ಗುಜರಾತ್‌ನಲ್ಲಿ ಬಿಪೊರ್‌ಜಾಯ್‌ ಚಂಡಮಾರುತದ ಘರ್ಜನೆ!

 

ಗುಜರಾತ್‌ನಲ್ಲಿ ಬಿಪೊರ್‌ಜಾಯ್‌ ಚಂಡಮಾರುತ ಅಪ್ಪಳಿಸಿದ್ದುಅಲ್ಲಿನ ಕಚ್‌ ಜಿಲ್ಲೆಯ ಜಕಾವು ಬಂದರಿಗೆ ಚಂಡಮಾರುತ ಅಪ್ಪಳಿಸಿದೆ.

ಸುಮಾರು 100 ರಿಂದ 150 ಕಿ. ಮೀಟರ್‌ ವೇಗದಲ್ಲಿ ಸೈಕ್ಲೋನ್‌ಗಳು ಅಭ್ಭರಿಸಲಿದೆ ಎಂದು ವರದಿಗಳು ಹೇಳುತ್ತಿವೆ. ಈಗಾಗಲೇ ಗುಜರಾತ್‌ ತೀರಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿವೆ.

ಈಗಾಗಲೇ 1ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸುಮಾರು 100 ಕಿ .ಮೀ ವೇಗದಲ್ಲಿ ಗಾಳಿ ಬಿಸುತ್ತಿದೆ ಹಲವೆಡೆ ಭಾರಿ ಮಳೆಯಾಗುತ್ತಿವೆ.

ಬಿಪೊರ್‌ಜಾಯ್‌ ಚಂಡಮಾರುತ ವಾಯುವ್ಯ ಭಾಗದತ್ತ ಮುನ್ನುಗ್ಗುತ್ತಿದ್ದು,ಗಂಟೆಗೆ 150 ಕಿ. ಮೀ ವೇಗದ ಬಿರುಗಾಳಿಯೊಂದಿಗೆ ಇಂದು ಖಜಾವು  ಬಂದರಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇತ್ತ ಚಂಡಮಾರುತದ ಹೊಡೆತಕ್ಕೆ ಭೂ ಕುಸಿತದ ಪ್ರಕ್ರಿಯೆ ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್‌ ಪ್ರದೇಶಗಳಲ್ಲಿ ಪ್ರಾರಂಭವಾಗಿದ್ದು ,ಮಧ್ಯರಾತ್ರಿಯವರೆಗೆ ಮುಂದು ವರೆಯುವ ನಿರಿಕ್ಷೇಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ಚಂಡಮಾರುತ ಅಪ್ಪಳಿಸುತ್ತಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗತ್ತಿದೆ.

 

ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ರವರುʻಎಲ್ಲಾ ಸೇನಾ ಪಡೆಗಳು ಸನ್ನದ್ಧ ಸ್ಥಿತಿಯಲ್ಲಿ ಇರಬೇಕು, ರಕ್ಷಣೆಗೆ ಧಾವಿಸಬೇಕು ʼ ಎಂದು ಮೂರು ರಕ್ಷಣಾ ವಲಯಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.ಇದರ ಬೇನ್ನಲ್ಲೇ ಸೇನೆ ನೌಕಾಪಡೆ ಹಾಗೂ ಬಿಎಪ್‌ಐ ತಂಡಗಳನ್ನು ನಿಯೋಜಿಸಿದೆ.

18 ಎನ್‌ಡಿಆರ್‌ಎಫ್‌ ತಂಡಗಳು ,12 ಎಸ್‌ಡಿಆರ್‌ಎಫ್‌, 115 ರಾಜ್ಯ ರಸ್ತೆ ಹಾಗೂ ನಿರ್ಮಾಣ ಕೇಂದ್ರದ ತಂಡಗಳು,397 ವಿದ್ಯುತ್‌  ಇಲಾಖೆಯ ತಂಡಗಳನ್ನ ರಕ್ಷಣಾ ಕೆಲಸಕ್ಕೆ ನಿಯೋಜಿಸಲಾಗಿದೆ. ಈಗಾಗಲೇ ಹಲವು ಭಾಗಗಳಲ್ಲಿ ಬಿರುಗಾಳಿಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಅಲ್ಲಿ ವಿದ್ಯುತ್‌ ಇಲಾಖೆಯ ತಂಡಗಳು ವಿದ್ಯುತ್‌ ಮರು ಸಂಪರ್ಕಕ್ಕೆ ಶ್ರಮಿಸುತ್ತಿದೆ. ದೂರವಾಣಿ ಸಂಪರ್ಕ ಕಡಿತವಾಗುವ ಸಾಧ್ಯತೆ ಇದ್ದು ರಕ್ಷಣಾ ತಂಡಗಳಗೆ ಮುಂಜಾಗ್ರಾತ ಕ್ರಮವಾಗಿ ಸ್ಯಾಟಲೈಟ್‌  ಪೋನ್‌ಗಳನ್ನು ರಕ್ಷಣಾ ತಂಡಗಳಿಗೆ ನೀಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:
Please follow and like us:
Please follow and like us:
Please follow and like us:

Leave a Reply

Your email address will not be published. Required fields are marked *

Next Post

ಅಕ್ರಮ ಮರಳು ದಂಧೆ ಟ್ರ್ಯಾಕ್ಟರ್ ಹರಿದು ಪೊಲೀಸ್ ಠಾಣೆ ಪೇದೆ ಬಲಿ

Fri Jun 16 , 2023
  ಅಕ್ರಮ ಮರಳು ಸಾಗಣೆ ತಡೆಯಲು ಹೋದ ಪೇದೆ ಮೇಲೆ  ವ್ಯಕ್ತಿಯೊಬ್ಬ ಟ್ರ್ಯಾಕ್ಟರ್ ಹರಿಸಿದ್ದರಿಂದ ಪೇದೆ ಮೃತಪಟ್ಟ ಘಟನೆ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಪೋಲಿಸ್ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ನೆಲೋಗಿ ಠಾಣೆಯ ಮುಖ್ಯ ಪೇದೆ ಮಯೂರ ಚೌವ್ಹಾಣ್ ಚೌಡಾಪುರ ತಾಂಡಾ (50) ಮೃತ ಪಟ್ಟ್‌ ದುರ್ದೈವಿ.ಭೀಮನದಿಯಲ್ಲಿನ ಅಕ್ರಮ ಮರಳು ಸಾಗಣೆ ತಡೆಯಲು ಹುಲ್ಲೂರ ಬಳಿ ಚೆಕ್ ಪೋಸ್ಟ್ ಹಾಕಲಾಗಿತ್ತು,ಇಲ್ಲಿ ಮರಳು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ […]

Advertisement

Wordpress Social Share Plugin powered by Ultimatelysocial