ಶಿವವೊಗ್ಗ ಜಿಲ್ಲೆಯಲ್ಲಿ ನಾದಿನಿ ಎಂಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ

ಕುಂಸಿ: ಭಾವನಿಂದ ಅತ್ಯಾಚಾರಕ್ಕೊಳಗಾಗಿ ಗರ್ಭವತಿಯಾಗಿದ್ದ ಯುವತಿಗೆ ಏಳು ತಿಂಗಳ ಗಂಡು ಮಗು ಜನಿಸಿದ ಮೂರು ದಿನಗಳ ನಂತರ ಸಾವನ್ನಪ್ಪಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿಗೆ ಸಮೀಪದ ಗ್ರಾಮವೊಂದರ ಹದಿನೆಂಟು ವರ್ಷದ ಯುವತಿ ತನ್ನ ತಾಯಿಯ ಅಕ್ಕನ ಮಗಳ ಗಂಡನ ಮನೆಯಲ್ಲಿ ಆರನೇ ತರಗತಿಯಿಂದಲೂ ಓದುತ್ತಿದ್ದಳು.

10ನೇ ತರಗತಿಯಲ್ಲಿ ಅನುತ್ತೀರ್ಣಳಾಗಿದ್ದ ಯುವತಿ, ಅಕ್ಕ-ಭಾವನ ಮನೆಯಲ್ಲಿಯೇ ಇದ್ದಳು. ಈ ಸಂದರ್ಭದಲ್ಲಿ ಯುವತಿ ಮೇಲೆ ಭಾವ ಅತ್ಯಾಚಾರ ಎಸಗಿದ್ದಾನೆ.

ನಂತರ ಯುವತಿ ತನ್ನ ಊರಿಗೆ ವಾಪಸ್‌ ಬಂದಿದ್ದಳು. ಎಂಟು ತಿಂಗಳ ಬಳಿಕ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಕುಟುಂಬದವರು ಯುವತಿಯನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಕೆ ಗರ್ಭವತಿಯಾಗಿರುವುದು ತಿಳಿದುಬಂದಿದೆ. ಯುವತಿಗೆ ಗಂಡು ಮಗು ಜನಿಸಿದ್ದು, ತೀರಿ ಹೋಗಿದೆ.

ಈ ಸಂಬಂಧ ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

1983 ಕಪ್ ವಿಜೇತ ತಂಡಕ್ಕೆ ಲತಾ ಮಂಗೇಶ್ಕರ್ 20 ಲಕ್ಷ ಹೇಗೆ ಸಂಗ್ರಹಿಸಿದರು ಎಂಬುದನ್ನು ಬಹಿರಂಗಪಡಿಸಿದ ಶರ್ಮಿಳಾ ಟ್ಯಾಗೋರ್;

Mon Feb 7 , 2022
ಬಾಲಿವುಡ್ ಹಿರಿಯ ನಟ ಮತ್ತು ಭಾರತ ಕ್ರಿಕೆಟ್ ತಂಡದ ದಿವಂಗತ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಪತ್ನಿ ಶರ್ಮಿಳಾ ಠಾಗೋರ್ ಅವರು ಫೆಬ್ರವರಿ 6 ರಂದು 92 ನೇ ವಯಸ್ಸಿನಲ್ಲಿ ನಿಧನರಾದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರು ರೂ. 1983ರ ವಿಶ್ವಕಪ್ ವಿಜೇತ ತಂಡಕ್ಕೆ 20 ಲಕ್ಷ ರೂ. ಆ ಸಮಯದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಲಾಭದಾಯಕ ಸಂಸ್ಥೆಯಾಗಿರಲಿಲ್ಲ ಮತ್ತು ಆಟಗಾರರನ್ನು ಅಭಿನಂದಿಸಲು ತಮ್ಮ […]

Advertisement

Wordpress Social Share Plugin powered by Ultimatelysocial