ಆಸ್ಟ್ರೇಲಿಯ:ಭಾರತ ಫೈನಲ್‌ ಗೂ ಮಿಗಿಲಾದ ಪೈಪೋಟಿ ̤

ಕೂಲಿಜ್‌  : ಕಿರಿಯರ ವಿಶ್ವಕಪ್‌ ಕೂಟದ ದ್ವಿತೀಯ ಸೆಮಿಫೈನಲ್‌ನಲ್ಲಿ ಪ್ರಬಲ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯ ದೊಡ್ಡ ಕಾಳಗಕ್ಕೆ ಅಣಿಯಾಗಿವೆ. ಬುಧವಾರ ಸಂಜೆ ಇಲ್ಲಿನ “ಕೂಲಿಜ್‌ ಕ್ರಿಕೆಟ್‌ ಗ್ರೌಂಡ್‌’ನಲ್ಲಿ ಫೈನಲ್‌ಗೂ ಮಿಗಿಲಾದ ಜಿದ್ದಾಜಿದ್ದಿ ಪೈಪೋಟಿ ನಡೆಯುವ ಎಲ್ಲ ಸಾಧ್ಯತೆ ಇದೆ.ಈ ಮುಖಾಮುಖಿಯಲ್ಲಿ ಭಾರತದ ಪೂರ್ಣ ಸಾಮರ್ಥ್ಯದ ತಂಡ ಕಣಕ್ಕಿಳಿಯುವುದು ಅಭಿಮಾನಿಗಳ ಪಾಲಿಗೆ ಖುಷಿಯ ಸಮಾಚಾರ. ಯಶ್‌ ಧುಲ್‌ ಸಹಿತ ಒಂದಷ್ಟು ಮಂದಿ ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಕ್ವಾರ್ಟರ್‌ ಫೈನಲ್‌ನಲ್ಲಿ ಆಡಲಿಳಿದಿದ್ದರು. ಇದೇ ವೇಳೆ ಉಸ್ತುವಾರಿ ನಾಯಕ ನಿಶಾಂತ್‌ ಸಿಂಧು ಅವರ ಫಲಿತಾಂಶ ಪಾಸಿಟಿವ್‌ ಬಂತು. ಇವರೀಗ ಚೇತರಿಸಿಕೊಂಡಿರುವುದು ಸಮಾಧಾನಕರ ಸಂಗತಿ.ಸಂಘಟಿತ ಹೋರಾಟಸಿಂಧು ಆಗಮನದಿಂದ ಭಾರತದ ಬ್ಯಾಟಿಂಗ್‌ ವಿಭಾಗ ಹೆಚ್ಚು ಬಲಿಷ್ಠಗೊಳ್ಳಲಿದೆ. ಇದರ ತುರ್ತು ಅಗತ್ಯವೂ ಭಾರತಕ್ಕಿದೆ. ಏಕೆಂದರೆ, ಕ್ವಾರ್ಟರ್‌ ಫೈನಲ್‌ನಲ್ಲಿ ಬಾಂಗ್ಲಾದೇಶದ 111 ರನ್ನುಗಳ ಸಣ್ಣ ಮೊತ್ತವನ್ನು ಬೆನ್ನಟ್ಟುವಾಗ ನಮ್ಮವರ ಬ್ಯಾಟಿಂಗ್‌ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಈ ಹಂತದಲ್ಲಿ 5 ವಿಕೆಟ್‌ಗಳು ಉರುಳಿದವು ಎನ್ನುವುದಕ್ಕಿಂತ ಸಣ್ಣ ಮೊತ್ತವೆಂಬ ನಿರ್ಲಕ್ಷ್ಯ ಎಂಬುದು ಎಲ್ಲೋ ಒಂದು ಕಡೆ ಮನೆ ಮಾಡಿಕೊಂಡಂತಿತ್ತು.ಬಾಂಗ್ಲಾಕ್ಕಿಂತ ಆಸ್ಟ್ರೇಲಿಯ ಹೆಚ್ಚು ಪ್ರಬಲ. ಬ್ಯಾಟಿಂಗ್‌, ಬೌಲಿಂಗ್‌ ಎರಡೂ ಬಲಿಷ್ಠ. ಹೀಗಾಗಿ ಭಾರತ ಹೆಚ್ಚು ಸಂಘಟನಾತ್ಮಕ ಹೋರಾಟ ತೋರಬೇಕಾದ ಅಗತ್ಯವಿದೆ. ಈ ಸಂದರ್ಭದಲ್ಲಿ, ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಸೋಲಿಸಿದ ಆತ್ಮವಿಶ್ವಾಸವೂ ಜತೆಗೂಡಬೇಕಿದೆ.ಭಾರತದ ಬ್ಯಾಟಿಂಗ್‌ ಲೈನ್‌ಅಪ್‌ ಬಲಿಷ್ಠ ಎಂಬುದರಲ್ಲಿ ಅನುಮಾನವೇ ಇಲ್ಲ. ರಘುವಂಶಿ, ಹರ್ನೂರ್‌, ಬಾವಾ, ಧುಲ್‌, ಸಿಂಧು, ರಶೀದ್‌… ಹೀಗೆ ಸಾಲು ಸಾಲು ಹೀರೋಗಳಿದ್ದಾರೆ. ಎಲ್ಲರೂ ಕೂಟದ ಒಂದಲ್ಲ ಒಂದು ಪಂದ್ಯದಲ್ಲಿ ಬ್ಯಾಟಿಂಗ್‌ ಅಬ್ಬರ ತೋರಿದವರೇ. ಆದರೆ ಕಾಂಗರೂ ವಿರುದ್ಧ ಇವರೆಲ್ಲ ಹೆಚ್ಚು ಜವಾಬ್ದಾರಿಯುತ ನಿರ್ವಹಣೆ ನೀಡಬೇಕಾದ ಅಗತ್ಯವಿದೆ.ವೈವಿಧ್ಯಮಯ ಬೌಲಿಂಗ್‌ ̤ಭಾರತದ ಬೌಲಿಂಗ್‌ ಹೆಚ್ಚು ವೈವಿಧ್ಯಮಯ. ಬಾಂಗ್ಲಾವನ್ನು ಕಾಡಿದ ಎಡಗೈ ಮಧ್ಯಮ ವೇಗಿ ರವಿಕುಮಾರ್‌, ಸೀಮರ್‌ ರಾಜ್ಯವರ್ಧನ್‌, ಆಲ್‌ರೌಂಡರ್‌ ಬಾವಾ, ಸ್ಪಿನ್ನರ್‌ಗಳಾದ ಓಸ್ವಾಲ್‌ ಮತ್ತು ತಾಂಬೆ ಮೇಲೆ ತಂಡ ಭಾರೀ ನಿರೀಕ್ಷೆ ಇರಿಸಿದೆ.ಈ ಕೂಟದಲ್ಲೇ ಭಾರತಕ್ಕೆ ಎದುರಾಗಲಿರುವ ನೈಜ ಅಗ್ನಿಪರೀಕ್ಷೆ ಇದಾಗಿದೆ. ದಕ್ಷಿಣ ಆಫ್ರಿಕಾ, ಐರ್ಲೆಂಡ್‌, ಉಗಾಂಡ, ಬಾಂಗ್ಲಾದೇಶ ಎದುರು ಗೆಲುವಿನ ನಿರ್ವಹಣೆ ನೀಡಿದರೂ ಆಸೀಸ್‌ ವಿರುದ್ಧ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾದುದು ಅಗ ತ್ಯ .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಯುಪಿ ಚುನಾವಣೆ: ಮಗ ಪಕ್ಷ ತೊರೆಯುವ ವದಂತಿಯನ್ನು ಬಿಜೆಪಿಯ ರೀಟಾ ಬಹುಗುಣ ತಳ್ಳಿಹಾಕಿದ್ದಾರೆ

Wed Feb 2 , 2022
  ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಜೆಪಿ ಸಂಸದೆ ರೀಟಾ ಬಹುಗುಣ ಅವರು ತಮ್ಮ ಪುತ್ರ ಪಕ್ಷ ತೊರೆಯುತ್ತಾರೆ ಎಂಬ ವದಂತಿ ಆಧಾರ ರಹಿತವಾಗಿದ್ದು, ಪಕ್ಷದ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.ಆಕೆಯ ಮಗ ಲಕ್ನೋದಿಂದ ಬಿಜೆಪಿ ಟಿಕೆಟ್ ಪಡೆಯಲು ವಿಫಲವಾದ ನಂತರ, ಅವರು ಸಮಾಜವಾದಿ ಪಕ್ಷಕ್ಕೆ ಸೇರುವ ಮಾತುಕತೆಗಳು ಸುತ್ತುತ್ತಿವೆ. ಯುಪಿ ಚುನಾವಣೆಯಲ್ಲಿ ಬಿಜೆಪಿಯ ಪ್ರತಿಸ್ಪರ್ಧಿಯಾಗಿರುವ ಸಮಾಜವಾದಿ ಪಕ್ಷವು ಮಯಾಂಕ್ ಜೋಶಿ ಎಂದು ಹಿಂದಿನ ವರದಿಗಳು ಹೇಳಿದ್ದವು.ಆದರೆ ರೀಟಾ ಬಹುಗುಣ ಇಂಡಿಯಾ ಟುಡೇಗೆ, […]

Advertisement

Wordpress Social Share Plugin powered by Ultimatelysocial