ಒಣದ್ರಾಕ್ಷಿಯ ಉಪಯೋಗಗಳು.

ಒಣದ್ರಾಕ್ಷಿ ಅನಾದಿಕಾಲದಿಂದಲೂ ಆಯುರ್ವೇದ ಪದ್ಧತಿಯಲ್ಲಿ ಔಷಧೀಯವಾಗಿ ಬಳಸುವುದು ರೂಢಿಯಲ್ಲಿದೆ. ದ್ರಾಕ್ಷಿಯು ಸಿಹಿರಸವುಳ್ಳದ್ದು, ಶೀತಲವಾದುದು, ಮಲವನ್ನು ಸಡಿಲಿಸುವ ಗುಣವಿದೆ. ಬಾಯಾರಿಕೆ, ಬಳಲಿಕೆ, ಹೊಟ್ಟೆಉರಿಯನ್ನು ಉಪಶಮನ ಮಾಡಬಲ್ಲದು. ರಕ್ತಪಿತ್ತವನ್ನು ಶಮನಗೊಳಿಸುತ್ತದೆ. ಶರೀರಕ್ಕೆ ಬಲವನ್ನು, ಕಾಂತಿಯನ್ನು ಕೊಡುತ್ತದೆ. ಇದು ತೇವಾಂಶ, ಸಸಾರಜನಕ, ಶರ್ಕರ ಪಿಷ್ಠ, ಕಬ್ಬಿಣ, ಸುಣ್ಣ, ರಂಜಕ, ಎ ಮತ್ತು ಸಿ ಜೀವಸತ್ವಗಳನ್ನು ಹೊಂದಿದೆ.
ದ್ರಾಕ್ಷಿಯ ಹಣ್ಣಿನಲ್ಲಿ ಅದ್ಭುತವಾದ ಗುಣವಿದೆ, ರಕ್ತಮಾಂಸಗಳಿಗೆ ಪೋಷಕವಾಗಿರುವ ಧಾತುವು ಶರೀರದಲ್ಲಿ ಸಂಪೂರ್ಣವಾಗಿ ಹುಟ್ಟದೆ ಬಲವು ಕುಂದಿರುವಾಗ, ದ್ರಾಕ್ಷಿಯು ಈ ರಸ ಧಾತುವನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಶರೀರಕ್ಕೆ ಬಲವನ್ನು ಕೊಡುತ್ತದೆ.
ಯಾರಾದರೂ ನಿಶ್ಯಕ್ತಿಯಿಂದ ಬಳಲುತ್ತಿದ್ದರೆ ಅಥವಾ ಖಾಯಿಲೆಯಿಂದ ಎದ್ದಾಗ ಶಕ್ತಿಯು ಕುಂದಿದ್ದರೆ ಅಂತಹವರು ಒಣದ್ರಾಕ್ಷಿಯನ್ನು ಪ್ರತಿನಿತ್ಯ ಸೇವಿಸುತ್ತಿದ್ದರೆ, ಶರೀರದಲ್ಲಿ ಶಕ್ತಿಯು ವಿದ್ಯುತ್ ರೀತಿಯಲ್ಲಿ ಪ್ರವಹಿಸುತ್ತದೆ.
ವಿಪರೀತವಾಗಿ ಊಟಮಾಡಿ ಹೊಟ್ಟೆಭಾರವಾಗಿದ್ದಾಗ, ಸ್ವಲ್ಪ ಒಣದ್ರಾಕ್ಷಿಯನ್ನು ತಿಂದರೆ, ಸ್ವಲ್ಪ ಹೊತ್ತಿನಲ್ಲೇ ಹೊಟ್ಟೆಯು ಹಗುರವಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೋಡಂಬಿ(ಗೇರುಬೀಜ)ಯ ಉಪಯೋಗಗಳು.

Sun Jan 22 , 2023
ನಾವು ಉಪಯೋಗಿಸುವ ಗೋಡಂಬಿ, ಗೇರುಹಣ್ಣಿಗೆ ಅಂಟಿಕೊಂಡಂತೆ ಇರುತ್ತದೆ. ಗೇರುಹಣ್ಣು ಹಳದಿ ಹಾಗೂ ಕೆಂಪು ಬಣ್ಣಗಳಲ್ಲಿ ಬಿಡುತ್ತದೆ. ಗೇರುಬೀಜ ಈ ಹಣ್ಣಿಗೆ ಅಂಟಿಕೊಂಡಿರುತ್ತದೆ. ಈ ಗೇರಿನ ಒಳಗಡೆ ಇರುವುದು ಗೇರು ಪೊಪ್ಪು. ಇದನ್ನೇ ನಾವು ಗೋಡಂಬಿ ಎಂದು ಕರೆಯುವುದು. ಇದರ ಮರ, ಬೇರು, ತೊಗಟೆ, ಎಲೆ, ಹೂ, ಹಣ್ಣು, ಎಲ್ಲವೂ ಔಷಧೀಯವಾಗಿ ಬಳಕೆಯಾಗುತ್ತದೆ. ಇದರ ಬೇರು ವಿರೇಚನ ಗುಣವುಳ್ಳದ್ದಾಗಿದ್ದು, ತೊಗಟೆಯಿಂದ ಬರುವ ಕೆಂಪುರಸವು ತುರಿಕೆಯನ್ನು ನಿಲ್ಲಿಸುವ ಶಕ್ತಿಯುಳ್ಳದ್ದಾಗಿದೆ. ಇದು ಹೆಚ್ಚು ಕ್ಯಾಲೋರೀಸ್‌ಗಳನ್ನು […]

Advertisement

Wordpress Social Share Plugin powered by Ultimatelysocial