ಪತಿ ಸತ್ತ ನಂತರ ಪತ್ನಿ ಆತ್ಮಹತ್ಯೆಗೆ ಶರಣು

ಕೊರೋನಾ ಜೊತೆ ಜೊತೆಗೆ ಕೊರೋನಾದಿಂದ ಇತರೆ ಸಮಸ್ಯೆಗೊಳಗಾದವರು ಸಾವನ್ನಪ್ಪುತ್ತಿರುವ ಘಟನೆಗಳು ನಡೆಯುತ್ತಿದೆ. ಇತ್ತೀಚೆಗೆ ಕೊರೋನಾದಿಂದ ಮಾನಸಿಕ ಖಿನ್ನತೆಗೊಳಗಾಗುವವರ ಸಂಖ್ಯೆ ಹೆಚ್ಚಾಗಿದ್ದು ಆತಂಕಕಾರಿ ಬೆಳವಣಿಗೆಯಾಗಿತ್ತು. ಏತನ್ಮಧ್ದೆ ಕೋವಿಡ್‌ನಿಂದ ಪತಿ ಮೃತಪಟ್ಟ ಬೆನ್ನಲ್ಲೆ ಮಹಿಳೆಯೊರ್ವರು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.ಉಸಿರಾಟದ ತೊಂದರೆ ಇದ್ದ ಪತಿ ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದರು, ಇದರಿಂದ ಮನನೊಂದ ಮಹಿಳೆ ರೈಲು ಹಳಿಗಳ ಮೇಲೆ ಮೇಲುಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ, ಮಹಿಳೆ ಮತ್ತು ಮಕ್ಕಳು ರೈಲು ಹಳಿಗೆ ಬಿದ್ದ ತಕ್ಷಣ ಅಲ್ಲೇ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಮಹಿಳೆ ಮತ್ತು ಮಕ್ಕಳನ್ನ ಆಸ್ಪತ್ರೆಗೆ ದಾಖಲಿಸಲಾದರು ಮಹಿಳೆ ತಲೆಗೆ ತೀವ್ರತರನಾದ ಪೆಟ್ಟು ಬಿದ್ದಿದ್ದರಿಂದ ಆಕೆ ಮೃತಪಟ್ಟಿದ್ದಾಳೆ ಆದರೆ ಆಕೆಯ ೪ ಮತ್ತು ೨ ವರ್ಷದ ಮಕ್ಕಳ ಜೀವಕ್ಕೆ ಹಾನಿಯಾಗದಿದ್ದರು ಒಂದು ಕೈ ಮತ್ತು ಕಾಲನ್ನ ತೆಗೆಯ ಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನ ವ್ಯಾಪಾರಿಗಳಿಂದ ಲಾಕ್ಡೌನ್

Wed Jul 8 , 2020
ದಿನೇ ದಿನೇ ಬೆಂಗಳೂರು ಮಹಾನಗರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೆಲವು ಏರಿಯಾಗಳು ಸ್ವಯಂ ಪ್ರೇರಿತ ಲಾಕ್ಡೌನ್ ಮಾಡಿಕೊಳ್ಳಲು ಮುಂದಾಗಿವೆ.ಕೆAಗೇರಿ ಸಮಿಪ ಉಳ್ಳಾಲದ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ೧೫ ದಿನಗಳ ಕಾಲ ಲಾಕ್ಡೌನ್ ಅನ್ನ ಘೋಷಿಸಿಕೊಂಡಿದ್ದಾರೆ.”ನಮ್ಮ ಗ್ರಾಹಕರೇ ನಮಗೆ ಮುಖ್ಯ. ಅವರ ಆರೋಗ್ಯದ ಬಗ್ಗೆ ನಮಗೂ ಕಾಳಜಿ ಇದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದ್ದರಿಂದ, ನಾವು ಚೈನ್ ಬ್ರೇಕ್ ಮಾಡಲು ಸುಮಾರು ಒಂದು ವಾರಗಳ ಕಾಲವಾದರೂ ಲಾಕ್‌ಡೌನ್ […]

Advertisement

Wordpress Social Share Plugin powered by Ultimatelysocial