ಹುಬ್ಬಳ್ಳಿಯ ಗುಂಪು ಗಲಭೆಯ ಹಿಂದೆ ಬಿಜೆಪಿ ಕೈವಾಡ!

ಬೆಂಗಳೂರು, ಏ.21- ಹುಬ್ಬಳ್ಳಿಯ ಗುಂಪು ಗಲಭೆಯ ಹಿಂದೆ ಬಿಜೆಪಿ ಕೈವಾಡವಿದ್ದು, ಮೊದಲು ಆ ಕುರಿತು ತನಿಖೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶೇ.40ರಷ್ಟು ಕಮಿಷನ್ ಲಂಚದ ಹಗರಣದಿಂದ ಉಂಟಾಗುತ್ತಿದ್ದ ಮಾನ ಹಾನಿಯನ್ನು ತಪ್ಪಿಸಿಕೊಳ್ಳಲು ವಿಷಾಂತರಿಸುವ ಸಲುವಾಗಿ ಬಿಜೆಪಿಯವರೇ ವಿವಾದಿತ ಸಾಮಾಜಿಕ ಫೋಸ್ಟ್ ಹಾಕಿದ್ದಾರೆ. ಅದರ ಬೆನ್ನಲ್ಲೆ ಗಲಭೆಯಾಗಿದೆ ಎಂದಿದ್ದಾರೆ.

ಗಲಭೆಯ ವೇಳೆ ಶಾಂತಿ ಕಾಪಾಡಲು ಕಾಂಗ್ರೆಸ್‍ನ ಎಲ್ಲಾ ನಾಯಕರು ಪ್ರಯತ್ನ ಪಟ್ಟಿದ್ದಾರೆ. ಕೆಲವು ಕಿಡಿಗೇಡಿಗಳು ಕಾನೂನು ಕೈಗೆ ತೆಗೆದುಕೊಳ್ಳಲು ಯತ್ನಿಸಿದಾಗ ಪೊಲೀಸರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಸೇರಿದಂತೆ ನಮ್ಮ ನಾಯಕರಿಗೆ ಮನವಿ ಮಾಡಿ ಪರಿಸ್ಥಿತಿ ತಿಳಿಗೊಳಿಸಲು ಕೇಳಿ ಕೊಂಡಿದ್ದಾರೆ. ಆ ಮನವಿಯ ಪ್ರಕಾರ ನಮ್ಮ ಮುಖಂಡರು ಸ್ಥಳಕ್ಕೆ ಹೋಗಿದ್ದು ಶಾಂತಿಯಿಂದಿರಲು ಜನರಲ್ಲಿ ಮನವಿ ಮಾಡಿದ್ದಾರೆ. ಆ ವೇಳೆ ಅಲ್ತಾಫ್ ಅವರಿಗೆ ಪೆಟ್ಟು ಬಿದಿದೆ. ನೋವು ಉಂಡರೂ ಶಾಂತಿ ಪಾಲನೆ ಶತ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದರು.

ಟ್ವೀಟ್ ಮಾಡಿ ಗಲಭೆಗೆ ಕಾರಣವಾದ ಬಿಜೆಪಿಯವರ ಬಗ್ಗೆ ಮೊದಲು ತನಿಖೆಯಾಗಬೇಕು, ಅದನ್ನು ಬಿಟ್ಟು ಗಲಭೆಗೆ ಕಾಂಗ್ರೆಸ್ ಕಾರಣ ಎಂದು ಸುಳ್ಳು ಪ್ರಚಾರ ನಡೆಸಲಾಗುತ್ತಿದೆ. ಶೇ.40ರಷ್ಟು ಕಮಿಷನ್ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲ್ಲು ತೂರುವ ಸಂಸ್ಕೃತಿ ಬಿಡಬೇಕು. ಇಲ್ಲದಿದ್ದರೆ ಕಲ್ಲು ತೂರುವವರ ಬಳಿಗೆ ಬುಲ್ಡೋಜರ್ ಬರಲಿದೆ.

Thu Apr 21 , 2022
ಮೈಸೂರು: ಮುಸ್ಲಿಮರ ಮನಸ್ಥಿತಿ ಬದಲಾಗಬೇಕಿದೆ. ಭಾರತದ ಮುಸ್ಲಿಮರನ್ನು ಮೆಕ್ಕಾ ಮದೀನಾದಿಂದ ಕರೆತಂದಿಲ್ಲ. ಮುಸ್ಲಿಮರಲ್ಲೂ ನಮ್ಮ ಡಿಎನ್‌ಎ ಇರುವುದು, ಅವರಲ್ಲೂ ನಮ್ಮದೇ ರಕ್ತ ಹರಿಯುತ್ತಿದೆ. ಕಲ್ಲು ತೂರುವ ಸಂಸ್ಕೃತಿ ಬಿಡಬೇಕು. ಇಲ್ಲದಿದ್ದರೆ ಕಲ್ಲು ತೂರುವವರ ಬಳಿಗೆ ಬುಲ್ಡೋಜರ್ ಬರಲಿದೆ. ಉತ್ತರ ಪ್ರದೇಶದಲ್ಲಿ ಇರುವಂತೆ ಇಲ್ಲಿಯೂ ಆಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ, ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆ ಸಂಭವಿಸಿದ […]

Advertisement

Wordpress Social Share Plugin powered by Ultimatelysocial