ಪ್ರಧಾನಿ ಮೋದಿಗೆ ರಾಜಕೀಯವೇ ಗೊತ್ತಿಲ್ಲ ಎಂದ ಡಿ.ಕೆ.ಶಿವಕುಮಾರ್,

ಬೆಂಗಳೂರು: ವೀರೇಂದ್ರ ಪಾಟೀಲ್, ನಿಜಲಿಂಗಪ್ಪ ಅವರಿಗೆ ಕಾಂಗ್ರೆಸ್ ನಿಂದ ಅಪಮಾನ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ವೀರೇಂದ್ರ ಪಾಟೀಲ್ ಪರಿಸ್ಥಿತಿ ಏನಿತ್ತು? ಎಂದು ನನಗೆ ಗೊತ್ತು ಎಂದು ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ವೀರೇಂದ್ರ ಪಾಟೀಲ್ ಪರಿಸ್ಥಿತಿ ಏನಿತ್ತು ಎಂದು ನಮಗೆ ಗೊತ್ತು. ನಾನು ವೀರೇಂದ್ರ ಪಾಟೀಲ್ ಜೊತೆ ಶಾಸಕನಾಗಿದ್ದವನು. ನರೇಂದ್ರ ಮೋದಿ ಅವರಿಗೆ ರಾಜಕೀಯ ಏನೂ ಗೊತ್ತಿಲ್ಲ ಎಂದು ಟಾಂಗ್ ನೀಡಿದ್ದಾರೆ.ವೀರೇಂದ್ರ ಪಾಟೀಲ್ ಆರೋಗ್ಯ ಚೇತರಿಸಿಕೊಳ್ಳದ ಸ್ಥಿತಿಯಲ್ಲಿದ್ದರು. ಅದನ್ನು ಮಧ್ಯರಾತ್ರಿ ಎಲ್ಲರ ಬಳಿ ಕುಳಿತು ಚರ್ಚಿಸಿದ್ದರು. ವೈದ್ಯರು ಅವರ ಆರೋಗ್ಯ ಸರಿಯಿಲ್ಲ ಎಂದಿದ್ದರು. ಆರೋಗ್ಯ ಸರಿಯಿಲ್ಲದಿದ್ದರಿಂದ ರಾಜೀವ್ ಗಾಂಧಿ ಅವರು ಅವರನ್ನು ಕೆಳಗಿಳಿಸಿದ್ದರು. ಇಂದಿರಾ ಗಾಂಧಿ ವಿರುದ್ಧ ಸ್ಪರ್ಧಿಸಿದವರನ್ನು ಮತ್ತೆ ನಿಲ್ಲಿಸಿದರು. ಲೋಕಾಸಭಾ ಚುನಾವಣೆಯಲ್ಲಿ ನಿಲ್ಲಿಸಿ ಕೇಂದ್ರದಲ್ಲಿ ಮಂತ್ರಿ ಮಾಡಿದರು. ಮಂತ್ರಿ ಮಾಡಿದ ಹೃದಯ ಶ್ರೀಮಂತಿಕೆ ಗಾಂಧಿ ಕುಟುಂಬಕ್ಕೆ ಇತ್ತು ಎಂದರು.ನಿಜಲಿಂಗಪ್ಪಗೆ ಗೌರವ ಕೊಡಲು ಅಳಿಯನಿಗೆ ಎಂ ಎಲ್ ಸಿ ಮಾಡಿದ್ವಿ. ಬಿಜೆಪಿ ನಾಯಕರ ಸಿಂಪತಿ ನಮಗೆ ಬೇಡ ಎಂದು ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಹಿಂದೂ ದೇವ-ದೇವತೆಯನ್ನು ನಿಂದಿಸಿದ್ದ ವ್ಯಕ್ತಿಗೆ ಪೊಲೀಸ್ ವ್ಯಾನ್ ನೊಳಗೆ ಥಳಿಸಿದ ಗುಂಪು!

Tue Feb 28 , 2023
ಹೈದರಾಬಾದ್: ಹಿಂದೂ ದೇವ-ದೇವತೆಗಳ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಕಳೆದ ವರ್ಷ ಬಂಧಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್ ವ್ಯಾನ್‌ನೊಳಗೆ ಥಳಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.42 ವರ್ಷದ ಬೈರಿ ನರೇಶ್ ಕಾನೂನು ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ತನ್ನನ್ನು ಥಳಿಸಲು ಗುಂಪು ಬರಬಹುದು ಎಂದು ಹೇಳಿದ್ದ.ದಾಳಿಯ ಭೀತಿಯಿಂದ ನರೇಶ್ ಪೊಲೀಸರಿಗೆ ಕರೆ ಮಾಡಿದ್ದಾನೆ. ಯಾವುದೇ ತೊಂದರೆಯಾಗದಂತೆ ನರೇಶ್ ನನ್ನು ಕರೆದೊಯ್ಯಲು ಪೊಲೀಸರು ಬಂದಾಗ ಗುಂಪೊಂದು ಧಾವಿಸಿ ಬಂದು ಪೊಲೀಸ್ ವಾಹನದೊಳಗೆ ಕುಳಿತ್ತಿದ್ದ […]

Advertisement

Wordpress Social Share Plugin powered by Ultimatelysocial