ಧರ್ಮ ಕೀರ್ತಿರಾಜ್ – ಸೋನು ಗೌಡ ನಟನೆಯ ‘ವಸುಂಧರದೇವಿ’ ಚಿತ್ರದ ಟೀಸರ್‌ ರಿಲೀಸ್‌.

 

ನಟ ಧರ್ಮ ಕೀರ್ತಿರಾಜ್ ಹಾಗೂ ಸೋನುಗೌಡ ಮುಖ್ಯಭೂಮಿಕೆಯಲ್ಲಿರುವ ‘ವಸುಂಧರದೇವಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ನಟಿ ಸೋನು ಗೌಡ ಅವರಿಗೆ ಮುಖ್ಯಮಂತ್ರಿ ಪಾತ್ರವಿದೆ. ಹಾಗೆಯೇ ಪೊಲೀಸ್ ಅಧಿಕಾರಿಯಾಗಿ ಧರ್ಮ ಕೀರ್ತಿರಾಜ್ ಕಾಣಿಸಿಕೊಂಡಿದ್ದಾರೆ. ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಹಿನ್ನೆಲೆಯಲ್ಲಿ ಮಾಧ್ಯಮ ಜೊತೆ ಖುಷಿ ಹಂಚಿಕೊಂಡಿದೆ ಚಿತ್ರತಂಡ.
ಈ ವೇಳೆ ಧರ್ಮ ಕೀರ್ತಿರಾಜ್ ಅವರ ಪೋಷಕರು ಕೂಡ ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು. ‘ನನ್ನ ಚಿತ್ರಕ್ಕೆ ಶುಭ ಹಾರೈಸಲು‌ ನನ್ನ ಅಪ್ಪ- ಅಮ್ಮ ಬಂದಿದ್ದಾರೆ. ಅವರಿಗೆ ಧನ್ಯವಾದ. ಈ ಹಿಂದೆ ನಾನು ನಟಿಸಿರುವ ಚಿತ್ರಗಳಿಗಿಂತ ಈ ಚಿತ್ರದ ಪಾತ್ರ ತುಂಬ ವಿಭಿನ್ನವಾಗಿದೆ. ನನ್ನ ಹೇರ್ ಸ್ಟೈಲ್ ಕೂಡ ಈ ಚಿತ್ರಕ್ಕಾಗಿ ಬದಲಿಸಿಕೊಂಡಿದ್ದೇನೆ. ಮಹೇಶ್ ಒಂದೊಳ್ಳೆಯ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಅಶೋಕ್ ನಿರ್ಮಾಣ ಮಾಡಿದ್ದಾರೆ. ಸೋನು ಗೌಡ ಸೇರಿದಂತೆ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದರು ನಟ ಧರ್ಮ ಕೀರ್ತಿರಾಜ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಹೊಸ ವರ್ಷದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರೋ ಬ್ರಿಗೇಡ್ ರೋಡ್, ಎಮ್‌ಜಿ ರೋಡ್..

Thu Dec 22 , 2022
ಈ‌ ಬಾರಿ ಬ್ರಿಗೇಡ್, ಎಮ್ ಜಿ ರೋಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸೆಲೆಬ್ರೇಷನ್ ಸಾಧ್ಯತೆ.. ಹೀಗಾಗಿ ಈ ಬಾರಿ ಹೊಸ ಪ್ಲಾನ್ ಹಾಕಿ ಸೆಲೆಬ್ರೇಷನ್ ಕಂಟ್ರೋಲ್ ಮಾಡಲಿರೋ ಸೆಂಟ್ರಲ್ ಡಿಸಿಪಿ..! #3 ಪ್ಲಾನ್ ಮೂಲಕ ಸೆಲೆಬ್ರೇಷನ್ ಕಂಟ್ರೋಲ್ ಮಾಡಲು ಶ್ರೀನಿವಾಸ್ ಗೌಡ ಚಿಂತನೆ.. ಪೊಲೀಸ್ ಇಲಾಖೆ ಹಿಸ್ಟರಿಯಲ್ಲೇ ಹೊಸ ಸ್ಟೈಲ್‌ನಲ್ಲಿ ಭದ್ರತೆಗೆ ಪ್ಲಾನ್..! ಸಿನಿಮಾ‌ ಸ್ಟೈಲ್ ನಲ್ಲಿ ಬಿಗಿ ಬಂದೋಬಸ್ತ್ ನಿಯೋಜನೆಗೆ ಚಿಂತನೆ.. ಹಾಗಾದ್ರೆ ಏನದು ಸೆಂಟ್ರಲ್ ಡಿಸಿಪಿ ಪ್ಲಾನ್..? […]

Advertisement

Wordpress Social Share Plugin powered by Ultimatelysocial