ಮೈದಾನದಲ್ಲೇ ಕುಳಿತು ಕಾನ್ ಸ್ಟೇಬಲ್ ಪರೀಕ್ಷೆ ಬರೆದ 32,000 ಅಭ್ಯರ್ಥಿಗಳು..!!

ರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ಇತ್ತೀಚೆಗೆ ಕರೆದ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗೆ ಬರೋಬ್ಬರಿ 32 ಸಾವಿರ ಅರ್ಜಿಗಳು ಬಂದಿವೆ.ಸುಮಾರು 30 ಸಾವಿರ ಅಭ್ಯರ್ಥಿಗಳಿಗೆ ಕಾನ್ ಸ್ಟೇಬಲ್ ಹುದ್ದೆ ಮೈದಾನದಲ್ಲಿ ಪರೀಕ್ಷೆ ನಡೆದಿದ್ದು, ಮೈದಾನದಲ್ಲಿ ನೆಲದ ಮೇಲೆ ಕುಳಿತು ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿರುವ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕಳೆದ 5 ವರ್ಷಗಳಿಂದ ಖಾಲಿ ಇದ್ದ 1667 ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗೆ ಪಾಕಿಸ್ತಾನದ ಮೂಲೆ ಮೂಲೆಗಳಿಂದ ಅರ್ಜಿಗಳು ಬಂದಿವೆ. ಪುರುಷರು ಹಾಗೂ ಮಹಿಳೆಯರಿಂದ ಸಾವಿರಾರು ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ.ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದ್ದರಿಂದ ಭಾರೀ ಚರ್ಚೆ ಹಾಗೂ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗೆ ಅರ್ಜಿ ಕರೆಯಲಾಗಿದ್ದು, ಇಸ್ಲಾಮಾಬಾದ್ ನಲ್ಲಿ ಅಭ್ಯರ್ಥಿಗಳ ಪರೀಕ್ಷೆ ನಡೆಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾಲ ನೀಡುವುದಾಗಿ ಸಂದೇಶ ಮಾಡಿದ ಬ್ಯಾಂಕ್ ಗೆ ಖಡಕ್ ರಿಪ್ಲೈ ಕೊಟ್ಟ ಯುವಕ..!!

Mon Jan 2 , 2023
ಖಾಸಗಿ ಬ್ಯಾಂಕೊಂದು ಯುವಕನಿಗೆ ಮದ್ವೆಗೆ ಸಾಲ ನೀಡುವ ಆಫರ್ ನೀಡಿದೆ. ಗ್ರ್ಯಾಂಡ್ ಆಗಿ ಮದ್ವೆಯಾಗಲು ನಿಮಗೆ ಬೇಕಾಗಿರುವುದು ಕೊಟಕ್‌ನ ವೈಯಕ್ತಿಕ ಸಾಲ 25 ಲಕ್ಷದವರೆಗೆ ಎಂದು ಶೆಟ್ಟಿ ದಿನತ್ ಎಂಬುವವರಿಗೆ ಕೊಟಕ್ ಬ್ಯಾಂಕ್ ಸಂದೇಶ ಕಳುಹಿಸಿದೆ. ಈ ಸಂದೇಶಕ್ಕೆ ಪ್ರತಿಯಾಗಿ ಡಿ ಶೆಟ್ಟಿ ಅವರು ನನ್ನ ಆರ್ಥಿಕ ಸ್ಥಿತಿ ಬಗ್ಗೆ ಚಿಂತಿಸಿದ್ದಕ್ಕೆ ಧನ್ಯವಾದ ಕೊಟಕ್, ಹಾಗೆಯೇ ನೀವು ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಸಾಲವನ್ನು ತೀರಿಸಲು ಸಶಕ್ತವಾದಂತಹ ಅರ್ಧಾಂಗಿಯನ್ನು […]

Advertisement

Wordpress Social Share Plugin powered by Ultimatelysocial