ಕಾಂಗ್ರೆಸ್ ಶಾಸಕರ ರಾತ್ರಿ ವಾಸ್ತವ್ಯಕ್ಕಾಗಿ ಹಾಸಿಗೆ, ದಿಂಬುಗಳನ್ನು ತರಿಸುವುದಕ್ಕೆ ಸೂಚನೆ ನೀಡಲಾಗಿದೆ.

ಬೆಂಗಳೂರು : ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಶಾಸಕರ ರಾತ್ರಿ ವಾಸ್ತವ್ಯಕ್ಕಾಗಿ ಹಾಸಿಗೆ, ದಿಂಬುಗಳನ್ನು ತರಿಸುವುದಕ್ಕೆ ಸೂಚನೆ ನೀಡಲಾಗಿದೆ.ಹೀಗಾಗಿ ಪರಿಷತ್ ಹಾಗು ವಿಧಾನಸಭೆ ಸದಸ್ಯರಿಗೆ ರಾತ್ರಿ ಮಲಗುವುದಕ್ಕೆ ಅಗತ್ಯವಾದ ಹಾಸಿಗೆ- ದಿಂಬುಗಳನ್ನು ತರಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಜತೆಗೆ ಭೋಜನ ವ್ಯವಸ್ಥೆಗೂ ಸೂಚನೆ ನೀಡಲಾಗಿದೆ.ಆದರೆ ಕಾಂಗ್ರೆಸ್ ನ ಈ ಕಾರ್ಯ ತಂತ್ರಕ್ಕೆ ಅವಕಾಶ ನೀಡದೇ ಇರಲು ಬಿಜೆಪಿ ಯೋಜನೆ ರೂಪಿಸಿದೆ. ಮಧ್ಯಾಹ್ನ ಮೂರು ಗಂಟೆಯ ನಂತರವೂ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಿದರೆ ಅನಿರ್ದಿಷ್ಟಾವಧಿಯವರೆಗೆ ಸದನ ಮುಂದೂಡಲು ಸ್ಪೀಕರ್ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಅಹೋರಾತ್ರಿ ಧರಣಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್‌ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿಗೆ ಮತ ಹಾಕದವರ ಮನೆಗಳನ್ನು ಕೆಡವಲಾಗುವುದು ಎಂದ ,ಬಿಜೆಪಿ ಶಾಸಕ;

Thu Feb 17 , 2022
ತೆಲಂಗಾಣದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಟಿ ರಾಜಾ ಸಿಂಗ್ ಅವರಿಗೆ ಉತ್ತರ ಪ್ರದೇಶ ರಾಜ್ಯ ಚುನಾವಣೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಗಳಿಗಾಗಿ ಫೆಬ್ರವರಿ 16, ಬುಧವಾರದಂದು ಭಾರತೀಯ ಚುನಾವಣಾ ಆಯೋಗವು (ಇಸಿಐ) ಶೋಕಾಸ್ ನೋಟಿಸ್ ನೀಡಿದೆ. ಶಾಸಕರ ಹೇಳಿಕೆ ಮಾದರಿ ನೀತಿ ಸಂಹಿತೆಯ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗ ಅಭಿಪ್ರಾಯಪಟ್ಟಿದೆ. ಹೈದರಾಬಾದ್‌ನ ಗೋಶಾಮಹಲ್ ಕ್ಷೇತ್ರದ ವಿವಾದಿತ ಶಾಸಕರು ಉತ್ತರ ಪ್ರದೇಶದ ನಿವಾಸಿಗಳಿಗೆ ಬಿಜೆಪಿಗೆ ಮತ ಹಾಕದಿದ್ದರೆ ಬುಲ್ಡೋಜರ್ […]

Advertisement

Wordpress Social Share Plugin powered by Ultimatelysocial