ಹಸಿರು ಮತ್ತು ಹಸಿ ಕಾಳುಗಳನ್ನು ಚಳಿಗಾಲದಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ.

 

ಬೆಂಗಳೂರು : ಹಸಿರು ಮತ್ತು ಹಸಿ ಕಾಳುಗಳನ್ನು ಚಳಿಗಾಲದಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ. ಇತರ ತರಕಾರಿ ಮತ್ತು ಸಲಾಡ್ ಗಳ ಜೊತೆಗೆ ಕೂಡಾ ಈ ಹಸಿ ಕಾಳುಗಳನ್ನು ಸೇರಿಸಲಾಗುತ್ತದೆ. ಹಸಿರು ಕಡಲೆ ತಿನ್ನಲು ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಸಿರು ಧಾನ್ಯ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ತೆಗೆದುಹಾಕುತ್ತದೆ.

ಹಸಿ ಕಾಳಿನಲ್ಲಿರುವ ಪೋಷಕಾಂಶಗಳು :
ಹಸಿರು ಕಡಲೆ ಕಾಳಿನಲ್ಲಿಸಸ್ಯ ಆಧಾರಿತ ಪ್ರೋಟೀನ್ ಇದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಸಮೃದ್ಧವಾಗಿದೆ. ಫೈಬರ್, ಕಬ್ಬಿಣ, ಫೋಲೇಟ್, ರಂಜಕ, ಸೋಡಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸೆಲೆನಿಯಮ್, ಕ್ಯಾಲ್ಸಿಯಂ, ಕ್ಯಾಲೋರಿಗಳು, ಕೊಬ್ಬುಗಳು, ಕಾರ್ಬೋಹೈಡ್ರೇಟ್ ಗಳು ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ.

ಸ್ನಾಯುಗಳನ್ನು ಬಲಗೊಳ್ಳುತ್ತವೆ :
ಹಸಿರು ಕಡಲೆ ಕಾಳುಗಳಲ್ಲಿ ಸಸ್ಯ ಆಧಾರಿತ ಪ್ರೋಟೀನ್ ಇರುವುದರಿಂದ ಇದು ಸ್ನಾಯುಗಳನ್ನು ಬಲಗೊಳಿಸುತ್ತವೆ. ಇದು ಪ್ರೋಟೀನ್‌ ನಿಂದ ಸಮೃದ್ಧವಾಗಿದೆ. ಹಾಗಾಗಿ ಮೂಳೆಗಳನ್ನು ಬಲಪಡಿಸುವ ಕೆಲಸ ಕೂಡಾ ಮಾಡುತ್ತದೆ.

ಗರ್ಭಿಣಿಯರಿಗೆ ಪ್ರಯೋಜನಕಾರಿ :
ಗರ್ಭಿಣಿಯರಿಗೂ ಹಸಿರು ಕಾಳು ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ವಿಟಮಿನ್ ಬಿ9 ಭ್ರೂಣದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಗರ್ಭಪಾತದ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ.

ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ :
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕಲು ಹಸಿರು ಕಡಲೆ ಕಾಳು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಹೇರಳವಾಗಿ ಕಂಡು ಬರುತ್ತದೆ. ಹೀಗಾಗಿ ಚಯಾಪಚಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಹಸಿರು ಕಡಲೆ ಕಾಳು ತಿನ್ನುವುದರಿಂದ ಕರುಳಿನ ಕ್ಯಾನ್ಸರ್ಬರುವ ಅಪಾಯವೂ ಕಡಿಮೆಯಾಗುತ್ತದೆ.

ಹೃದಯದ ಆರೋಗ್ಯಕ್ಕೆ :
ಹಸಿರು ಕಡಲೆ ಕಾಳು ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೂದಲ ಬೆಳವಣಿಗೆಗೆ :
ಹಸಿರು ಕಡಲೆ ಕಾಳಿನಲ್ಲಿ ಪ್ರೋಟೀನ್ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಇದು ಕೂದಲನ್ನು ಬೇರಿನಿಂದಲೇ ಬಲಪಡಿಸುವ ಕೆಲಸ ಮಾಡುತ್ತದೆ. ಒಣ ತ್ವಚೆಯ ಸಮಸ್ಯೆಯನ್ನೂ ದೂರ ಮಾಡುತ್ತದೆ.

ಮಾನಸಿಕ ಆರೋಗ್ಯಕ್ಕೆ :
ಹಸಿರು ಕಡಲೆ ಕಾಳಿನಲ್ಲಿ ಫೋಲೇಟ್ ಸಮೃದ್ಧವಾಗಿರುತ್ತದೆ. ಇದು ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಹಸಿರು ಕಡಲೆ ಕಾಲು ತಿನ್ನುವುದರಿಂದ ಖಿನ್ನತೆಯಂತಹ ಸಮಸ್ಯೆಗಳು ದೂರವಾಗುತ್ತವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲುಡೋ ಗೇಮ್​ನಿಂದ ಹುಟ್ಟಿದ ಪ್ರೀತಿ.

Mon Jan 23 , 2023
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಾಕಿಸ್ತಾನ  ಮೂಲದ ಯುವತಿಯನ್ನು ಬಂಧಿಸಲಾಗಿದೆ. ಬಂಧಿತಳನ್ನು ಇಕ್ರಾ ಜೀವನಿ (19) ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಮದುವೆಯಾಗಿ ನಗರದ ಸರ್ಜಾಪುರ ರಸ್ತೆಯ ಜನ್ನಸಂದ್ರದಲ್ಲಿ ವಾಸವಾಗಿದ್ದಳು. ಆಕೆಯನ್ನು ಬೆಳ್ಳಂದೂರು ಪೊಲೀಸರು  ಬಂಧಿಸಿದ್ದಾರೆ. ನೇಪಾಳ (Nepal)ದ ಪಾಸ್​ಪೋರ್ಟ್ ಬಳಸಿ ನಗರಕ್ಕೆ ಬಂದಿದ್ದ ಇಕ್ರಾ, ಪಾಕಿಸ್ತಾನ  ದಲ್ಲಿರುವ ತನ್ನ ತಾಯಿಯನ್ನು ಸಂಪರ್ಕಿಸಲು ಯತ್ನಿಸಿದ್ದಳು. ಇದರ ಬಗ್ಗೆ ರಾಜ್ಯ ಪೊಲೀಸರಿಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಇದನ್ನು […]

Advertisement

Wordpress Social Share Plugin powered by Ultimatelysocial