4 ಪಂದ್ಯಗಳ ನಿಷೇಧ ಶಿಕ್ಷೆಯಿಂದ ತಪ್ಪಿಸಿಕೊಂಡ ಇಶಾನ್ ಕಿಶನ್.

ಭಾರತದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ಅದೃಷ್ಟವಶಾತ್ 4 ಏಕದಿನ ಪಂದ್ಯಗಳ ನಿಷೇಧ ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ. ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳದಿದ್ದರೂ, ಐಸಿಸಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಇಶಾನ್‌ ಕಿಶನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಅಂಪೈರ್‌ಗಳನ್ನು ಉದ್ದೇಶಪೂರ್ವಕವಾಗಿ ವಂಚಿಸುವ ಯತ್ನ ಮಾಡಿದ್ದಾರೆ ಎನ್ನುವ ಆರೋಪ ಇಶಾನ್ ಕಿಶನ್ ಮೇಲಿದೆ. ಭಾರತ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಇಶಾನ್ ಕಿಶನ್ ಈ ಪ್ರಮಾದ ಎಸಗಿದ್ದಾರೆ.

ILT20: 38 ಎಸೆತಗಳಲ್ಲಿ ಸ್ಫೋಟಕ 86 ರನ್ ಗಳಿಸಿ ಮಿಂಚಿದ ಕೀರನ್ ಪೊಲಾರ್ಡ್

ಹೈದರಾಬಾದ್‌ನಲ್ಲಿ ನಡೆದ ಮೊದಲನೇ ಏಕದಿನ ಪಂದ್ಯದಲ್ಲಿ ಕೀಪಿಂಗ್ ಮಾಡುವ ವೇಳೆ ಇಶಾನ್ ಕಿಶನ್ ತಪ್ಪು ಮಾಡಿದ್ದಾರೆ. ನ್ಯೂಜಿಲೆಂಡ್ ಬ್ಯಾಟರ್ ಟಾಮ್ ಲಾಥಮ್ ಕ್ರೀಸ್‌ನಲ್ಲಿದ್ದ ವೇಳೆ ವಿಕೆಟ್ ಕೀಪರ್ ಇಶಾನ್ ಕಿಶನ್ ತಮ್ಮ ಗ್ಲೌಸ್‌ಗಳಿಂದ ಬೇಲ್ಸ್ ಕೆಳಗೆ ಬೀಳಿಸಿ ಅಂಪೈರ್ ಗೆ ಔಟ್‌ಗಾಗಿ ಮನವಿ ಮಾಡಿದರು.

ನಾಯಕ ಟಾಮ್ ಲ್ಯಾಥಮ್ ಅವರ ವಿಕೆಟ್‌ಗೆ ಮನವಿ ಮಾಡುವಾಗ ಭಾರತೀಯ ವಿಕೆಟ್-ಕೀಪರ್ ಬ್ಯಾಟರ್ ಸ್ಪಷ್ಟವಾಗಿ ಅಂಪೈರ್ ಅನ್ನು ವಂಚಿಸಲು ಪ್ರಯತ್ನಿಸಿದರು ಎಂದು ವರದಿ ಹೇಳಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಸಿರು ಮತ್ತು ಹಸಿ ಕಾಳುಗಳನ್ನು ಚಳಿಗಾಲದಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ.

Mon Jan 23 , 2023
  ಬೆಂಗಳೂರು : ಹಸಿರು ಮತ್ತು ಹಸಿ ಕಾಳುಗಳನ್ನು ಚಳಿಗಾಲದಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ. ಇತರ ತರಕಾರಿ ಮತ್ತು ಸಲಾಡ್ ಗಳ ಜೊತೆಗೆ ಕೂಡಾ ಈ ಹಸಿ ಕಾಳುಗಳನ್ನು ಸೇರಿಸಲಾಗುತ್ತದೆ. ಹಸಿರು ಕಡಲೆ ತಿನ್ನಲು ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಸಿರು ಧಾನ್ಯ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ತೆಗೆದುಹಾಕುತ್ತದೆ. ಹಸಿ ಕಾಳಿನಲ್ಲಿರುವ ಪೋಷಕಾಂಶಗಳು : ಹಸಿರು ಕಡಲೆ ಕಾಳಿನಲ್ಲಿಸಸ್ಯ ಆಧಾರಿತ ಪ್ರೋಟೀನ್ ಇದೆ. ಇದರಲ್ಲಿ ವಿಟಮಿನ್ […]

Advertisement

Wordpress Social Share Plugin powered by Ultimatelysocial