆಡಬೇಕಿದೆ.ವೇಳಾಪಟ್ಟಿಯ ಪ್ರಕಾರ ಕರ್ನಾಟಕ ತಂಡವು ತವರಿನಲ್ಲಿ ಆಡುತ್ತಿರುವ ಕೊನೆಯ ಲೀಗ್ ಪಂದ್ಯ ಇದಾಗಲಿದೆ. ಮುಂದಿನ ಸುತ್ತುಗಳಲ್ಲಿ ಕೇರಳವನ್ನು ತಿರುವನಂತಪುರದಲ್ಲಿ ಮತ್ತು ಜಾರ್ಖಂಡ್ ತಂಡವನ್ನು ರಾಂಚಿಯಲ್ಲಿ ಎದುರಿಸಲಿದೆ.ಕಳೆದ ನಾಲ್ಕು ಪಂದ್ಯಗಳಲ್ಲಿ ಎರಡು ಗೆದ್ದು ಎರಡರಲ್ಲಿ ಡ್ರಾ ಮಾಡಿಕೊಂಡಿದೆ. ಇದರಲ್ಲಿ ಮೂರು ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದವು.ಕಳೆದ ಪಂದ್ಯದಲ್ಲಿ ಛತ್ತೀಸಗಢ ತಂಡದ ಕಠಿಣ ಸವಾಲು ಎದುರಿಸುವಲ್ಲಿ ಮಯಂಕ್ ಬಳಗವು ಯಶಸ್ವಿಯಾಯಿತು. ಐದು ವಿಕೆಟ್ ಗೊಂಚಲು ಗಳಿಸಿದ ವೈಶಾಖ ವಿಜಯಕುಮಾರ್ ಮತ್ತು ವಿದ್ವತ್ ಕಾವೇರಪ್ಪ ಅವರ ಆಟ ಪ್ರಮುಖವಾಯಿತು.ಅಲ್ಲದೇ ನಾಯಕ ಮಯಂಕ್ ಅಗರವಾಲ್ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ ಶತಕ, ಸಮರ್ಥ್ ಅರ್ಧಶತಕ ಹಾಗೂ ಯುವಪ್ರತಿಭೆ ನಿಕಿನ್ ಜೋಸ್ ಎರಡೂ ಇನಿಂಗ್ಸ್‌ಗಳಲ್ಲಿ ತೋರಿದ ದಿಟ್ಟ ಆಟ ಗಮನ ಸೆಳೆದಿತ್ತು.ಆದರೆ, ಅನುಭವಿ ಮನೀಷ್ ಪಾಂಡೆ, ವಿಕೆಟ್‌ಕೀಪರ್ ಬ್ಯಾಟರ್ ಬಿ.ಆರ್. ಶರತ್ ಅವರ ಅಸ್ಥಿರತೆ ಬ್ಯಾಟಿಂಗ್ ವಿಭಾಗದಲ್ಲಿ ಚಿಂತೆಯ ವಿಷಯಗಳಾಗಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ಯಾ ರಾಶಿ ಭವಿಷ್ಯ (Tuesday, January 10, 2023)

Tue Jan 10 , 2023
ಸಂತಸದ ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಆರಾಮ ಮತ್ತು ಸಂತೋಷ ತರುತ್ತದೆ. ಇಂದು ನೀವು ನಿಮ್ಮ ಮಕ್ಕಳ ಕಾರಣದಿಂದ ಆರ್ಥಿಕ ಲಬಹವನ್ನು ಪಡೆಯುವ ಸಾಧ್ಯತೆ ಕಂಡುಬರುತ್ತಿದೆ. ಇದರಿಂದ ನೀವು ತುಂಬಾ ಸಂತೋಷಪಡುತ್ತೀರಿ. ನಿಮ್ಮ ಮಕ್ಕಳು ನಿಮ್ಮ ಉದಾರ ವರ್ತನೆಯ ದುರುಪಯೋಗ ಮಾಡಲು ಬಿಡಬೇಡಿ. ಇಂದಿನ ದಿನ ಪ್ರೀತಿಯ ಬಣ್ಣಗಳಲ್ಲಿ ಮುಳುಗಿರುತ್ತದೆ ಆದರೆ ರಾತ್ರಿಯ ಸಮಯದಲ್ಲಿ ಯಾವುದೊ ಹಳೆಯ ವಿಷ್ಯದ ಬಗ್ಗೆ ನೀವು ಜಗಳವಾಡಬಹುದು. ಇಂದು ಹೆಚ್ಚಿನ ಸಾಧನೆ ಮತ್ತು […]

Advertisement

Wordpress Social Share Plugin powered by Ultimatelysocial