ಮನೆ ಮಗ,ಬ್ಯುಸಿನೆಸ್ ಮ್ಯಾನ್‌,ಫೈಟ್‌ ನಲ್ಲಿ ದಳಪತಿ ವಿಜಯ್ ಶೈನ್

ಚೆನ್ನೈ: ದಳಪತಿ ವಿಜಯ್‌ ಅಭಿನಯದ ಕಾಲಿವುಡ್‌ ನ ಈ ವರ್ಷದ ಬಹು ನಿರೀಕ್ಷಿತ ಸಿನಿಮಾದಲ್ಲಿ ಒಂದಾಗಿರುವ ʼವಾರಿಸುʼ ಸಿನಿಮಾ ಫ್ಯಾಮಿಲಿ ಡ್ರಾಮಾ, ಆಯಕ್ಷನ್ ಅಂಶಗಳುಳ್ಳ ಟ್ರೇಲರ್‌ ರಿಲೀಸ್‌ ಆಗಿದೆ.

ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿರುವ ʼವಾರಿಸುʼ ಟ್ರೇಲರ್‌ ನಲ್ಲಿ ದಳಪತಿ ವಿಜಯ್‌ ಅಭಿಮಾನಿಗಳಿಗೆ ಇಷ್ಟವಾಗುವ ಮಾಸ್‌ ಲುಕ್‌, ಎಮೋಷನಲ್‌ ಕ್ಯಾರೆಕ್ಟರ್‌, ಡ್ಯಾನ್ಸ್‌ ನಂಬರ್‌ ಗಳನ್ನು ತೋರಿಸಲಾಗಿದೆ.

ಮೇಲ್ನೋಟಕ್ಕೆ ವಿಜಯ್‌ ಸಿನಿಮಾದಲ್ಲಿ ಬ್ಯುಸಿನೆಸ್‌ ಮ್ಯಾನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಕಂಡು ಬರುತ್ತದೆ. ಒಂದು ಕುಟುಂಬದ ಕಥೆ ಇದಾಗಿದ್ದು, ಆ ಕುಟುಂಬದಲ್ಲಿ ವಿಜಯ್‌ ಅವರು ಮನೆಯ ಕಿರಿಯ ಮಗನಂತೆ ಟ್ರೇಲರ್‌ ನೋಡುವಾಗ ಮೇಲ್ನೋಟಕ್ಕೆ ಕಾಣುತ್ತದೆ.

ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ವಿಜಯ್‌ ಲವರ್‌ ಬಾಯ್‌ ಆಗಿಯೂ ಗಮನ ಸೆಳೆಯುವ ಅಂಶವನ್ನು ಟ್ರೇಲರ್‌ ನಲ್ಲಿ ತೋರಿಸಲಾಗಿದೆ. ಇನ್ನುಳಿದಂತೆ ಸ್ಟೈಲಿಸ್ಟ್‌ ಆಗಿ ಕಾಣಿಸಿಕೊಳ್ಳುವ ವಿಜಯ್‌ ಅವರ ಫೈಟ್‌ ಸೀನ್‌ ಗಳು ಅಭಿಮಾನಿಗಳಿಗೆ ಇಷ್ಟವಾಗುದಂತೂ ಖಂಡಿತ.

ದಿಲ್‌ ರಾಜು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಎಸ್.ತಮನ್‌ ಮ್ಯೂಸಿಕ್‌, ಕಾರ್ತಿಕ್ ಪಳನಿ ಛಾಯಾಗ್ರಹಣ ಮಾಡಿದ್ದಾರೆ. ಶರತ್‌ ಕುಮಾರ್‌, ಜಯಸುಧಾ, ಪ್ರಕಾಶ್‌ ರಾಜ್‌, ಶಾಮ್‌, ಸಂಗೀತ ಮೊದಲಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಪುಷ್ಪತಾಯಿ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು. ಸಿದ್ದಾಪುರ

Thu Jan 5 , 2023
ಪುಷ್ಪತಾಯಿ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು. ಸಿದ್ದಾಪುರ 17 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುವ ಸಮಾರಂಭ ಪ್ರಭುಲಿಂಗೇಶ್ವ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಸಮಾರಂಭಕ್ಕೆ ಚಾಲನೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು ದಿವ್ಯ ಸಾನಿಧ್ಯವನ್ನು ಮ.ನಿ.ಪ್ರ ಡಾ. ಚನ್ನಬಸವ ಮಹಾಸ್ವಾಮಿಗಳು ಒಲೆಮಠ, ಜಮಖಂಡಿ ಅವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭರತನಾಟ್ಯ ಹಾಗೂ ನೃತ್ಯಗಳು ಜರುಗಿದವು. […]

Advertisement

Wordpress Social Share Plugin powered by Ultimatelysocial