KL RAHUL:ನಾನು ಗಂಟೆಗಟ್ಟಲೇ ಪ್ರಾಕ್ಟೀಸ್ ಮಾಡಲ್ಲ;

ನಾನು ಗಂಟೆಗಟ್ಟಲೇ ಪ್ರಾಕ್ಟೀಸ್ ಮಾಡಲ್ಲ kl-rahul 

 ಹೌದು ಇದು ನಿಜವಾಗಿಯೂ ವಿಶೇಷವಾಗಿದೆ. ಪ್ರತಿ ಶತಮಾನವು ನಮ್ಮೊಂದಿಗೆ ಸಂಪೂರ್ಣ ಹೊಸ ಅನುಭವವನ್ನು ಹಂಚಿಕೊಳ್ಳುತ್ತದೆ.

ಶತ  ವನ್ನು ಸಾಧಿಸಿದಾಗ ಅನೇಕ ಭಾವನೆಗಳು ನಮ್ಮನ್ನು ಸುತ್ತುವರೆ ಯುತ್ತ ವೆ.

6-7 ಗಂಟೆಗಳ ಕಾಲ ಕ್ರೀಸ್ ನಲ್ಲಿ ನಿಂತು ಈ ರೀತಿಯ ಸ್ಮರಣೀಯ ಇನ್ನಿಂಗ್ಸ್ ಆಡುತ್ತಿರುವುದು ನಿಜಕ್ಕೂ ವಿಶೇಷ ‘ ಎಂದು ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಡಿಸೆಂಬರ್ 26 ರಿಂದ ಆರಂಭವಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡಿದರು.

ಮತ್ತು ಕೆಎಲ್ ರಾಹುಲ್ ಅದ್ಭುತ ಶತಕದೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

248 ಎಸೆತಗಳನ್ನು ಎದುರಿಸಿದ ಅವರು 122 ರನ್ ಗಳಿಸಿ ಅಜೇಯರಾಗುಳಿ ದ್ದಾರೆ. ಈ ಶತಕದ ಬಗ್ಗೆ ರಾಹುಲ್ ಮನಃ ಬಿಚ್ಚಿ ಮಾತನಾಡಿದ್ದಾರೆ.

ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಿ ದ್ದೇವೆ .

 ಅಭ್ಯಾಸದಲ್ಲಿ ನಾವು ಅಂದುಕೊಂಡಿದ್ದನ್ನೆಲ್ಲಾ ಆಚರಣೆಗೆ ತಂದಿದ್ದೇವೆ. ಮೊದಲ ದಿನ ಎಲ್ಲರೂ ಚೆನ್ನಾಗಿ ಆಡಿದರು.

ವಾಸ್ತವವಾಗಿ ನಾನು ಗಂಟೆಗಟ್ಟಲೆ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾ  ಲ್ಲ. ಆದರೂ ಹೇಗೆ ಆಡಬೇಕು ಇನ್ನಿಂಗ್ಸ್ ಆರಂಭಿಸುವುದು ಹೇಗೆ ಹೇಗೆ ಮುಂದುವರಿಸಬೇಕು ಎಂಬ ಚಿಂತನೆಯಲ್ಲಿ ಹೆಚ್ಚು ಸಮಯ ಕಳೆಯುತ್ತೇನೆ ಎಂದು ರಾಹುಲ್ ತಿಳಿಸಿದ್ದಾರೆ.

ನಾನು ಸೆಂಚೂರಿ ಮಿಸ್ ಮಾಡಿಕೊಳ್ಳಲು ಸಿದ್ಧವಿರಲಿಲ್ಲ. 99 ರಲ್ಲಿದ್ದಾಗ . ಸ್ಪಿನ್ನರ್ ಬೌಲಿಂಗ್ ಮಾಡಿದ್ದರಿಂದ.

ತುಸು ಹೆಚ್ಚು ಜಾಗರೂಕತೆಯಿಂದ ಆಡಿದೆ. ಒಳ್ಳೆಯ ಅವಕಾಶವನ್ನು ಮಿಸ್ ಮಾಡಿಕೊಳ್ಳಬಾರದು ಅಲ್ವಾ.

ಒಂದು ಸಿಂಗಲ್ ಗಳಿಸಿದ್ರೆ ಸೆಂಚೂರಿ. ಶಾಟ್ ಹೊಡೆಯಬೇಕು ಅಂತ ಅನಿಸಿದ್ರೂ ನಾನು ಶಾಂತವಾಗಿದ್ದೆ.

ಅಸಲಿಗೆ ನಾನು ಹೇಗೆ ಆ ರೀತಿ ಶಾಂತನಿದ್ದೆ ಅಂತ ಅರ್ಥವಾಗಲಿಲ್ಲ.. ಆದ್ರೂ ಈ ಇನಿಂ ಗ್ಸ್ ನಿಂದ ನನಗೆ ತೃಪ್ತಿ ಮತ್ತು ಸಂತಸವಾಗಿದೆ ಎಂದು ರಾಹುಲ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಮನೆಮದ್ದು

Tue Dec 28 , 2021
ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ತಯಾರಿಸಿದ ಔಷಧದಿಂದ, ಖರ್ಚಿಲ್ಲದೇ ಹಾಗೂ ಅಡ್ಡಪರಿಣಾಗಳಿಲ್ಲದೇ, ತ್ವಚೆಯ ಆರೈಕೆ ಮಾಡಿಕೊಳ್ಳಬಹುದು. ಇಂಥ ಮನೆಮದ್ದಿನ ಕುರಿತು ಬೆಂಗಳೂರಿನ ಯೋಗಶಿಕ್ಷಕಿ ರಜನಿ ಶ್ರೀಕಾಂತ ಮಿರ್ಜಿ ಒಂದಿಷ್ಟು ಟಿಪ್ಸ್‌ಗಳನ್ನು ನೀಡಿದ್ದಾರೆ. 1. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ. ಅದಕ್ಕೆ ಅರ್ಧ ಟೀ ಚಮಚ ಅರಿಸಿನ, ಹಾಲಿನ ಕೆನೆ ಅಥವಾ ಹಾಲಿನಲ್ಲಿ 10 ನಿಮಿಷ ನೆನಸಿಟ್ಟು, ರಾತ್ರಿ ಮುಖ, ಕೈ, ಕುತ್ತಿಗೆ ಭಾಗಕ್ಕೆ ಹಚ್ಚಿಕೊಳ್ಳಬೇಕು. ಒಂದು ತಾಸು […]

Advertisement

Wordpress Social Share Plugin powered by Ultimatelysocial