ಕ್ರಿಕೆಟಿಗ ಶುಭಮನ್ ಜೊತೆ ಡೇಟಿಂಗ್ ಮಾಡುತ್ತಿಲ್ಲ ಎಂದ ನಟಿ ಸೋನಮ್ ಬಾಜ್ವಾ.

 

ಟೀಮ್ ಇಂಡಿಯಾ ಕ್ರಿಕೆಟಿಗ ಶುಭಮನ್ ಗಿಲ್ ಆಟಕ್ಕಿಂತ ಡೇಟಿಂಗ್ ವಿಚಾರವೇ ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಗಿಲ್ ಜೊತೆ ದಿನಕ್ಕೊಂದು ಹುಡುಗಿಯ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಶುಭಮನ್ ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದಾನೋ ಗೊತ್ತಿಲ್ಲ.

ಆದರೆ, ಹೊಸ ಹೊಸ ಹುಡುಗಿಯರ ಹೆಸರು ಮಾತ್ರ ಕೇಳಿ ಬರುತ್ತಲೇ ಇರುತ್ತದೆ.

ಮೊನ್ನೆಯಷ್ಟೇ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಪೂರಕ ಎನ್ನುವಂತೆ ಈ ಇಬ್ಬರೂ ಸುತ್ತಾಡುವ ಫೋಟೋಗಳು ಕಂಡು ಬಂದವು. ರೆಸ್ಟೋರೆಂಟ್ ಸೇರಿದಂತೆ ನಾನಾ ಕಡೆ ಸಾರಾ ಮತ್ತು ಗಿಲ್ ಒಟ್ಟಿಗೆ ಇದ್ದ ಫೋಟೋಗಳು ವೈರಲ್ ಆದವು. ಹಾಗಾಗಿ ಇಬ್ಬರೂ ಡೇಟಿಂಗ್ ನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು.

ಇದೀಗ ಗಿಲ್ ಜೊತೆ ಮತ್ತೋರ್ವ ಹುಡುಗಿಯ ಹೆಸರು ಕೇಳಿ ಬಂದಿದೆ. ಪಂಜಾಬಿ ನಟಿ ಸೋನಮ್ ಬಾಜ್ವಾ ಜೊತೆ ಕ್ರಿಕೆಟಿಗ ಗಿಲ್ ಲವ್ವಿಡವ್ವಿ ಶುರು ಮಾಡಿದ್ದಾರಂತೆ. ಅದಕ್ಕೆ ಸಾಕ್ಷಿ ಎನ್ನುವಂತೆ ಇವರಿಬ್ಬರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತಿವೆ. ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಆಚೆ ಬರುತ್ತಿದ್ದಂತೆಯೇ ಅದಕ್ಕೆ ಸೋನಮ್ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಗಿಲ್ ಜೊತೆ ನಾನು ಡೇಟಿಂಗ್ ಮಾಡುತ್ತಿಲ್ಲ. ಸುಖಾಸುಮ್ಮನೆ ರೂಮರ್ ಹಬ್ಬಿಸಬೇಡಿ ಎಂದು ಸೀನಮ್ ಕೇಳಿಕೊಂಡಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಣದ್ರಾಕ್ಷಿಯ ಉಪಯೋಗಗಳು.

Sun Jan 22 , 2023
ಒಣದ್ರಾಕ್ಷಿ ಅನಾದಿಕಾಲದಿಂದಲೂ ಆಯುರ್ವೇದ ಪದ್ಧತಿಯಲ್ಲಿ ಔಷಧೀಯವಾಗಿ ಬಳಸುವುದು ರೂಢಿಯಲ್ಲಿದೆ. ದ್ರಾಕ್ಷಿಯು ಸಿಹಿರಸವುಳ್ಳದ್ದು, ಶೀತಲವಾದುದು, ಮಲವನ್ನು ಸಡಿಲಿಸುವ ಗುಣವಿದೆ. ಬಾಯಾರಿಕೆ, ಬಳಲಿಕೆ, ಹೊಟ್ಟೆಉರಿಯನ್ನು ಉಪಶಮನ ಮಾಡಬಲ್ಲದು. ರಕ್ತಪಿತ್ತವನ್ನು ಶಮನಗೊಳಿಸುತ್ತದೆ. ಶರೀರಕ್ಕೆ ಬಲವನ್ನು, ಕಾಂತಿಯನ್ನು ಕೊಡುತ್ತದೆ. ಇದು ತೇವಾಂಶ, ಸಸಾರಜನಕ, ಶರ್ಕರ ಪಿಷ್ಠ, ಕಬ್ಬಿಣ, ಸುಣ್ಣ, ರಂಜಕ, ಎ ಮತ್ತು ಸಿ ಜೀವಸತ್ವಗಳನ್ನು ಹೊಂದಿದೆ. ದ್ರಾಕ್ಷಿಯ ಹಣ್ಣಿನಲ್ಲಿ ಅದ್ಭುತವಾದ ಗುಣವಿದೆ, ರಕ್ತಮಾಂಸಗಳಿಗೆ ಪೋಷಕವಾಗಿರುವ ಧಾತುವು ಶರೀರದಲ್ಲಿ ಸಂಪೂರ್ಣವಾಗಿ ಹುಟ್ಟದೆ ಬಲವು ಕುಂದಿರುವಾಗ, ದ್ರಾಕ್ಷಿಯು […]

Advertisement

Wordpress Social Share Plugin powered by Ultimatelysocial