‘ಬೆಂಕಿ’ ಅಂಗಳದಿಂದ ಬಂತು ಬಿರುಗಾಳಿಯಂತಹ ಸಾಂಗ್… ಮೋಹಕ ತಾರೆ ರಮ್ಯಾ ರಿಲೀಸ್ ಮಾಡಿದ್ರು ಅನೀಶ್ ಡ್ಯಾನ್ಸಿಂಗ್ ನಂಬರ್!

‘ಬೆಂಕಿ’ ಅಂಗಳದಿಂದ ಬಂತು ಬಿರುಗಾಳಿಯಂತಹ ಸಾಂಗ್… ಮೋಹಕ ತಾರೆ ರಮ್ಯಾ ರಿಲೀಸ್ ಮಾಡಿದ್ರು ಅನೀಶ್ ಡ್ಯಾನ್ಸಿಂಗ್ ನಂಬರ್ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಾಯಕ ನಟ ಅನೀಶ್ ತೇಜೇಶ್ವರ್ ನಟಿಸ್ತಿರುವ ಬಹುನಿರೀಕ್ಷಿತ ಸಿನಿಮಾ ಬೆಂಕಿ ಅಂಗಳದಿಂದ ಮೊದಲ ಗಾನಲಹರಿ ಬಿಡುಗಡೆಯಾಗಿದೆ.ಮೋಹಕ ತಾರೆ ರಮ್ಯಾ ಹಾಡು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.ಒಕೆನಾ ಇದು ಅನೀಶ್ ಡ್ಯಾನ್ಸಿಂಗ್‌ ನಂಬರ್ಸಖತ್ ಕ್ಯಾಚಿ-ಮ್ಯಾಚಿಯಾಗಿರುವ ಒಕೆನಾ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು,ಆನಂದ್ ರಾಜವಿಕ್ರಮ್ ಸಂಗೀತ‌ ನೀಡಿದ್ದು, ಐಶ್ವರ್ಯ ರಂಗರಾಜನ್ ಹಾಗೂ ಪಂಚಮ್ ಜೀವ ಧ್ವನಿಯಾಗಿದ್ದಾರೆ.ಕಲರ್ ಫುಲ್ ಆಗಿ ಮೂಡಿ‌ ಬಂದಿರುವ ಹಾಡಿನಲ್ಲಿ ಅನೀಶ್ ಹಾಗೂ‌ ಸಂಪದ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದು,ಇದು ಅನೀಶ್ ಡ್ಯಾನ್ಸಿಂಗ್‌ ನಂಬರ್ ಗುರು ಅಂತಾ ಮೆಚ್ಚುಗೆ ಮಾತುಗಳು ವ್ಯಕ್ತವಾಗ್ತಿವೆ.ಪಕ್ಕ ಮಾಸ್‌ ಹಾಗೂ ಕಮರ್ಷಿಯಲ್‌ ಬೆಂಕಿ ಸಿನಿಮಾವನ್ನು ವಿಂಕ್‌ವಿಷಲ್‌ ಪ್ರೊಡಕ್ಷನ್‌ ಬ್ಯಾನರ್‌ ನಡಿ ಅನೀಶ್ ತೇಜೇಶ್ವರ್ ನಿರ್ಮಾಣ ಮಾಡ್ತಿದ್ದು,ಇದು ಇವರ ಹತ್ತನೇ ಸಿನಿಮಾವಾಗಿದೆ.ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್‌.ಬಾಬು ಅವರ ಪುತ್ರ ಶಾನ್‌ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.ಅಣ್ಣ-ತಂಗಿ ಸೆಂಟಿಮೆಂಟ್‌ ಕಥೆಯ ಜೊತೆಗೆ,ಹಳ್ಳಿ ಸೊಡಗಿನ ಕಂಪು ಚೆಲ್ಲುವ ಬೆಂಕಿ ಸಿನಿಮಾದಲ್ಲಿ ಶೃತಿ ಪಾಟೀಲ್,ಅಚ್ಯುತ್‌ ಕುಮಾರ್‌,ಸಂಪತ್‌,ಉಗ್ರಂ ಮಂಜು,ಹರಿಣಿ ಸೇರಿದಂತೆ ಅನುಭವಿ ಕಲಾ ಬಳಗವಿದ್ದು,ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣವಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತ ಮಾಡುವ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ

Thu Apr 28 , 2022
ಬೆಂಗಳೂರು : ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತ ಮಾಡುವ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಆರ್ಥಿಕತೆಯನ್ನು ಗಮನಿಸಿದ ನಂತರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಮೇಲಿನ ತೆರಿಗೆಯನ್ನು ಕಡಿತ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಬುಧವಾರ ಕೋವಿಡ್-19 ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರೂ ಕೆಲವು ರಾಜ್ಯಗಳು […]

Advertisement

Wordpress Social Share Plugin powered by Ultimatelysocial