ಬೀಚ್ ಬೇಬಿಯಾದ ಗೀತಾ ಸೀರಿಯಲ್​ನ ಭಾನುಮತಿ!

ಗೀತಾ ಧಾರವಾಹಿಯಲ್ಲಿ ಭಾನುಮತಿಯಾಗಿ ವಿಜಿ ಹಾಗೂ ಗೀತಾಗೆ ಕಾಟ ಕೊಡುವ ಈ ನಟಿಯ ಪರಿಚಯ ಇದೆಯಾ?  ಕಿರುತೆರೆಯ ಖ್ಯಾತ ನಟಿ ಇವರು.

ನಾವಿಲ್ಲಿ ಮಾತಾಡ್ತೀರೋದು ಬೇರೆ ಯಾರ ಬಗ್ಗೆಯೂ ಅಲ್ಲ. ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿ ಶರ್ಮಿತಾ ಗೌಡ ಬಗ್ಗೆ. ನಟಿ ಶರ್ಮಿತಾ ಗೌಡ ಅವರು ಬೀಚ್ ಬೇಬಿಯಾಗಿ ಬದಲಾಗಿದ್ದಾರೆ. ಸಖತ್ತಾಗಿ ವೆಕೇಷನ್ ಎಂಜಾಯ್ ಮಾಡಿದ್ದಾರೆ. ಫೋಟೋಸ್ ಕೂಡಾ ಶೇರ್ ಮಾಡಿದ್ದಾರೆ. ಸ್ಕ್ವೇರ್ ಬ್ಲ್ಯಾಕ್ ಗಾಗಲ್ಸ್ ಹಾಗೂ ಬ್ಲ್ಯಾಕ್ & ವೈಟ್ ಕಾಂಬಿನೇಷನ್​ನ ಈಜುಡುಗೆಯನ್ನು ಧರಿಸಿ ನಟಿ ಕಡಲ ತೀರದಲ್ಲಿ ನಿಂತು ಸ್ಟೈಲಿಷ್ ಆಗಿ ಪೋಸ್ ಕೊಟ್ಟಿದ್ದು ಅವರ ಫೋಟೋಸ್ ವೈರಲ್ ಆಗಿವೆ.

ಬೋಟ್​ನಲ್ಲಿ ಕುಳಿತು ಬಿಸಿಲಿನ ನಡುವೆ ಕಡಲಿನ ವ್ಯೂ ಎಂಜಾಯ್ ಮಾಡಿದ್ದಾರೆ ನಟಿ. ರೆಡ್ ಲಿಪ್​ಸ್ಟಿಕ್ ಧರಿಸಿ ನಟಿ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಕಪ್ಪಿನ ಒಂದು ದಾರ ಹಾಗೂ ಸಿಂಪಲ್ಲಾಗಿರುವ ಒಂದು ಚೈನ್ ಧರಿಸಿದ್ದರು. ಅವರ ಫೋಟೋಗಳಿಗೆ 7 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಫ್ಯಾನ್ಸ್ ಅವರ ಈ ಡಿಫರೆಂಟ್ ಲುಕ್ ಇಷ್ಟಪಟ್ಟಿದ್ದಾರೆ.

ಇನ್ನೊಂದು ಸೆಟ್ ಫೋಟೋದಲ್ಲಿ ನಟಿ ಗುಲಾಬಿ ಬಣ್ಣದ ಡ್ರೆಸ್ ಧರಿಸಿದ್ದರು. ಸುಂದರವಾದ ಡ್ರೆಸ್ ಧರಿಸಿ ಕ್ಯಾಟ್ ಐ ಗಾಗಲ್ಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ನಟಿ ಪಿಂಕ್ ಕಲರ್ ಲಿಪ್​ಸ್ಟಿಕ್ ಹಚ್ಚಿದ್ದರು. ಬೋಟ್​ಗಳನ್ನು ನಿಲ್ಲಿಸಿದ್ದ ಸ್ಥಳದಲ್ಲಿ ಕುಳಿತು ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ನಟಿ ಗೀತಾ ಧಾರವಾಹಿಯಲ್ಲಿ ವಿಲನ್ ರೋಲ್ ಮಾಡುತ್ತಾ ಭಾರೀ ಜನಪ್ರಿಯತೆಯನ್ನು ಗಳಿಸಿದ್ದಾರೆ. ಗೀತಾಳನ್ನು ಕಾಡುವ ಅತ್ತೆಯಾಗಿ ನಟಿಸುವ ಇವರು ನಟನೆಯಿಂದ ಪ್ರೇಕ್ಷರನ್ನು ಮೆಚ್ಚಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಿಕ್ಕೇರಿ ಕೃಷ್ಣಮೂರ್ತಿ ಸುಗಮ ಸಂಗೀತ ಕಲಾವಿದರಾಗಿ ಹೆಸರಾಗಿದ್ದಾರೆ.

Tue Feb 21 , 2023
ಕಿಕ್ಕೇರಿ ಕೃಷ್ಣಮೂರ್ತಿ ಸುಗಮ ಸಂಗೀತ ಕಲಾವಿದರಾಗಿ ಹೆಸರಾಗಿದ್ದಾರೆ.ಕೃಷ್ಣಮೂರ್ತಿಯವರು 1964ರ ಫೆಬ್ರವರಿ 21ರಂದು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು. ತಂದೆ ಬಿ.ಎಸ್. ನಾರಾಯಣ ಭಟ್. ತಾಯಿ ರುಕ್ಮಿಣಮ್ಮ. ವಾಣಿಜ್ಯ ಡಿಪ್ಲೊಮಾ ನಂತರದಲ್ಲಿ ಬಿ.ಕಾಂ. ಪದವಿ ಜೊತೆಗೆ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಪದವಿ ಗಳಿಸಿದರು.ಕೃಷ್ಣಮೂರ್ತಿಯವರಿಗೆ ಶಾಲಾ ಕಾಲೇಜು ದಿನಗಳಿಂದಲೂ ಹಾಡಿನ ಬಗ್ಗೆ ವಿಶೇಷ ಒಲವು. ಹಲವಾರು ವರ್ಷ ಜಾನಪದ ತಜ್ಞ ಎಸ್.ಕೆ. ಕರೀಂಖಾನರ ಸಹವರ್ತಿಯಾಗಿದ್ದರು. ಕರೀಂಖಾನರ ಸಾಹಿತ್ಯಕ್ಕೆ ಸಂಗೀತ ನೀಡಿ ಮೊಟ್ಟಮೊದಲ […]

Advertisement

Wordpress Social Share Plugin powered by Ultimatelysocial