25 ಕೋಟಿ ರೂಪಾಯಿ ದಾಟಿದ ಟ್ರಾಫಿಕ್‌ ದಂಡ.

 

ಟ್ರಾಫಿಕ್ ನಿಯಮ ಉಲ್ಲಂಘನೆ  ಪ್ರಕರಣಗಳ ದಂಡ ಪಾವತಿಗೆ ಶೇಕಡಾ 50ರಷ್ಟು ರಿಯಾಯಿತಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಾಲ್ಕನೇ ದನವೂ ಸ್ವಯಂಪ್ರೇರಿತರಾಗಿ ದಂಡ ಪಾವತಿ (Traffic Fines) ಮುಂದುವರಿದಿದೆ. ನಾಲ್ಕನೇ ದಿನವಾದ ಸೋಮವಾರ ಆರಂಭದ ಮಾಹಿತಿ ಪ್ರಕಾರ ಇದುವರೆಗೆ ೮,೬೮,೪೦೫ ಕೇಸ್‌ಗಳನ್ನು ವಿಲೇವಾರಿ ಮಾಡಿದ್ದು, 25,42,52,೦೦೦ಕ್ಕೂ ಹೆಚ್ಚು ರೂಪಾಯಿ ಸಂಗ್ರಹಿಸಲಾಗಿದೆ.ಈ ಮೂಲಕ ದಂಡ ಸಂಗ್ರಹ ಮೊತ್ತ 25 ಕೋಟಿ 42 ಲಕ್ಷ 52 ಸಾವಿರ ರೂಪಾಯಿಗೂ ಅಧಿಕ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಆದರೆ, ಸದ್ಯ ಏಂಟೂವರೆ ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿದೆ. ಆದರೆ, ಇನ್ನೂ ಇನ್ನು 1 ಕೋಟಿ 80 ಲಕ್ಷ ಪ್ರಕರಣಗಳು ಬಾಕಿ ಇವೆ ಎಂದು ಸಂಚಾರಿ ಪೊಲೀಸ್‌ ವಿಭಾಗ ಮಾಹಿತಿ ನೀಡಿದೆ.ಇನ್ನು ದಂಡ ಪಾವತಿ ಬಗ್ಗೆ ತಕಾರರುಗಳು, ಸಮಸ್ಯೆಗಳು ಇದ್ದರೆ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್‌ನಲ್ಲಿ ಪರಿಶೀಲಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ಎರಡು ದಿನ ನೋಡಿಕೊಂಡು ದಂಡ ಪಾವತಿಸಲು ಅವಧಿ ವಿಸ್ತರಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಚರ್ಚಿಸಲಾಗುವುದು. ಬಳಿಕ ತೀರ್ಮಾನವನ್ನು ಕೈಗೊಳ್ಳಲಾಗುವುದೆಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ತಿಳಿಸಿದ್ದಾರೆ.ದಂಡ ಪಾವತಿ ಮಾಡುವ ವೇಳೆ ನಕಲಿ ನಂಬರ್ ಪ್ಲೇಟ್‌ಗಳ ಬಗ್ಗೆಯೂ ದೂರುಗಳು ಬರುತ್ತಿದ್ದು, ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಸಾಯಿ ಖಾನೆಯಲ್ಲಿ ನೂರಾರು ಗೋವುಗಳ ಹತ್ಯೆ.

Tue Feb 7 , 2023
ಕಸಾಯಿ ಖಾನೆಯಲ್ಲಿ ನೂರಾರು ಗೋವುಗಳ ಹತ್ಯೆ.. ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯ ಅಲ್ತಾಪ್ ನಗರದಲ್ಲಿ ನೂರಾರು ಗೋವುಗಳ ಹತ್ಯೆ.. ಗೋವುಗಳ ಹತ್ಯೆ ಮಾಡಿದ ವಿಡಿಯೋ ಮೂಲಕ ಕಮೀಷನರ್ ಗೆ ದೂರು… ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಗೆ ದೂರು ನೀಡಿದ ಬಜರಂಗದಳ ಮುಖಂಡರು… ಗೋವುಗಳ ಹತ್ಯೆ ಮಾಡಿರೋ ವಿಡಿಯೋ ಮೂಲಕ ದೂರು ನೀಡಿದ ಭಜರಂಗದಳ ಮುಖಂಡರು. ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ರು,ಪೊಲೀಸರು ಏನ್ ಮಾಡ್ತೀದಾರೆ ಎಂದು ಆಕ್ರೋಶ ಹೊರಹಾಕಿದ ಮುಖಂಡರು‌. […]

Advertisement

Wordpress Social Share Plugin powered by Ultimatelysocial