ದೀಪಿಕಾ ದಾಸ್ ಹುಟ್ಟುಹಬ್ಬ ನೂತನ ಚಿತ್ರದ ಪೋಸ್ಟರ್ ಬಿಡುಗಡೆ.

 

‘ಬಿಗ್ ಬಾಸ್ ಕನ್ನಡ 7’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ದೀಪಿಕಾ ದಾಸ್ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಸೀನಿಯರ್ ಆಗಿ ಎಂಟ್ರಿಕೊಟ್ಟು ವೀಕ್ಷಕರ ಗಮನ ಸೆಳೆದಿದ್ದರು. ‘ಬಿಗ್ ಬಾಸ್’ ಮನೆಯಲ್ಲಿದ್ದಾಗ ಯಾವ ವಾದ, ವಿವಾದ, ಜಗಳಗಳಿಗೆ ನಾಂದಿ ಹಾಡದ ದೀಪಿಕಾ ದಾಸ್‌ಗೆ ದೊಡ್ಡ ಫ್ಯಾನ್ ಫಾಲೋವಿಂಗ್ ಹುಟ್ಟಿಕೊಂಡಿತ್ತು. ‘ಬಿಗ್ ಬಾಸ್’ ಮುಗಿದ ಬಳಿಕ ದೀಪಿಕಾ ದಾಸ್ ಯಾವ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದವರಿಗೆ ಇದೋ ಇಲ್ಲಿದೆ ಗುಡ್ ನ್ಯೂಸ್. ಇಂದು (ಫೆಬ್ರವರಿ 24) ದೀಪಿಕಾ ದಾಸ್ ಅವರ ಜನ್ಮದಿನ. ತಮ್ಮ ಹುಟ್ಟುಹಬ್ಬವನ್ನ ಕುಟುಂಬಸ್ಥರೊಂದಿಗೆ, ಆತ್ಮೀಯರೊಂದಿಗೆ ಹಾಗೂ ಪುಟಾಣಿ ಮಕ್ಕಳ ಜೊತೆಗೆ ದೀಪಿಕಾ ದಾಸ್ ಸೆಲೆಬ್ರೇಟ್ ಮಾಡಿದ್ದಾರೆ. ದೀಪಿಕಾ ದಾಸ್ ಅವರ ಜನ್ಮದಿನದ ಪ್ರಯುಕ್ತ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ದೀಪಿಕಾ ದಾಸ್ ನಟಿಸುತ್ತಿರುವ ನೂತನ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.ದೀಪಿಕಾ ದಾಸ್ ನಟನೆಯ ಹೊಸ ಚಿತ್ರದ ಪೋಸ್ಟರ್ ಇಂದು ರಿಲೀಸ್ ಆಗಿದೆ. ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಆದರೆ, ದೀಪಿಕಾ ದಾಸ್ ಅವರ ಪಾತ್ರದ ಹೆಸರನ್ನು ರಿವೀಲ್ ಮಾಡಲಾಗಿದೆ. ಚಿತ್ರದ ಪೋಸ್ಟರ್ ನೋಡ್ತಿದ್ರೆ, ಇದು ಮಹಿಳಾ ಪ್ರಧಾನ ಅಡ್ವೆಂಚರ್ ಸಿನಿಮಾ ಅಂತ ಭಾಸವಾಗುತ್ತದೆ. ಚಿತ್ರದಲ್ಲಿ ‘ಪಾಯಲ್’ ಆಗಿ ದೀಪಿಕಾ ದಾಸ್ ಕಾಣಿಸಿಕೊಳ್ಳಲಿದ್ದಾರೆ.ದೀಪಿಕಾ ದಾಸ್ ಅಭಿನಯದ ಹೊಸ ಸಿನಿಮಾದ ಹೆಸರು, ನಿರ್ದೇಶಕರು, ತಂತ್ರಜ್ಞರ ತಂಡ ಹಾಗೂ ಉಳಿದ ಕಲಾವಿದರ ಬಗ್ಗೆ ಅತೀ ಶೀಘ್ರದಲ್ಲೇ ಮಾಹಿತಿ ಹಂಚಿಕೊಳ್ಳಲಾಗುವುದು ಎಂದಿದ್ದಾರೆ ನಟಿ ದೀಪಿಕಾ ದಾಸ್.2014 ರಲ್ಲಿ ರಿಲೀಸ್ ಆದ ಸಾಮ್ಯುವೆಲ್ ಟೋನಿ ನಿರ್ದೇಶನದ ‘ದೂಧ್ ಸಾಗರ್’, ತೆಲುಗಿನ ‘ಈ ಮನಸೇ’, 2017ರಲ್ಲಿ ತೆರೆಕಂಡ ‘ಡ್ರೀಮ್ ಗರ್ಲ್’ ಸಿನಿಮಾಗಳಲ್ಲಿ ದೀಪಿಕಾ ದಾಸ್ ನಟಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

`ಆಚಾರ್ಯ' ಸಿನಿಮಾಗಾಗಿ ನಿರ್ಮಿಸಿದ್ದ 20 ಕೋಟಿ ವೆಚ್ಚದ ಸೆಟ್ ಬೆಂಕಿಗಾಹುತಿ,

Wed Mar 1 , 2023
ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ನಟನೆಯ `ಆಚಾರ್ಯ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಸಾಕಷ್ಟು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣವಾದ ಆಚಾರ್ಯ ಸಿನಿಮಾಗಾಗಿ 20 ಕೋಟಿ ವೆಚ್ಚದ ಸೆಟ್‌ನ್ನ ನಿರ್ಮಾಣ ಮಾಡಲಾಗಿತ್ತು. ಆದರೆ ಇದೀಗ ಈ ಸೆಟ್ ಬೆಂಕಿಗಾಹುತಿ ಆಗಿದೆ. ಕೊರಟಾಲ ಶಿವ ನಿರ್ದೇಶನದ `ಆಚಾರ್ಯ’ ಚಿತ್ರದಲ್ಲಿ ಚಿರಂಜೀವಿ, ರಾಮ್ ಚರಣ್ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದರು. ಚಿರಂಜೀವಿ ಅವರ ಖಾಸಗಿ ಜಾಗದಲ್ಲಿ […]

Advertisement

Wordpress Social Share Plugin powered by Ultimatelysocial