ಈ ಹಿನ್ನೆಲೆ ಡಾನ್ಸರ್ಸ್ ಈ‌ಗ ಬಾಲಿವುಡ್‌ ಸ್ಟಾರ್‌ ಆಗಿದ್ದಾರೆ

ನೃತ್ಯ ನಮ್ಮ ಬದುಕಿನ ಮಾರ್ಗಗಳಲ್ಲೊಂದು. ಬಾಲಿವುಡ್ ಗಂತೂ ಡಾನ್ಸ್ ಅಂದ್ರೆ ಜೀವವಿದ್ದಂತೆ. ಎಷ್ಟೋ ನಟ, ನಟಿಯರು ಡಾನ್ಸ್ ಮೂಲಕವೇ ಬಿ ಟೌನ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೊಂದಷ್ಟು ಮಂದಿ ಡಾನ್ಸ್ ಮೂಲಕ ಎಂಟ್ರಿ ಕೊಟ್ಟು ದೊಡ್ಡ ಸ್ಟಾರ್ ಆಗಿದ್ದಾರೆ. ಅವರು ಯಾರು ಅನ್ನೋದನ್ನು ನೋಡೋಣ.

ಶಾಹಿದ್ ಕಪೂರ್ : ನಟ ಶಾಹಿದ್ ಕಪೂರ್ ಅವರ ಡಾನ್ಸ್ ಮೂವ್ಸ್ ಅನ್ನು ಮೆಚ್ಚಿಕೊಳ್ಳದವರೇ ಇಲ್ಲ. ಈ ಸ್ಟಾರ್ ನಟ ಕೂಡ ಹಿನ್ನೆಲೆ ಡಾನ್ಸರ್ ಆಗಿಯೇ ಬಾಲಿವುಡ್ ಪ್ರವೇಶಿಸಿದ್ದರು. ‘ದಿಲ್ ತೋ ಪಾಗಲ್ ಹೈ’ ಚಿತ್ರದಲ್ಲಿ ಶಾಹಿದ್ ಬ್ಯಾಕ್ ಗ್ರೌಂಡ್ ಡಾನ್ಸರ್ ಆಗಿದ್ದರು.

ರೆಮೋ ಡಿಸೋಜಾ : ಸದ್ಯ ಬಹು ಬೇಡಿಕೆಯ ಕೊರಿಯೋಗ್ರಾಫರ್ ಅಂದ್ರೆ ರೆಮೋ ಡಿಸೋಜಾ. ಇವರು ಕೂಡ ಕೊರಿಯೋಗ್ರಾಫರ್ ಆಗಿ ಬಾಲಿವುಡ್ ಪ್ರವೇಶಿಸಿರಲಿಲ್ಲ. ‘ಪರ್ದೇಸ್’ ಚಿತ್ರದಲ್ಲಿ ಹಿನ್ನೆಲೆ ಡಾನ್ಸರ್ ಆಗಿ ಕಾಣಿಸಿಕೊಂಡಿದ್ರು.

 ನೀತು ಚಂದ್ರ : ಈ ನಟಿ ಕೂಡ ‘ಮೇರಾ ಬಾಬು ಚೈಲ್ ಚಬೀಲಾ’ ಎಂಬ ಹಾಡಿನಲ್ಲಿ ಕಾಣಿಸಿಕೊಂಡಿದ್ದಳು. ಅದರಲ್ಲಿ ಸೋಫಿ ಚೌಧರಿ ಕೂಡ ಸ್ಟೆಪ್ ಹಾಕಿದ್ದರು.

 ಇಶಾ ಶರ್ವಾಣಿ : ಇಶಾ ಅದ್ಭುತ ನೃತ್ಯಗಾತಿ. ‘ತಾಲ್’ ಚಿತ್ರದಲ್ಲಿ ಇಶಾ ಶರ್ವಾಣಿ ಹಿನ್ನೆಲೆ ಡಾನ್ಸರ್ ಆಗಿದ್ದರು. ನಂತರ ಇಶಾಗೆ ನಾಯಕಿಯಾಗಿ ನಟಿಸುವ ಚಾನ್ಸ್ ಕೂಡ ಸಿಕ್ಕಿತ್ತು.

 ಫರಾ ಖಾನ್ : ಹಿಂದಿ ಚಿತ್ರರಂಗದ ಜನಪ್ರಿಯ ಕೊರಿಯೋಗ್ರಾಫರ್ ಫರಾ ಖಾನ್. ಆದ್ರೆ ಅವರ ಜರ್ನಿ ಕೂಡ ಆರಂಭವಾಗಿದ್ದು ಒಬ್ಬ ಡಾನ್ಸರ್ ಆಗಿ. ‘ಹಮ್ ಹೈ ನೌಜವಾನ್’ ಹಾಡಿನಲ್ಲಿ ಫರಾ ಹಿನ್ನೆಲೆ ನೃತ್ಯಗಾತಿಯಾಗಿದ್ದರು.

 ಡೈಸಿ ಶಾ : ಸಲ್ಮಾನ್ ಖಾನ್ ಚಿತ್ರದಲ್ಲಿ ಹಿನ್ನೆಲೆ ಡಾನ್ಸರ್ ಆಗಿದ್ದ ಡೈಸಿ ಶಾಗೆ ಬಾಲಿವುಡ್ ನಲ್ಲಿ ಚಾನ್ಸ್ ಸಿಕ್ಕಿತ್ತು. 2014ರಲ್ಲಿ ಸಲ್ಲು ಅಭಿನಯದ ‘ಜೈ ಹೋ’ ಚಿತ್ರದಲ್ಲಿ ಡೈಸಿ ನಾಯಕಿಯಾಗಿ ನಟಿಸಿದ್ದಾರೆ. ಇದಕ್ಕೂ ಮುನ್ನ ‘ತೇರೆ ನಾಮ್’ ಚಿತ್ರದಲ್ಲಿ ಡೈಸಿ ಹಿನ್ನೆಲೆ ಡಾನ್ಸರ್ ಆಗಿದ್ದರು.

 ದಿಯಾ ಮಿರ್ಜಾ : ದಿಯಾ ಮಿರ್ಜಾ ಕೂಡ ಮೊದಲು ಹಿನ್ನೆಲೆ ಡಾನ್ಸರ್ ಆಗಿ ಕೆಲಸ ಮಾಡಿದ್ದಾರೆ. ದಕ್ಷಿಣ ಭಾರತದ ಹಾಡು ‘ಏನ್ ಸ್ವಾಸಾ ಕಾಟ್ರೆ’ ಹಾಡಿನಲ್ಲಿ ದಿಯಾ ಸೊಂಟ ಬಳುಕಿಸಿದ್ದರು.

 ಅರ್ಶದ್ ವಾರ್ಸಿ : ಕಾಮಿಡಿ ಆಯಕ್ಟಿಂಗ್ ಮೂಲಕವೇ ಗಮನ ಸೆಳೆದ ನಟ ಅರ್ಶದ್ ವಾರ್ಸಿ. ನಟನಾಗುವ ಮುನ್ನ ಅವರು ಕೊರಿಯೋಗ್ರಾಫರ್ ಆಗಿದ್ದರು. ‘ಆಗ್ ಸೆ ಖೇಲೇಂಗೆ’ ಚಿತ್ರದ ‘ಹೆಲ್ಪ್ ಮಿ’ ಹಾಡಿನಲ್ಲಿ ಅರ್ಷದ್ ಕಾಣಿಸಿಕೊಂಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಕೆ. ರಘುಪತಿ ಭಟ್‌ ನೇತೃತ್ವದಲ್ಲಿ!

Thu Feb 17 , 2022
ಬೆಂಗಳೂರು:ಕೋಮು, ಮತೀಯವಾದದ ಮೂಲಕ ಅಶಾಂತಿ ಸೃಷ್ಟಿಸಿ, ಸಾಮಾಜಿಕ ಸ್ವಾಸ್ಥ್ಯ ಕೆಡಿಸಲು ನಡೆಸಿದ ಹುನ್ನಾರದ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಕೆ. ರಘುಪತಿ ಭಟ್‌ ನೇತೃತ್ವದಲ್ಲಿ ಕರಾವಳಿಯ 6 ಶಾಸಕರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ‌ಮನವಿ ಮಾಡಿರುವ ರಘುಪತಿ ಭಟ್, “ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ […]

Advertisement

Wordpress Social Share Plugin powered by Ultimatelysocial