SANDALWOOD:ಮತ್ತೆ ಸಿನಿಮಾಗೆ ಬರುತ್ತಿದ್ದಾರೆ ರಮ್ಯಾ;

ಸ್ಯಾಂಡಲ್‌ವುಡ್ ಕ್ವೀನ್ ಎಂದೇ ಹೆಸರಾಗಿರುವ ನಟಿ ರಮ್ಯಾ ಚಿತ್ರರಂಗದಿಂದ ದೂರವಾಗಿ ರಾಜಕೀಯ ಪ್ರವೇಶ ಮಾಡಿದರು. ಸಂಸದೆಯೂ ಆದರು ಬಳಿಕ ಅಲ್ಲಿಂದಲೂ ದೂರವಾಗಿ ಬಿಟ್ಟಿದ್ದಾರೆ. ಆದರೆ ಇದೀಗ ಅವರೇ ಹೇಳಿರುವಂತೆ ರಮ್ಯಾ ಮತ್ತೆ ಬೆಳ್ಳಿ ತೆರೆಯ ಮೇಲೆ ಬರಲು ಸಜ್ಜಾಗುತ್ತಿದ್ದಾರೆ.

2003 ರಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ ‘ಅಭಿ’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ರಮ್ಯಾ ಒಂದು ದಶಕ ಚಿತ್ರರಂಗದಲ್ಲಿ ಟಾಪ್ ನಟಿಯಾಗಿದ್ದರು. ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡರು.

ಆದರೆ 2012 ರಲ್ಲಿ ರಾಜಕೀಯ ಪ್ರವೇಶಿಸಿದ ಬಳಿಕ ಚಿತ್ರರಂಗದಿಂದ ನಿಧಾನಕ್ಕೆ ನಂಟು ಕಳೆದುಕೊಂಡರು ರಮ್ಯಾ. 2012 ರಲ್ಲಿ ನಾಲ್ಕು ಸಿನಿಮಾದಲ್ಲಿ ನಟಿಸಿದ್ದ ರಮ್ಯಾ ಬಳಿಕ 2014 ರಲ್ಲಿ ಒಂದು ಹಾಗೂ 2016 ರಲ್ಲಿ ಒಂದು ಸಿನಿಮಾದಲ್ಲಷ್ಟೆ ನಟಿಸಿದರು. ಆದರೆ ಇದೀಗ ರಮ್ಯಾ ಮತ್ತೆ ನಟನೆ ಕಡೆಗೆ ಮರಳುವ ಉತ್ಸಾಹದಲ್ಲಿದ್ದಾರೆ ಅದಕ್ಕಾಗಿ ತಯಾರಿಯನ್ನೂ ಆರಂಭಿಸಿದ್ದಾರೆ.

ಬೀದಿ ನಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ರಮ್ಯಾ
ರಾಜಕಾರಣಿ, ಉದ್ಯಮಿ ಆದಿಕೇಶವಲು ಮೊಮ್ಮಗ ಆದಿನಾರಾಯಣ, ಲಾರಾ ಹೆಸರಿನ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಕೊಂದ ಘಟನೆಯನ್ನು ಖಂಡಿಸಿದ್ದ ನಟಿ ರಮ್ಯಾ, ಮಂಗಳವಾರ ನಡೆದ ನಾಯಿ ಲಾರಾಳ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಈ ಸಮಯ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸಿನಿಮಾ ರಂಗಕ್ಕೆ ಮರಳುವುದಾಗಿ ಹೇಳಿದ್ದಾರೆ.

ಮಾರ್ಚ್ ತಿಂಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತೇನೆ: ರಮ್ಯಾ

”ಅವಕಾಶಗಳು ಸಾಕಷ್ಟು ಬರುತ್ತಲೇ ಇವೆ. ನಾನೀಗ ಕೆಲವು ಚಿತ್ರಕತೆಗಳನ್ನು ಓದುತ್ತಿದ್ದೇನೆ. ಆದಷ್ಟು ಶೀಘ್ರವಾಗಿ ಈ ಬಗ್ಗೆ ನಿಖರ ಮಾಹಿತಿ ನೀಡುತ್ತೇನೆ. ನನ್ನ ಕಮ್‌ ಬ್ಯಾಕ್‌ ಸಿನಿಮಾದ ಬಗ್ಗೆ ಮಾರ್ಚ್‌ನಲ್ಲಿ ನಾನು ಮಾಧ್ಯಮಗಳೊಟ್ಟಿಗೆ ಮಾಹಿತಿ ಹಂಚಿಕೊಳ್ಳುತ್ತೇನೆ” ಎಂದಿದ್ದಾರೆ ನಟಿ ರಮ್ಯಾ. ಆ ಮೂಲಕ ತಾವು ಚಿತ್ರರಂಗಕ್ಕೆ ಮರಳುತ್ತಿರುವ ಸುದ್ದಿಯನ್ನು ಖಾತ್ರಿಪಡಿಸಿದ್ದಾರೆ.

ದೇಹ ತೂಕ ಇಳಿಸಿಕೊಳ್ಳುತ್ತಿದ್ದೇನೆ: ರಮ್ಯಾ

ಸಿನಿಮಾ ರಂಗಕ್ಕೆ ಕಮ್‌ ಬ್ಯಾಕ್ ಮಾಡಲು ಸಾಕಷ್ಟು ತಯಾರಿಯನ್ನು ರಮ್ಯಾ ಮಾಡಿಕೊಳ್ಳುತ್ತಿದ್ದಾರೆ. ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಮ್ಯಾ, ”ಶಸ್ತ್ರಚಿಕಿತ್ಸೆಯ ಬಳಿಕ ನಾನು ತುಸು ದೇಹ ತೂಕ ಹೆಚ್ಚಿಸಿಕೊಂಡಿದ್ದೇನೆ. ಅದನ್ನು ನಿವಾರಣೆ ಮಾಡಿಕೊಳ್ಳಬೇಕಿದೆ. ನಟನೆಗೆ ಬೇಕಾದ ದೇಹ ಸ್ಥಿತಿಯನ್ನು ಮರಳಿ ಪಡೆದುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ನಾನೀಗ ಕೆಲಸ ಮಾಡುತ್ತಿದ್ದೇನೆ” ಎಂದಿದ್ದಾರೆ ನಟಿ ರಮ್ಯಾ.

ಈಗಲೂ ರಮ್ಯಾಗೆ ಅಭಿಮಾನಿಗಳಿದ್ದಾರೆ

ನಟಿ ರಮ್ಯಾಗೆ ಈಗಲೂ ಹಲವು ಅಭಿಮಾನಿಗಳಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ‘ರತ್ನನ್ ಪ್ರಪಂಚ’ ಸಿನಿಮಾವನ್ನು ಮೆಚ್ಚಿ ರಮ್ಯಾ ಪೋಸ್ಟ್ ಹಾಕಿದ್ದಾಗ ಮಾತನಾಡಿದ್ದ ನಟ ಡಾಲಿ ಧನಂಜಯ್, ‘ರಮ್ಯಾ ಅವರು ಸಿನಿಮಾಗಳನ್ನು ಮೆಚ್ಚುವುದು ಮಾತ್ರವಲ್ಲ ಅವರು ಮತ್ತೆ ನಮ್ಮೊಂದಿಗೆ ಬಂದು ಕೆಲಸ ಮಾಡಬೇಕು, ಸಿನಿಮಾಗಳಲ್ಲಿ ನಟಿಸಬೇಕು” ಎಂದು ಒತ್ತಾಯಿಸಿದ್ದರು. ಡಾಲಿ ಧನಂಜಯ್ ಮಾತ್ರವೇ ಅಲ್ಲದೆ ಹಲವು ನಿರ್ದೇಶಕರು, ನಿರ್ಮಾಪಕರು ಸಹ ರಮ್ಯಾ ಅವರೊಟ್ಟಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದು ಕ್ರಿಪ್ಟೋಕರೆನ್ಸಿ ಬೆಲೆಗಳು: ಬಿಟ್‌ಕಾಯಿನ್ ಸ್ಲೈಡ್‌ಗಳು ಆದರೆ ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಸ್ಥಿರವಾಗಿರುತ್ತದೆ

Wed Feb 2 , 2022
ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಜನವರಿಯಲ್ಲಿ ಕುಸಿತದ ನಂತರ ಸ್ಥಿರಗೊಳ್ಳಲು ಪ್ರಾರಂಭಿಸಿದೆ. ಪರ್ಯಾಯ ಕ್ರಿಪ್ಟೋಕರೆನ್ಸಿಗಳು (ಆಲ್ಟ್‌ಕಾಯಿನ್‌ಗಳು) ಕಳೆದ ವಾರ ಬಿಟ್‌ಕಾಯಿನ್‌ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರೂ ಸಹ ಈ ತಿಂಗಳು ಬೆಲೆಗಳು ಚೇತರಿಸಿಕೊಳ್ಳಲು ಸೈಪ್ಟೋ ಮಾರುಕಟ್ಟೆ ಟ್ರ್ಯಾಕರ್‌ಗಳು ನಿರೀಕ್ಷಿಸುತ್ತಿದ್ದಾರೆ. ವಿಶ್ವದ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿ, ಬಿಟ್‌ಕಾಯಿನ್, USD 38,507.69 ನಲ್ಲಿ ವಹಿವಾಟು ನಡೆಸಿತು, ಇದು ಶೇಕಡಾ 0.05 ರಷ್ಟು ಕಡಿಮೆಯಾಗಿದೆ. ಆದಾಗ್ಯೂ, Ethereum USD 2,771.31 ನಲ್ಲಿ ಶೇಕಡಾ 1.23 ರಷ್ಟು ಏರಿಕೆಯಾಗಿದೆ. XRP, Solana, […]

Advertisement

Wordpress Social Share Plugin powered by Ultimatelysocial