ಶಿಲ್ಪಾ ಶೆಟ್ಟಿ, ಸಹೋದರಿ ಶಮಿತಾ ಶೆಟ್ಟಿ ಹಾಗೂ ತಾಯಿ ಸುನಂದಾ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ!

ನಟಿ ಶಿಲ್ಪಾ ಶೆಟ್ಟಿ ಕಳೆದ ವರ್ಷ ಸಾಕಷ್ಟು ಕಷ್ಟ ಅನುಭವಿಸಿದರು. ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಪ್ರಸಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಶಿಲ್ಪಾ ಶೆಟ್ಟಿ ವಿರುದ್ಧವೂ ಹಲವು ಆರೋಪಗಳು ಕೇಳಿ ಬಂದಿದ್ದವು.ರಾಜ್ ಕುಂದ್ರಾ ಜೈಲು ಪಾಲಾಗಿದ್ದಾಗ ಆಳಿಗೊಂದರಂತೆ ಶಿಲ್ಪಾ ಶೆಟ್ಟಿ ಹಾಗೂ ಕುಟುಂಬದ ವಿರುದ್ಧ ಕಲ್ಲು ಒಗೆಯಲಾಯಿತು.ಹಲವು ಪ್ರಕರಣಗಳು ಈ ಹಂತದಲ್ಲಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಹಾಗೂ ಕುಟುಂಬದ ಮೇಲೆ ದಾಖಲಾದವು.ರಾಜ್ ಕುಂದ್ರಾ ಜೈಲಿನಲ್ಲಿದ್ದ ಸಮಯದಲ್ಲಿಯೇ ಶಿಲ್ಪಾ ಶೆಟ್ಟಿ ಹಾಗೂ ಕುಟುಂಬದ ವಿರುದ್ಧ ಉದ್ಯಮಿಯೊಬ್ಬ ಪ್ರಕರಣ ದಾಖಲಿಸಿದ್ದು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.ರಾಜ್ ಕುಂದ್ರಾ ಜೈಲಿನಲ್ಲಿದ್ದ ಸಂದರ್ಭದಲ್ಲಿ ಉದ್ಯಮಿಯೊಬ್ಬ ಶಿಲ್ಪಾ ಶೆಟ್ಟಿ, ಸಹೋದರಿ ಶಮಿತಾ ಶೆಟ್ಟಿ ಹಾಗೂ ತಾಯಿ ಸುನಂದಾ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದ. 21 ಲಕ್ಷ ರುಪಾಯಿ ಸಾಲವನ್ನು ಹಿಂತಿರುಗಿಸದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.ಪ್ರಕರಣದ ವಿಚಾರಣೆ ಮುಂಬೈನ ಅಂಧೇರಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿತ್ತು. ಇದೀಗ ನ್ಯಾಯಾಲಯವು ಶಿಲ್ಪಾ, ಶಮಿತಾ ಹಾಗೂ ತಾಯಿ ಸುನಂದಾಗೆ ಸಮನ್ಸ್ ಜಾರಿ ಮಾಡಿದ್ದು, ಫೆಬ್ರವರಿ 28 ರ ಒಳಗಾಗಿ ಈ ಮೂವರೂ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಸೂಚಿಸಿದೆ.ಫರ್ಹಾದ್ ಅಮ್ರ ಹೆಸರಿನ ಉದ್ಯಮಿ ಜುಹು ಪೊಲೀಸ್ ಠಾಣೆಯಲ್ಲಿ ಶಿಲ್ಪಾ ಹಾಗೂ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದರು. 2015 ರಲ್ಲಿ ಶಿಲ್ಪಾ ಶೆಟ್ಟಿಯ ತಂದೆ 21 ಲಕ್ಷ ರುಪಾಯಿ ಸಾಲ ಪಡೆದಿದ್ದು, ಸಾಲವನ್ನು 2017 ರಲ್ಲಿ ತೀರಿಸಬೇಕಿತ್ತು ಆದರೆ ತೀರಿಸಿಲ್ಲ. ಇದೀಗ ಅವರ ಮಕ್ಕಳಾದ ಶಿಲ್ಪಾ, ಶಮಿತಾ ಹಾಗೂ ತಾಯಿ ಪಂಕಜಾ ಆ ಸಾಲವನ್ನು ತೀರಿಸಬೇಕಿದೆ. ಆದರೆ ತಾವು ಸಾಲ ತೀರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಹಾಗಾಗಿ ಉದ್ಯಮಿ ಪರ್ಹಾದ್ ಅಮ್ರ ಶಿಲ್ಪಾ ಶೆಟ್ಟಿ ಹಾಗೂ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ.ಇದು ಮಾತ್ರವೇ ಅಲ್ಲದೆ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ವಿರುದ್ಧ ಇನ್ನೂ ಕೆಲವು ವಂಚನೆ ಪ್ರಕರಣಗಳು ಕಳೆದ ವರ್ಷ ದಾಖಲಾಗಿವೆ. ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ಜಂಟಿಯಾಗಿ ಆರಂಭಿಸಿದ್ದ ಚಿನ್ನದ ಉದ್ಯಮದ ಕುರಿತು ಕೆಲವು ಪ್ರಕರಣಗಳು ದಾಖಲಾಗಿವೆ.ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ಜೊತೆಯಾಗಿ ಆರಂಭಿಸಿದ್ದ ಫಿಟ್‌ನೆಸ್ ಸೆಂಟರ್ ಬಗ್ಗೆಯೂ 1.51 ಕೋಟಿ ವಂಚನೆ ಪ್ರಕರಣ ದಾಖಲಾಗಿದೆ. ಉದ್ಯಮಿ ನಿತಿನ್ ಬರಾರಿ ಎಂಬುವರು ಈ ದೂರು ದಾಖಲಿಸಿದ್ದಾರೆ.ದೆಹಲಿ ಮೂಲದ ಉದ್ಯಮಿಯೊಬ್ಬ ಸಹ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಈ ದಂಪತಿ ತಮಗೆ 41 ಲಕ್ಷ ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ತಮ್ಮನ್ನು ಬಲವಂತ ಪಡಿಸಿ 41.30 ಲಕ್ಷ ಹಣವನ್ನು ತಮ್ಮ ಸಂಸ್ಥೆಯಲ್ಲಿ ಹೂಡಿಕೆ ಮಾಡುವಂತೆ ಮಾಡಿದರು. ಮತ್ತು ಆ ಹಣವನ್ನು ತಮ್ಮ ವೈಯಕ್ತಿಕ ಖರ್ಚುಗಳಿಗೆ ಬಳಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ. ಹೀಗೆ ಹಲವು ಉದ್ಯಮಿಗಳು, ಖಾಸಗಿ ವ್ಯಕ್ತಿಗಳು ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ವಿರುದ್ಧ ದೂರು ನೀಡಿದ್ದಾರೆ.ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಜುಲೈ 19ರಂದು ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಮುಂಬೈನಲ್ಲಿ ಸ್ಥಳೀಯ ನಟಿಯರಿಂದ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಂಡು ಅದನ್ನು ಲಂಡನ್‌ನಲ್ಲಿರುವ ತಮ್ಮ ಸಂಬಂಧಿಯೊಬ್ಬರ ಸಂಸ್ಥೆಯ ಮೂಲಕ ಹಾಟ್‌ಶಾಟ್ಸ್ ಹೆಸರಿನ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಿಸುತ್ತಿದ್ದರು, ಆ ಮೂಲಕ ದಿನಕ್ಕೆ ಲಕ್ಷಾಂತರ ಹಣವನ್ನು ರಾಜ್ ಕುಂದ್ರಾ ಗಳಿಸುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪ ಮಾಡಿದ್ದರು. ಪ್ರಕರಣದಲ್ಲಿ ರಾಜ್ ಕುಂದ್ರಾಗೆ ಜಾಮೀನು ದೊರೆತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚೆನ್ನೈ ಸೂಪರ್ ಕಿಂಗ್ಸ್ (CSK) ಪೂರ್ಣ ಸ್ಕ್ವಾಡ್ ಲೈವ್ ನವೀಕರಣಗಳು, IPL 2022 ಹರಾಜು

Sun Feb 13 , 2022
  ಎಂಎಸ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಫುಲ್ ಸ್ಕ್ವಾಡ್ ಲೈವ್ ಅಪ್‌ಡೇಟ್‌ಗಳನ್ನು ಪರಿಶೀಲಿಸಿ – ದಿನ 2 ಹರಾಜಿನ ಮೊದಲ ದಿನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಹೆಚ್ಚಿನ ಆಟಗಾರರನ್ನು ಮರಳಿ ಖರೀದಿಸಲು ಸಮರ್ಥವಾಗಿದೆ. ಉತ್ತಪ್ಪ, ಬ್ರಾವೋ, ರಾಯುಡು ಮತ್ತು ಚಹಾರ್ ಅದೇ ಫ್ರಾಂಚೈಸಿಗೆ ಮರಳುವುದರೊಂದಿಗೆ, ಅವರು ಮತ್ತೊಮ್ಮೆ ತಮ್ಮ ಯಶಸ್ವಿ ಕೋರ್ ಅನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅದು ಅವರನ್ನು ಮಾರಣಾಂತಿಕ ತಂಡವನ್ನಾಗಿ ಮಾಡುತ್ತದೆ. ಹರಾಜಿನ ಎರಡನೇ […]

Advertisement

Wordpress Social Share Plugin powered by Ultimatelysocial