ಡಬಲ್ ಡೆಕ್ಕರ್‌ ಮೇಲ್ಸೇತುವೆ ಕಾಮಗಾರಿ ಬಹುತೇಕ ಅಂತಿಮ..!!

 

‘ನಮ್ಮ ಮೆಟ್ರೊ’ದಲ್ಲಿ ಇದೇ ಮೊದಲ ಬಾರಿಗೆ ನಿರ್ಮಾಣಗೊಳ್ಳುತ್ತಿರುವ ‘ಡಬಲ್‌ ಡೆಕ್ಕರ್’ ಮೇಲ್ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮಾರ್ಚ್‌ನಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಬಿಎಂಆರ್‌ಸಿಎಲ್(ಬೆಂಗಳೂರು ಮೆಟ್ರೊ ರೈಲು ನಿಗಮ) ಅಂದಾಜಿಸಿದೆ.ಎರಡನೇ ಹಂತದ ಮೆಟ್ರೊ ರೈಲು ಯೋಜನೆಯಲ್ಲಿ ಆರ್.ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಬಸ್‌ ಹಾಗೂ ಮೆಟ್ರೊ ರೈಲು ಸಂಚರಿಸುವ ರೀತಿಯಲ್ಲಿ ಈ ಮೇಲ್ಸೇತುವೆ ನಿರ್ಮಿಸಲಾಗಿದೆ. ಒಂದೇ ಪಿಲ್ಲರ್‌ಗೆ ರೋಡ್ ಕಂ ರೇಲ್‌(ಡಬಲ್ ಡೆಕ್ಕರ್) ಸೇತುವೆ ನಿರ್ಮಿಸಲಾಗುತ್ತಿದೆ.ಮೊದಲ ಮಟ್ಟದಲ್ಲಿ ಎರಡೂ ಬದಿಗಳಲ್ಲಿ ಎರಡು ರಸ್ತೆ ಮಾರ್ಗ ನಿರ್ಮಿಸಲಾಗಿದ್ದು, ಇಲ್ಲಿ ಬಸ್‌, ಕಾರು ಸೇರಿ ಎಲ್ಲಾ ರೀತಿಯ ವಾಹನಗಳು ಸಂಚರಿಸಲಿವೆ. ಎರಡನೇ ಮಟ್ಟದ ಮಾರ್ಗದಲ್ಲಿ ಮೆಟ್ರೊ ರೈಲು ಸಂಚರಿಸಲಿದೆ. ಅಲ್ಲದೆ, ನೆಲದಲ್ಲಿರುವ ರಸ್ತೆಯಲ್ಲಿ ಸದ್ಯ ಇರುವ ತ್ರಿಪಥ ರಸ್ತೆ ಮಾರ್ಗವೂ ಇರಲಿದೆ.ಮೆಟ್ರೊ ಕಂಬಕ್ಕೆ ಎರಡೂ ಬದಿಯಲ್ಲಿ ರೆಕ್ಕೆಗಳ ರೀತಿಯಲ್ಲಿ ಸೇತುವೆಗಳನ್ನು ಅಳವಡಿಸಲಾಗಿದೆ. ಆರ್.ವಿ. ರಸ್ತೆಯಿಂದ ಮಾರೇನಹಳ್ಳಿ, ರಾಗಿಗುಡ್ಡ ಮತ್ತು ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನಡುವೆ 3.3 ಕಿ.ಮೀ. ಉದ್ದ ಈ ಡಬಲ್‌ ಡೆಕ್ಕರ್‌ ಮೇಲ್ಸೇತುವೆ ನಿರ್ಮಾಣವಾಗಿದೆ.ಪೂರ್ವ ನಿಗದಿಯಂತೆ 2021ರ ಅಕ್ಟೋಬರ್‌ನಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಲೂಪ್‌ಗಳ ನಿರ್ಮಾಣ ಕಾಮಗಾರಿ ಬಾಕಿ ಇದ್ದು, ಈಗಷ್ಟೇ ಆರಂಭವಾಗಿರುವ ಕೆಲಸ ಮೂರು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ವಿವರಿಸಿದರು.ಈ ರೀತಿ ಡಬಲ್ ಡೆಕ್ಕರ್ ಮಾರ್ಗವು ದಕ್ಷಿಣ ಭಾರತದಲ್ಲೇ ಮೊದಲು ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಮುಂಬೈ, ಜೈಪುರ ಮತ್ತು ನಾಗಪುರದಲ್ಲಿ ಈ ರೀತಿಯ ಮಾರ್ಗಗಳು ಈಗಾಗಲೇ ಇವೆ.ಅಂಕಿ-ಅಂಶ3.3 ಕಿ.ಮೀ.ಡಬಲ್ ಡೆಕ್ಕರ್ ಮೇಲ್ಸೇತುವೆ ಉದ್ದ5.5 ಮೀಟರ್‌ಮೆಟ್ರೊ ಮಾರ್ಗ ಮತ್ತು ಬಸ್‌ ಮಾರ್ಗದ ನಡುವಿನ ಅಂತರ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈದಾನದಲ್ಲೇ ಕುಳಿತು ಕಾನ್ ಸ್ಟೇಬಲ್ ಪರೀಕ್ಷೆ ಬರೆದ 32,000 ಅಭ್ಯರ್ಥಿಗಳು..!!

Mon Jan 2 , 2023
ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ಇತ್ತೀಚೆಗೆ ಕರೆದ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗೆ ಬರೋಬ್ಬರಿ 32 ಸಾವಿರ ಅರ್ಜಿಗಳು ಬಂದಿವೆ.ಸುಮಾರು 30 ಸಾವಿರ ಅಭ್ಯರ್ಥಿಗಳಿಗೆ ಕಾನ್ ಸ್ಟೇಬಲ್ ಹುದ್ದೆ ಮೈದಾನದಲ್ಲಿ ಪರೀಕ್ಷೆ ನಡೆದಿದ್ದು, ಮೈದಾನದಲ್ಲಿ ನೆಲದ ಮೇಲೆ ಕುಳಿತು ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿರುವ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕಳೆದ 5 ವರ್ಷಗಳಿಂದ ಖಾಲಿ ಇದ್ದ 1667 ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗೆ ಪಾಕಿಸ್ತಾನದ […]

Advertisement

Wordpress Social Share Plugin powered by Ultimatelysocial