ಅಥರ್ವನ ಅವತಾರದಲ್ಲಿ ಎಂ.ಎಸ್.ಧೋನಿ: ಇದ್ಯಾಯ ಸಿನಿಮಾ!

ಕ್ರಿಕೆಟಿಗ ಎಂಎಸ್ ಧೋನಿಗೂ ಸಿನಿಮಾ ರಂಗಕ್ಕೂ ಹತ್ತಿರದ ಸಂಬಂಧವೇ ಇದೆ. ಎಂ.ಎಸ್.ಧೋನಿ ಕುರಿತಾಗಿ ಈಗಾಗಲೇ ಸಿನಿಮಾ ಸಹ ಆಗಿದೆ. ಎಂ.ಎಸ್.ಧೋನಿ ಸಹ ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಆದರೆ ಧೋನಿ ಯಾವುದೇ ಸಿನಿಮಾದಲ್ಲಿ ಈವರೆಗೆ ನಟಿಸಿಲ್ಲ.ಈ ನಡುವೆ ಎಂಎಸ್ ಧೋನಿ ವೀರ ಯೋಧನ ಅವತಾರದಲ್ಲಿರುವ ಪೋಸ್ಟರ್‌ಗಳು, ಮೋಷನ್ ಪೋಸ್ಟರ್‌ಗಳು ಬಿಡುಗಡೆ ಆಗಿದ್ದು, ಎಂಎಸ್ ಧೋನಿ ಸಿನಿಮಾ ನಟನೆ ಆರಂಭಿಸಿದರೆ ಎಂಬ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಸ್ವತಃ ಎಂಎಸ್ ಧೋನಿ ‘ಅಥರ್ವ’ ಹೆಸರಿನ ತಮ್ಮದೇ ಗ್ರಾಫಿಕ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಇದು ಯಾವುದೇ ಸಿನಿಮಾದ ಮೋಷನ್ ಪೋಸ್ಟರ್ ಅಲ್ಲ ಬದಲಿಗೆ ಗ್ರಾಫಿಕ್ ಕಾದಂಬರಿಯ ಮೋಷನ್ ಪೋಸ್ಟರ್ ಆಗಿದೆ.’ಅಥರ್ವ’ ಎಂಬುದು ಗ್ರಾಫಿಕ್ ಕಾದಂಬರಿ ಆಗಿದ್ದು, ಕಾದಂಬರಿಯಲ್ಲಿ ಅಥರ್ವನ ಪಾತ್ರಕ್ಕೆ ಎಂ.ಎಸ್.ಧೋನಿಯ ಮುಖ ಬಳಸಲಾಗಿದೆ. ಕಾದಂಬರಿಯನ್ನು ಧೋನಿ ಅವರೇ ಪ್ರೆಸೆಂಟ್ ಮಾಡುತ್ತಿದ್ದಾರೆ.ಎಂಎಸ್ ಧೋನಿ ಪೌರಾಣಿಕ ಕಾಲದ ವೀರ ಯೋಧನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರಿ ಗಾತ್ರದ ಪ್ರಾಣಿಗಳ ಮೇಲೆ ಯುದ್ಧಕ್ಕೆ ಹೊರಟಿದ್ದಾರೆ. ಒಂದು ಕೈಯಲ್ಲಿ ರಕ್ತ ಮೆತ್ತಿದ ಭಯಾನಕ ಕತ್ತಿ, ಕತ್ತಿನಲ್ಲಿ ಹೆದರಿಕೆ ಹುಟ್ಟಿಸುವಂಥಹಾ ಆಭರಣಗಳು ಹಾಕಿಕೊಂಡು ವೈರಿಗಳ ರುಂಡವನ್ನು ಧೋನಿ ಚಂಡಾಡುತ್ತಿರುವಂತೆ ಗ್ರಾಫಿಕ್ ವಿಡಿಯೋ ಇದೆ.’ಅಥರ್ವ; ದಿ ಒರಿಜಿನ್’ ಕಾದಂಬರಿಯು ಗ್ರಾಫಿಕಲ್ ಕಾದಂಬರಿಯಾಗಿದ್ದು, ಇಲ್ಲಿ ಪಾತ್ರಗಳು, ಕತೆ ಗ್ರಾಫಿಕ್ಸ್ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಹಿನ್ನೆಲೆ ಧ್ವನಿಯೂ ಇರುತ್ತದೆ. ಒಂದು ರೀತಿ’ಅಥರ್ವ; ದಿ ಒರಿಜಿನ್’ ಕಾದರಂಬರಿಯನ್ನು ರಮೇಶ್ ತಮಿಳ್‌ಮಣಿ ರಚಿಸಿದ್ದು, ಕಾದಂಬರಿಯನ್ನು ಎಂವಿಎಂ ಮೋಹನ್ ಈ ಪ್ರಾಜೆಕ್ಟ್‌ನ ಉಸ್ತುವಾರಿ ವಹಿಸಿದ್ದಾರೆ. ವಿರ್ಜು ಸ್ಟುಡಿಯೋಸ್‌ನವರು ಗ್ರಾಫಿಕಲ್ ಕಾದಂಬರಿಯನ್ನು ಡಿಸೈನ್ ಮಾಡಿವೆ. ಈಗ ಬಿಡುಗಡೆ ಆಗಿರುವುದು ಕಾದಂಬರಿಯ ಟೀಸರ್ ಮಾತ್ರ. ಕಾದಂಬರಿ ಮುಂದಿನ ದಿನಗಳಲ್ಲಿ ಬಿಡುಗಡೆ ಆಗಲಿದೆ.ಎಂಎಸ್ ಧೋನಿ ಬಗ್ಗೆ ‘ಎಂಎಸ್ ಧೋನಿ; ದಿ ಅನ್‌ಟೋಲ್ಡ್ ಸ್ಟೋರಿ’ ಹೆಸರಿನ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್, ಧೋನಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ ‘ರೋರ್ ಆಫ್‌ ದಿ ಲಯನ್’ ಹೆಸರಿನ ಡಾಕ್ಯುಡ್ರಾಮಾದಲ್ಲಿ ಸ್ವತಃ ಎಂಎಸ್ ಧೋನಿ ನಟಿಸಿದ್ದರು. ಈ ಡಾಕ್ಯುಡ್ರಾಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಯಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ಕ್ರಮ; ಸಿಎಂ

Thu Feb 3 , 2022
ಬೆಂಗಳೂರು: ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ರಾಜ್ಯದ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣದ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಚಿಸಿರುವ ಸಮಿತಿ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ಅವರೊಂದಿಗೆ ನಡೆಸಿದ ಸಭೆಯಲ್ಲಿ ಸಿಎಂ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮಧ್ಯಂತರ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ.ಸಾರಿಗೆ ಸಂಸ್ಥೆಗಳ ಸಾಮರ್ಥ್ಯ ಗುರುತಿಸಿ ಅವುಗಳ ದಕ್ಷ […]

Advertisement

Wordpress Social Share Plugin powered by Ultimatelysocial