ದಕ್ಷಿಣ ನಿರ್ದೇಶಕರಿಂದ ಉತ್ತಮ ಅವಕಾಶ ಆದಿತಿ.

 

ಬಾಲಿವುಡ್ ಚಿತ್ರಗಳಿಗೆ ಹೋಲಿಸಿದರೆ ದಕ್ಷಿಣದ ನಿರ್ದೇಶಕರು ತನ್ನನ್ನು ಉತ್ತಮವಾಗಿ ಚಿತ್ರಗಳಲ್ಲಿ ಬಳಸಿಕೊಳ್ಳುತ್ತಾರೆ ಎಂದು ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಹೇಳಿದ್ದಾರೆ.
ತಮಿಳು, ತೆಲುಗು, ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಉತ್ತಮ ಪಾತ್ರಗಳು ಮೂಡಿ ಬರುತ್ತಿವೆ. ಹಿಂದಿ ಚಿತ್ರಗಳಲ್ಲಿ ಬರುತ್ತಿವೆ. ಆದರೆ ದಕ್ಷಿಣ ಭಾರತದ ಚಿತ್ರಗಳಲ್ಲಿ ಗಮನ ಸೆಳೆಯುವ ಪಾತ್ರಗಳು ಸಿಗುತ್ತವೆ ಎಂದಿದ್ಧಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಅದಿತಿ ರಾವ್ ಹೈದರಿ, ಹಿಂದಿ ನಿರ್ದೇಶಕರಿಂದ ಅತ್ಯಾಕರ್ಷಕ ಪಾತ್ರ ಸಿಕ್ಕಿದೆ.ಅದನ್ನು ಅಲ್ಲಗಳೆಯಲು ಆಗುವುದಿಲ್ಲ, ಆದರೆ ಇದೇ ವೇಳೆ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಉತ್ತಮ ಪಾತ್ರ ಸಿಗುತ್ತವೆ ಎಂದಿದ್ದಾರೆ.ದಕ್ಷಿಣ ಭಾರತದ ಚಲನಚಿತ್ರ ನಿರ್ಮಾಪಕರು ತಮ್ಮ ಹಿಂದಿ ಭಾಷೆಯ ಚಿತ್ರಗಳಿಗೆ ಹೋಲಿಸಿದರೆ ಉತ್ತಮವಾಗಿ ಬಳಸಿಕೊಳ್ಳುತ್ತಾರೆ ಜತೆಗೆ ಪಾತ್ರಗಳೂ ಕೂಡ ಉತ್ತಮವಾಗಿ ಮೂಡಿ ಬರುತ್ತವೆ.ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಹಿಂದಿ ಚಿತ್ರಗಳಲ್ಲಿ ನಟಿಸುವುದು ಕಡಿಮೆಯಾಗಿದೆ ಎಂದಿದ್ಧಾರೆ.ಹಿಂದಿ ಚಿತ್ರನಿರ್ಮಾಪಕರಿಂದ ಹೆಚ್ಚಿನ ಆಫರ್‍ಗಳನ್ನು ಪಡೆಯದಿರುವ ಬಗ್ಗೆ ಚಿಂತಿಸುವುದಿಲ್ಲ ಎಂದು ಹೇಳಿದ ಅದಿತಿರಾವ್, ಸಹ-ನಟ ನಾಸಿರುದ್ದೀನ್ ಷಾ ಅವರಿಗೂ ಒಳ್ಳೆಯ ಪಾತ್ರ ಸಿಗುತ್ತಿವೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.೨೦೨೬ರಲ್ಲಿ ರಲ್ಲಿ ಮಲಯಾಳಂ ಚಿತ್ರ ಪ್ರಜಾಪತಿಯೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅದಿತಿ ರಾವ್ ಹೈದರಿ ಆ ಬಳಿಕ ವ ದೆಹಲಿ ೬, ಯೇ ಸಾಲಿ ಜಿಂದಗಿ, ರಾಕ್‌ಸ್ಟಾರ್, ಲಂಡನ್ ಪ್ಯಾರಿಸ್ ನ್ಯೂಯಾರ್ಕ್, ಮರ್ಡರ್ ೩ ಮತ್ತು ಪದ್ಮಾವತ್ ಮುಂತಾದ ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.ಮಣಿರತ್ನಂ ಅವರ ಚಿತ್ರವಾದ ಕಾಟ್ರು ವೆಲಿಯಿಡೈ, ನಂತರ ಚೆಕ್ ಚಿವಂತ ವಾನಂ ಚಿತ್ರಗಳಲ್ಲಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ಧಾರೆ.ತಾಜ್-ಡಿವೈಡೆಡ್ ಬೈ ಬ್ಲಡ್‌ನಲ್ಲಿ ಅದಿತಿ ಜೊತೆ ನಟಿಸುತ್ತಿರುವ ನಾಸಿರುದ್ದೀನ್ ಷಾ, “ತಮಿಳು ಮತ್ತು ಮಲಯಾಳಂ ತಯಾರಕರು ಹೆಚ್ಚು ಬುದ್ಧಿವಂತರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಇಂದು ರೈಸಿನಾ ಸಂವಾದ ಉದ್ಘಾಟಿಸಲಿರುವ ಪ್ರಧಾನಿ ಮೋದಿ,

Thu Mar 2 , 2023
  ರೈಸಿನಾ ಸಂವಾದದ ಎಂಟನೇ ಆವೃತ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯಲ್ಲಿ ಉದ್ಘಾಟಿಸಲಿದ್ದಾರೆ. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಉದ್ಘಾಟನಾ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೂರು ದಿನಗಳ ರೈಸಿನಾ ಸಂವಾದವು ಭೌಗೋಳಿಕ ರಾಜಕೀಯ ಮತ್ತು ಭೌಗೋಳಿಕ ಕಾರ್ಯತಂತ್ರದ ಕುರಿತು ಭಾರತದ ಪ್ರಮುಖ ಸಮ್ಮೇಳನವಾಗಿದೆ. ಇದನ್ನು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಸಹಯೋಗದೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಯೋಜಿಸಿದೆ. 2023 ರ ಆವೃತ್ತಿಯ ಥೀಮ್ “ಪ್ರಚೋದನೆ, ಅನಿಶ್ಚಿತತೆ, ಪ್ರಕ್ಷುಬ್ಧತೆ: […]

Advertisement

Wordpress Social Share Plugin powered by Ultimatelysocial