175 ದಿನ ಪೂರೈಸಿದ “ಲಂಕೆ” . ಸಂಕಷ್ಟದ ಸಮಯದಲ್ಲಿ ಸಂಭ್ರಮದ ವಾತಾವರಣ.

 

ಕಳೆದ ಎರಡು ವರ್ಷಗಳಿಂದ ಕೊರೋನ ಹೊಡೆತಕ್ಕೆ ಸಿಲುಕಿ ಚಿತ್ರರಂಗ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಅಂತಹ ಸಂಕಷ್ಟದ ಸಮಯದಲ್ಲಿ ಬಿಡುಗಡೆಯಾಗಿ ಜನಮನ ಗೆದ್ದಿರುವ ಚಿತ್ರ “ಲಂಕೆ”.ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿ, ರಾಮ್ ಪ್ರಸಾದ್ ಎಂ.ಡಿ ನಿರ್ಮಿಸಿ, ನಿರ್ದೇಶಿಸಿರುವ “ಲಂಕೆ” ಚಿತ್ರ 175 ದಿನಗಳನ್ನು ಪೂರೈಸಿದೆ.
ನಮ್ಮ ಚಿತ್ರ ಯಶಸ್ವಿ 175 ದಿನಗಳನ್ನು ಪೂರೈಸಿರುವುದು ನಿಜಕ್ಕೂ ಸಂತಸದ ವಿಷಯ. ಈ ಸಂದರ್ಭದಲ್ಲಿ ನಾಯಕ ಯೋಗಿ ಸೇರಿದಂತೆ ಇಡೀ ನಮ್ಮ ತಂಡಕ್ಕೆ ಧನ್ಯವಾದ. ಈ ಸಂತೋಷ ಹಂಚಿಕೊಳ್ಳಲು ಸದ್ಯದಲ್ಲೇ ಸಮಾರಂಭ ಆಯೋಜಿಸಲಿದ್ದೇವೆ.
ಈ ಖುಷಿ ಸಮಯದಲ್ಲಿ ಚಿತ್ರದಲ್ಲಿ ನಟಿಸಿರುವ ಸಂಚಾರಿ ವಿಜಯ್ ಇಲ್ಲದಿರುವುದು ನಮಗೆ ದುಃಖದ ಸಂಗತಿ.
ಮತ್ತೊಂದು ಖುಷಿಯ ವಿಚಾರವೆಂದರೆ ನಮ್ಮ ಚಿತ್ರ ತೆಲುಗಿನಲ್ಲೂ ನಿರ್ಮಾಣವಾಗುತ್ತಿದ್ದು, ಏಪ್ರಿಲ್ ನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. “ಲಂಕೆ” ಚಿತ್ರದಲ್ಲಿ ತಾಯಿ ಪಾತ್ರದ ಮೂಲಕ ಎಲ್ಲರ ಗಮನಸೆಳೆದಿದ್ದ ಎಸ್ಟರ್ ನರೋನ, ತೆಲುಗು ಅವತರಣಿಕೆಯಲ್ಲಿ ನೆಗಟೀವ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾನೇ ನಿರ್ದೇಶನ ಮಾಡಲಿದ್ದೇನೆ‌. ಈ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸದ್ಯದಲ್ಲೇ ನೀಡುತ್ತೇನೆ ಎಂದು “ಲಂಕೆ”ಯ ನಿರ್ದೇಶಕ ರಾಮ್ ಪ್ರಸಾದ್ ಎಂ.ಡಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏಪ್ರಿಲ್ ನಲ್ಲಿ "ಎದ್ದೇಳು ಮಂಜುನಾಥಾ ೨" ಮಠ ಗುರುಪ್ರಸಾದ್ ನಿರ್ದೇಶನದೊಂದಿಗೆ ನಟನೆ ಕೂಡ ಮಾಡಿರುವ ಚಿತ್ರ.

Tue Mar 8 , 2022
“ಎದ್ದೇಳು ಮಂಜುನಾಥಾ” ಎಂದೊಡನೆ ನೆನಪಾಗುವುದು. ನವರಸ ನಾಯಕ ಜಗ್ಗೇಶ್ ಅವರ ನಟನೆ. ಗುರುಪ್ರಸಾದ್ ಅವರ ನಿರ್ದೇಶನ. ಈಗ “ಎದ್ದೇಳು ಮಂಜುನಾಥಾ ೨” ಎಂಬ ಚಿತ್ರ ಬರುತ್ತಿದ್ದು, ಚಿತ್ರೀಕರಣ ಸಹ ಮುಗಿದಿದೆ. ಈ ಚಿತ್ರದಲ್ಲಿ ಜಗ್ಗೇಶ್ ಅವರು ಅಭಿನಯಿಸಿಲ್ಲ. ಬದಲಾಗಿ ಗುರು ಪ್ರಸಾದ್ ಅವರೆ ನಿರ್ದೇಶನದೊಂದಿಗೆ ಪ್ರಮುಖಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ರಚಿತಾ ಮಹಾಲಕ್ಷ್ಮಿ ಈ ಚಿತ್ರದ ನಾಯಕಿ. ಶರತ್ ಲೋಹಿತಾಶ್ವ, ಶಶಿಧರ್, ರವಿ ದೀಕ್ಷಿತ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. “ಎದ್ದೇಳು ಮಂಜುನಾಥಾ” […]

Advertisement

Wordpress Social Share Plugin powered by Ultimatelysocial