ನನ್ನ ಮಗಳನ್ನು ರಕ್ಷಿಸಿ ಪ್ಲೀಸ್..! ‘ವಿಶ್ವ ಹಿಂದೂಪರಿಷತ್’ ಮುಖಂಡರಿಗೆ ‘ಕ್ರೈಸ್ತ ಮಹಿಳೆ’ ಪತ್ರ.! ಯಾಕೆ ಗೊತ್ತಾ.?

BIGG NEWS: ನನ್ನ ಮಗಳನ್ನು ರಕ್ಷಿಸಿ ಪ್ಲೀಸ್..! 'ವಿಶ್ವ ಹಿಂದೂಪರಿಷತ್' ಮುಖಂಡರಿಗೆ 'ಕ್ರೈಸ್ತ ಮಹಿಳೆ' ಪತ್ರ.! ಯಾಕೆ ಗೊತ್ತಾ.?

ಮಂಗಳೂರು: ಇದುವರೆದೆ ಕ್ರೈಂ ಜಾಲದಲ್ಲಿ ( Crime ) ಸಿಲುಕಿರೋರನ್ನು ರಕ್ಷಣೆ ಮಾಡೋದಕ್ಕೆ ಪೊಲೀಸರಿಗೆ ( Karnataka Police ) ದೂರು ನೀಡಲಾಗುತ್ತಿತ್ತು. ರಕ್ಷಣೆ ಕೋರಿ ದೂರು ಕೂಡ ದಾಖಲಿಸಲಾಗುತ್ತಿತ್ತು. ಆದ್ರೇ.. ಈ ಕೇಸ್ ಅದಕ್ಕಿಂತ ಡಿಫೆರೆಂಟ್, ನನ್ನ ಮಗಳು ಡ್ರಗ್ಸ್ ಗೆ ( Drug ) ದಾಸಳಾಗಿ ಬಿಟ್ಟಿದ್ದಾಳೆ.

ಅವರನ್ನು ರಕ್ಷಿಸಿ ಪ್ಲೀಸ್ ಅಂತ ಕ್ರೈಸ್ತ ಸಮುದಾಯದ ಸಂತ್ರಸ್ತ ಯುವತಿಯ ತಾಯಿ ವಿಶ್ವ ಹಿಂದೂ ಪರಿಷತ್ ( Vishwa Hindu Parishat ) ಮುಖಂಡರಿಗೆ ಪತ್ರದಲ್ಲಿ ಮನವಿ ಮಾಡಿದ್ದಾಳೆ.

 

ಹೌದು.. ಮಗಳೂರಿನ ಸುರತ್ಕಲ್ ನಲ್ಲಿ ಹೀಗೊಂದು ವಿಚಿತ್ರ ಮನವಿ ಪತ್ರ ವಿಹೆಚ್ ಪಿ ಮುಖಂಡರಿಗೆ ತಲುಪಿದೆ. ಸುರತ್ಕಲ್ ನ ಶರೀಫ್ ಸಿದ್ಧಿಕಿ ಎಂಬಾತ ಈಗಾಗಲೇ ಮದುವೆಯಾಗಿದ್ದರೂ, ತನ್ನ ಮಗಳನ್ನು ಡ್ರಗ್ಸ್ ಚಟಕ್ಕೆ ಬೀಳಿಸಿ, ಅವಳಿಗೆ ಡ್ರಗ್ಸ್ ನೀಡೋ ಮೂಲಕ, ನಿರಂತರವಾಗಿ ಅತ್ಯಾಚಾರ ಕೂಡ ಎಸಗುತ್ತಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ನನ್ನ ಮಗಳನ್ನು ರಕ್ಷಿಸಿ ಪ್ಲೀಸ್ ಅಂತ ವಿಶ್ವ ಹಿಂದೂಪರಿಷತ್ ಮುಖಂಡರಿಗೆ

ಈ ಬಗ್ಗೆ ಪ್ರತಿಕ್ರಿಯಿಸಿದಂತ ಮಂಗಳೂರು ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರು, ಮಹಿಳೆಯೊಬ್ಬರು ತನ್ನ ಮಗಳಿಗೆ ಡ್ರಗ್ಸ್ ನೀಡಿ, ವ್ಯಕ್ತಿಯೊಬ್ಬರು ಲೈಂಗಿಕ ದೌರ್ಜನ್ಯ ಕೂಡ ಎಸಗುತ್ತಿರೋದಾಗಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಆರೋಪಿ ಶರೀಫ್ ಸಿದ್ಧಕಿಯನ್ನ ಬಂಧಿಸಿ, ವಿಚಾರಣೆ ನಡೆಸುತ್ತಿರೋದಾಗಿ ತಿಳಿಸಿದ್ದಾರೆ.

ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿದಂತ ವಿಶ್ವ ಹಿಂದೂ ಪರಿಷತ್ ಮುಖಂಡ ಪಂಪ್ ವೇಲ್ ಅವರು, ನಮಗೆ ಕ್ರೈಸ್ತ ಮಹಿಳೆಯೊಬ್ಬರು ಮಗಳಿಗೆ ಡ್ರಗ್ಸ್ ನೀಡಿ, ಲೈಂಗಿಕ ದೌರ್ಜನ್ಯವನ್ನು ಸುರತ್ಕಲ್ ನ ಶರೀಫ್ ಸಿದ್ಧಿಕಿ ಎಂಬಾತ ನೀಡುತ್ತಿರೋದಾಗಿ ಪತ್ರದಲ್ಲಿ ತಿಳಿಸಿ, ಮಗಳನ್ನು ರಕ್ಷಿಸುವಂತೆ ಕೋರಿದ್ದಾರೆ. ಮಾಹಿತಿಗಳ ಪ್ರಕಾರ ಶರೀಫ್ ಸಿದ್ಧಕಿಗೆಗೆ ಈಗಾಗಲೇ ಮದುವೆಯಾಗಿದೆ. ಮೂವರು ಪತ್ನಿಯರಿದ್ದಾರೆ. ಒಬ್ಬರ ಜೊತೆಗೆ ವಾಸವಾಗಿದ್ದಾರೆ. ಒಬ್ಬ ಪತ್ನಿ ಗೋವಾ, ಮತ್ತೊಬ್ಬರು ಬಾಂಬೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಅವರ ಕತೆ ಏನು ಎನ್ನುವ ಬಗ್ಗೆಯೂ ತಿಳಿಯಬೇಕಿದೆ ಎಂದರು.

ಮುಂದುವರೆದು 3 ವರ್ಷದಿಂದ ಕ್ರೈಸ್ತ ಸಮುದಾಯದ ಮಹಿಳೆಯೊಬ್ಬರ ಪುತ್ರಿಗೆ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ. ಡ್ರಗ್ಸ್ ಕಾರಣದಿಂದಾಗಿ ಅನೇಕ ಬಾರಿ ಆಕೆ ಆತ್ಮಹತ್ಯೆಗೂ ಯತ್ನಿಸಿರೋದಾಗಿ ಆಕೆಯ ತಾಯಿ ತಿಳಿಸಿದ್ದಾರೆ. ಇದೇ ರೀತಿ ಅನೇಕ ಮಹಿಳೆಯರಿಗೆ ಆರೋಪಿ ಶರೀಫ್ ಸಿದ್ಧಿಕಿ ಮಾಡಿರೋದಾಗಿ ಹೇಳಲಾಗುತ್ತಿದೆ. ಅನೇಕ ಠಾಣೆಗಳಲ್ಲಿ ಪ್ರಕರಣ ಕೂಡ ಇವೆ ಎಂದು ತಿಳಿದು ಬಂದಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ತನಿಖೆಯಿಂದ ಸತ್ಯಾಸತ್ಯತೆ ತಿಳಿದು ಬರಬೇಕಿದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಂಡೀಗಢದಲ್ಲಿ ಬಿಜೆಪಿ, ಕಾಂಗ್ರೆಸ್ ಗೆ ಮುಖಭಂಗ: ನಗರಪಾಲಿಕೆ ಆಮ್ ಆದ್ಮಿ ಪಕ್ಷದ ತೆಕ್ಕೆಗೆ

Mon Dec 27 , 2021
ಚಂಡೀಗಢ್: ಚಂಡೀಗಢ ನಗರ ಪಾಲಿಕೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭರ್ಜರಿ ಮತಗಳಿಸುವಲ್ಲಿ ಯಶಸ್ವಿಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಗಿಂತ ಮುನ್ನಡೆ ಸಾಧಿಸಿದೆ. ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯ ಟ್ರೈಲರ್ ಇದಾಗಿದೆ ಎಂದು ಆಪ್ ಬಣ್ಣಿಸಿದೆ. ಚಂಡೀಗಢದ 35 ನಗರಪಾಲಿಕೆ ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 14 ಸ್ಥಾನಗಳಲ್ಲಿ ಭರ್ಜರಿ ಜಯಗಳಿಸುವ ಮೂಲಕ ತನ್ನ ಛಾಪನ್ನು ಮೂಡಿಸಿದೆ. “ಇದು […]

Advertisement

Wordpress Social Share Plugin powered by Ultimatelysocial