SANDALWOOD:ಒನ್ ಕಟ್ ಟೂ ಕಟ್ ನನ್ನ ಮೊದಲ ಕಂಪ್ಲೀಟ್ ಕಾಮಿಡಿ ಸಿನಿಮಾ,ಸಂಯುಕ್ತಾ ಹೊರನಾಡು;

ದಾನಿಶ್ ಸೇಟ್ ನಟಿಸಿರುವ, ವಂಸೀಧರ್ ಭೋಗರಾಜು ನಿರ್ದೇಶನದ ಒನ್ ಕಟ್ ಟೂ ಕಟ್ ಸಿನಿಮಾ ನಾಯಕಿ ಸಂಯುಕ್ತಾ ಹೊರನಾಡು. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಕಾರದ ಸಿನಿಮಾಗಳಿಗೆ ಹೆಸರಾದವರು.

ಸಂಯುಕ್ತಾ ನಟಿಸಿರುವ ಒನ್ ಕಟ್ ಟೂ ಕಟ್ ಸಿನಿಮಾ ಫೆ.3ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗುತ್ತಿದೆ.

ಸಿನಿಮಾ ಕುರಿತು ಸಂಯುಕ್ತಾ ತುಂಬಾ ಎಕ್ಸೈಟ್ ಆಗಿದ್ದಾರೆ.

ಈ ಹಿಂದೆ ಸಿನಿಮಾದಲ್ಲಿ ಕಾಮಿಡಿ ಸೀನುಗಳಲ್ಲಿ ನಟಿಸಿದ್ದರೂ ಇದೇ ಮೊದಲ ಬಾರಿಗೆ ಕಂಪ್ಲೀಟ್ ಕಾಮಿಡಿ ಸಿನಿಮಾದಲ್ಲಿ ನಟಿಸಿರುವುದು ಸಂತಸ ಕೊಟ್ಟಿದೆ ಎನ್ನುತ್ತಾರೆ ಸಂಯುಕ್ತಾ.

ದಾನಿಶ್ ಸೇಠ್ ಮತ್ತು ನಿರ್ದೇಶಕ ವಂಸೀಧರ್ ಭೋಗರಾಜು ಇಬ್ಬರೂ ಕಾಮಿಡಿಯಲ್ಲಿ ಪಳಗಿದವರು, ಹಿಂದಿನಿಂದಲೇ ಕಾಮಿಡಿ ಶೋಗಳನ್ನು ನಡೆಸಿಕೊಂಡುಬಂದಿದ್ದಾರೆ. ಹೀಗಾಗಿ ಕಾಮಿಡಿ ಅವರ ಹೋಮ್ ಗ್ರೌಂಡ್. ನನಗೆ ಅವರ ಪ್ರೆಸೆನ್ಸ್ ನಲ್ಲಿ ಟೈಮಿಂಗ್ ಮೇಂಟೇನ್ ಮಾಡೋದು ಸವಾಲಿನ ಕೆಲಸವಾಗಿತ್ತು ಎಂದು ಸಂಯುಕ್ತಾ ಶೂಟಿಂಗ್ ಅನುಭವ ಹಂಚಿಕೊಂಡಿದ್ದಾರೆ.

ಹೊಸಬರ ತಂಡ, ಹೊಸ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದ ಪುನೀತ್ ರಾಜ್ ಕುಮಾರ್ ಮತ್ತು ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆಗೆ ಅವರು ಕೃತಜ್ಞತೆ ಅರ್ಪಿಸಿದ್ದಾರೆ.

ತಮ್ಮ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಹೊರ ರಾಜ್ಯದವರು ಮಾತ್ರವಲ್ಲದೆ, ವಿದೇಶಗಳಲ್ಲಿರುವವರೂ ಕನ್ನಡ ಸಿನಿಮಾ ನೋಡಬಹುದಾಗಿದೆ ಎಂದು ಸಂಯುಕ್ತಾ ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

SANDALWOOD:ಮತ್ತೆ ಸಿನಿಮಾಗೆ ಬರುತ್ತಿದ್ದಾರೆ ರಮ್ಯಾ;

Wed Feb 2 , 2022
ಸ್ಯಾಂಡಲ್‌ವುಡ್ ಕ್ವೀನ್ ಎಂದೇ ಹೆಸರಾಗಿರುವ ನಟಿ ರಮ್ಯಾ ಚಿತ್ರರಂಗದಿಂದ ದೂರವಾಗಿ ರಾಜಕೀಯ ಪ್ರವೇಶ ಮಾಡಿದರು. ಸಂಸದೆಯೂ ಆದರು ಬಳಿಕ ಅಲ್ಲಿಂದಲೂ ದೂರವಾಗಿ ಬಿಟ್ಟಿದ್ದಾರೆ. ಆದರೆ ಇದೀಗ ಅವರೇ ಹೇಳಿರುವಂತೆ ರಮ್ಯಾ ಮತ್ತೆ ಬೆಳ್ಳಿ ತೆರೆಯ ಮೇಲೆ ಬರಲು ಸಜ್ಜಾಗುತ್ತಿದ್ದಾರೆ. 2003 ರಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ ‘ಅಭಿ’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ರಮ್ಯಾ ಒಂದು ದಶಕ ಚಿತ್ರರಂಗದಲ್ಲಿ ಟಾಪ್ ನಟಿಯಾಗಿದ್ದರು. ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿ […]

Advertisement

Wordpress Social Share Plugin powered by Ultimatelysocial