ಗೋಡಂಬಿ(ಗೇರುಬೀಜ)ಯ ಉಪಯೋಗಗಳು.

ನಾವು ಉಪಯೋಗಿಸುವ ಗೋಡಂಬಿ, ಗೇರುಹಣ್ಣಿಗೆ ಅಂಟಿಕೊಂಡಂತೆ ಇರುತ್ತದೆ. ಗೇರುಹಣ್ಣು ಹಳದಿ ಹಾಗೂ ಕೆಂಪು ಬಣ್ಣಗಳಲ್ಲಿ ಬಿಡುತ್ತದೆ. ಗೇರುಬೀಜ ಈ ಹಣ್ಣಿಗೆ ಅಂಟಿಕೊಂಡಿರುತ್ತದೆ. ಈ ಗೇರಿನ ಒಳಗಡೆ ಇರುವುದು ಗೇರು ಪೊಪ್ಪು. ಇದನ್ನೇ ನಾವು ಗೋಡಂಬಿ ಎಂದು ಕರೆಯುವುದು. ಇದರ ಮರ, ಬೇರು, ತೊಗಟೆ, ಎಲೆ, ಹೂ, ಹಣ್ಣು, ಎಲ್ಲವೂ ಔಷಧೀಯವಾಗಿ ಬಳಕೆಯಾಗುತ್ತದೆ. ಇದರ ಬೇರು ವಿರೇಚನ ಗುಣವುಳ್ಳದ್ದಾಗಿದ್ದು, ತೊಗಟೆಯಿಂದ ಬರುವ ಕೆಂಪುರಸವು ತುರಿಕೆಯನ್ನು ನಿಲ್ಲಿಸುವ ಶಕ್ತಿಯುಳ್ಳದ್ದಾಗಿದೆ. ಇದು ಹೆಚ್ಚು ಕ್ಯಾಲೋರೀಸ್‌ಗಳನ್ನು ಹೊಂದಿದ್ದು, ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಶರೀರಕ್ಕೆ ಒದಗಿಸುವುದಲ್ಲದೆ, ಬಿ ೫, ಬಿ ೬, ಬಿ ೧ ವಿಟಮಿನ್‌ಗಳು ಇದರಲ್ಲಿ ಹೇರಳವಾಗಿವೆ. ಇದು ಔಷಧೀಯಗಳ ಭಂಡಾರವೇ ಆಗಿದೆ.ಗೇರುಹಣ್ಣನ್ನು ಆಗಾಗ ಸೇವಿಸುತ್ತಿದ್ದರೆ, ಜಂತುಹುಳುಗಳನ್ನು ನಿಯಂತ್ರಿಸಬಹುದು. ಚರ್ಮರೋಗ, ಹುಣ್ಣುಗಳು, ಮೂಲವ್ಯಾಧಿ, ಆಮಶಂಕೆ ಇವುಗಳ ನಿವಾರಣೆ ಗೇರುಹಣ್ಣಿನ ಸೇವನೆಯಿಂದ ಸಾಧ್ಯವಾಗುತ್ತದೆ  ಈ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ವಿಟಮಿನ್ ಸಿ ಕೊರತೆಯಿಂದ ಬರುವಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗುತ್ತದೆ. ವಸಡಿನಲ್ಲಿ ಉಂಟಾಗುವ ಹುಣ್ಣುಗಳ ನಿವಾರಣೆಗೆ ಈ ಗೇರುಹಣ್ಣನ್ನು ಸಕ್ಕರೆಪಾಕದಲ್ಲಿ ಕುದಿಸಿ ತೆಗೆದಿಟ್ಟುಕೊಂಡು ತಿನ್ನುತ್ತಾ ಬಂದರೆ, ವಸಡಿನ ಹುಣ್ಣು ಗುಣವಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರೀತಿಗೆ ಬ್ರೇಕ್; ನೊಂದ ಪ್ರಿಯತಮ ಆತ್ಮಹತ್ಯೆ.

Sun Jan 22 , 2023
  ಆರು ವರ್ಷದ ಪ್ರೀತಿಗೆ ಬ್ರೇಕ್ ಬಿದ್ದಿದ್ದಕ್ಕೆ ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಉಲ್ಲಾಳ ಉಪನಗರದಲ್ಲಿ ನಡೆದಿದೆ. ರೋಹಿತ್ (೨೫) ಮೃತ ಯುವಕನಾಗಿ ದ್ದಾನೆ. ಕೊರಿಯರ್ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್, ಕಳೆದ ಆರು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಕೊನೆ ಬಾರಿ ಭೇಟಿಯಾದಾಗ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಇನ್ನು ಪ್ರೀತಿ ಬೇಡ ನಾವು ಬ್ರೇಕಪ್ ಮಾಡಿಕೊಳ್ಳುವ ಎಂದು ಗಲಾಟೆ ಮಾಡಿಕೊಂಡಿದ್ದಾರೆ. ಇದರಿಂದ ಮನನೊಂದು […]

Advertisement

Wordpress Social Share Plugin powered by Ultimatelysocial