ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಮಾತು

ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್ ಅವರ ಅಮೋಗ ಜೊತೆಯಾಟದಿಂದಾಗಿ ಟೀಮ್ ಇಂಡಿಯಾ ಅದ್ಭುತ ಹೋರಾಟವನ್ನು ನಡೆಸಿತಾದರೂ ತಂಡವಾಗಿ ಲಂಕಾ ವಿರುದ್ಧ ಶರಣಾಗಿದೆ.ಈ ಪಂದ್ಯದ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸೋಲಿಗೆ ಕಾರಣವಾದ ಪ್ರಮುಖ ಅಂಶವನ್ನು ಬೊಟ್ಟು ಮಾಡಿದ್ದಾರೆ. ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಪವರ್‌ಪ್ಲೇ ಅವಧಿಯಲ್ಲಿ ಕಳಪೆಯಾಗಿ ಆಡಿದ್ದು ಇದುವೇ ನಮಗೆ ಆಘಾತ ನೀಡತು ಎಂದಿದ್ದಾರೆ. ಅಲ್ಲದೆ ಕೆಲ ಮೂಲಭೂತ ತಪ್ಪುಗಳನ್ನು ನಾವು ಮಾಡಿದ್ದು ಈ ಹಂತದಲ್ಲಿ ಅಂಥಾ ತಪ್ಪುಗಳು ನಡೆಯಬಾರದು ಎಂದಿದ್ದಾರೆ. ಅರ್ಷ್‌ದೀಪ್ ಸಿಂಗ್ ಅವರ ನೋಬಾಲ್ ಉದ್ದೇಶಿಸಿ ಹಾರ್ದಿಕ್ ಪಾಂಡ್ಯ ಈ ಸಂದರ್ಭದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.ನೋಬಾಲ್ ಎಸೆಯುವುದು ಅಪರಾಧ”ನಿಮಗೆ ಕೆಟ್ಟ ದಿನಗಳು ಇರಬಹುದು. ಆದರೆ ಮೂಲಭೂತ ಸಂಗತಿಗಳನ್ನು ನೀವು ಬಿಟ್ಟುಬಿಡಬಾರದು. ಇಂಥಾ ಹಂತದಲ್ಲಿ ಅದು ಬಹಳ ಕಠಿಣವಾಗುತ್ತದೆ” ಎಂದು ಅರ್ಶ್‌ದೀಪ್ ಸಿಂಗ್ ನೋ ಬಾಲ್ ಎಸೆದ ವಿಚಾರವಾಗಿ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ. ಮುಂದುವರಿದ ಹಾರ್ದಿಕ್ “ಈ ಹಿಂದೆ ಕೂಡ ಅವರು ನೋ ಬಾಲ್‌ಗಳನ್ನು ಎಸೆದಿದ್ದಾರೆ. ಇದು ಆರೋಪ ಮಾಡುವುದಲ್ಲ, ಆದರೆ ನೋ ಬಾಲ್ ಎಸೆಯುವುದು ದೊಡ್ಡ ಅಪರಾಧ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಸೈಟ್ ಗಾಗಿ ಮಂಡ್ಯ ಪೊಲೀಸರ ಫೈಟ್.'

Fri Jan 6 , 2023
ನ್ಯಾಯ ಬೇಕು ನ್ಯಾಯ, ನಮಗೆ ನ್ಯಾಯ ಕೊಡಿಸಿ ಪೊಲೀಸರಿಂದ ಆಗ್ರಹ. ಜನರಿಗೆ ನ್ಯಾಯ ಕೊಡಿಸೊ ಪೊಲೀಸರೇ ನ್ಯಾಯಕ್ಕಾಗಿ ಅಲೆದಾಟ. ಅಂಬರೀಶ್ ಆಪ್ತನಿಂದ ಪೊಲೀಸರಿಗೆ ಅನ್ಯಾಯದ ಆರೋಪ.? ಅಮರಾವತಿ ಡೆವಲಪರ್ಸ್ ವಿರುದ್ದ ಪೊಲೀಸರ ಆಕ್ರೋಶ. ಅಮರಾವತಿ ಚಂದ್ರಶೇಖರ್ ಒಡೆತನದ ಅಮರಾವತಿ ಡೆವಲಪರ್ಸ್. ಅಮರಾವತಿ ಚಂದ್ರಶೇಖರ್, ಅಂಬರೀಶ್ ಆಪ್ತ,ಕಾಂಗ್ರೆಸ್ ಮುಖಂಡ. ಅಂಬರೀಶ್ ಆಪ್ತ ಅಮರಾವತಿ ಚಂದ್ರಶೇಖರ್ ಬಳಿ ಸೈಟ್ ಗಾಗಿ ಫೈಟ್. ಕಳೆದ 12 ವರ್ಷಗಳಿಂದ ನಿವೇಶನಕ್ಕಾಗಿ ಪರದಾಡ್ತಿರೊ ಪೊಲೀಸರು. ಮಂಡ್ಯ ತಾಲೂಕಿನ […]

Advertisement

Wordpress Social Share Plugin powered by Ultimatelysocial