ಸಾಲ ನೀಡುವುದಾಗಿ ಸಂದೇಶ ಮಾಡಿದ ಬ್ಯಾಂಕ್ ಗೆ ಖಡಕ್ ರಿಪ್ಲೈ ಕೊಟ್ಟ ಯುವಕ..!!

ಖಾಸಗಿ ಬ್ಯಾಂಕೊಂದು ಯುವಕನಿಗೆ ಮದ್ವೆಗೆ ಸಾಲ ನೀಡುವ ಆಫರ್ ನೀಡಿದೆ. ಗ್ರ್ಯಾಂಡ್ ಆಗಿ ಮದ್ವೆಯಾಗಲು ನಿಮಗೆ ಬೇಕಾಗಿರುವುದು ಕೊಟಕ್‌ನ ವೈಯಕ್ತಿಕ ಸಾಲ 25 ಲಕ್ಷದವರೆಗೆ ಎಂದು ಶೆಟ್ಟಿ ದಿನತ್ ಎಂಬುವವರಿಗೆ ಕೊಟಕ್ ಬ್ಯಾಂಕ್ ಸಂದೇಶ ಕಳುಹಿಸಿದೆ. ಈ ಸಂದೇಶಕ್ಕೆ ಪ್ರತಿಯಾಗಿ ಡಿ ಶೆಟ್ಟಿ ಅವರು ನನ್ನ ಆರ್ಥಿಕ ಸ್ಥಿತಿ ಬಗ್ಗೆ ಚಿಂತಿಸಿದ್ದಕ್ಕೆ ಧನ್ಯವಾದ ಕೊಟಕ್, ಹಾಗೆಯೇ ನೀವು ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಸಾಲವನ್ನು ತೀರಿಸಲು ಸಶಕ್ತವಾದಂತಹ ಅರ್ಧಾಂಗಿಯನ್ನು ಹುಡುಕಿಕೊಡಿ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.ಇದರ ಸ್ಕ್ರೀನ್‌ ಶಾಟ್ ಅನ್ನು ಅವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಷ್ಟೊಂದು ಕೆಟ್ಟ ದಿನ ಯಾರ ಬದುಕಿನಲ್ಲಿಯೂ ಬಾರದಿರಲಿ ಸಹೋದರ, ಗ್ರ್ಯಾಂಡ್ ಆಗಿ ಮದ್ವೆಯಾಗುವ ಜೋಶ್‌ನಲ್ಲಿ 10 ವರ್ಷಗಳ ಕಾಲ ಇಎಂಐ ಕಟ್ಟುವ ದುಸ್ಥಿತಿ ಯಾರಿಗೂ ಬರದಿರಲಿ ಎಂದು ಅವರು ಬರೆದುಕೊಂಡು ಈ ಪೋಸ್ಟ್ ಮಾಡಿದ್ದು, ಅನೇಕರು ನಗುವ ಇಮೋಜಿ ಯ ಕಾಮೆಂಟ್ ಮಾಡಿದ್ದಾರೆ. ಸಾಮಾನ್ಯವಾಗಿ ಮದುವೆಯ ವಿಚಾರದಲ್ಲಿ ಅನೇಕರು ಅದ್ಧೂರಿಯಾಗಿ ವಿವಾಹವಾಗಬೇಕೆಂದು, ಊರಿಗೆಲ್ಲ ಊಟ ಹಾಕಬೇಕು, ತಮ್ಮ ವೈಭವ ತೋರಿಸಬೇಕು ಎಂದು ಮದುವೆಯಾಗಲು ಹೋಗಿ ಸಾಲದಲ್ಲಿ ಮುಳುಗುತ್ತಾರೆ.ಮದ್ವೆಯ ಸಂಭ್ರಮದಲ್ಲಿ ಆ ಸಾಲ ಯಾವುದು ದೊಡ್ಡ ವಿಷಯವಾಗುವುದೇ ಇಲ್ಲ. ಆದರೆ ಮದ್ವೆಯ ನಂತರ ಪ್ರತಿ ತಿಂಗಳು ಇಎಂಐ ಕಟ್ಟುವ ಸಂದರ್ಭದಲ್ಲಿ ಸುಮ್ಮನೆ ರಿಜಿಸ್ಟಾರ್ ಮದ್ವೆಯಾಗಿದ್ರು ಸಾಕಿತ್ತು ಸಾಲ ಕಟ್ಟುವ ಹಗಲು ರಾತ್ರಿ ದುಡಿಯುವ ಕೆಲಸ ಇರಲಿಲ್ಲ ಎಂದು ಯೋಚಿಸಲು ಶುರು ಮಾಡುತ್ತಾರೆ. ಅದಕ್ಕೆ ತಕ್ಕಂತೆ ಉದ್ಯೋಗದಲ್ಲಿರುವವರಿಗೆ ಬ್ಯಾಂಕ್‌ಗಳು ಹೀಗೆ ಸಾಲದ ಆಮಿಷವೊಡ್ಡಿ ಹಗಲುಕನಸು ಕಾಣುವವರಿಗೆ ರೆಕ್ಕೆ ಪುಕ್ಕ ಬರುವಂತೆ ಮಾಡುತ್ತಾರೆ. ಒಟ್ಟಿನಲ್ಲಿ ಈ ಯುವಕ ನೀಡಿದ ಪ್ರತಿಕ್ರಿಯೆ ಮಾತ್ರ ಅನೇಕರಿಗೆ ವಾಸ್ತವವನ್ನು ಅರ್ಥ ಮಾಡಿಸುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದುಬೈನಲ್ಲಿ ಮಾಲಾಶ್ರೀ, ನಟಿಯ ವೆಕೇಷನ್​ ಹೀಗಿತ್ತು..!!

Mon Jan 2 , 2023
ಸ್ಯಾಂಡಲ್​ವುಡ್ ನಟಿ ಮಾಲಾಶ್ರೀ ಅವರು ದುಬೈ ಪ್ರವಾಸದ ಕೆಲವೊಂದು ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.ದುಬೈ ಜನರಂತೆ ಪೋಷಾಕು ಧರಿಸಿ ಬ್ಲಾಕ್ ಗಾಗಲ್ಸ್ ಧರಿಸಿಕೊಂಡಿದ್ದರು ನಟಿ. ನಟಿಯ ಹಿಂದೆ ಕಣ್ಣು ಹಾಯಿಸಿದಷ್ಟು ದೂರಕ್ಕೆ ಮರಳಿನ ರಾಶಿ ಕಾಣಬಹುದು.ನಟಿಯ ಮುಖದ ಸುತ್ತ ಪ್ರಿಂಟೆಟ್ ಕ್ಲೋತ್ ಕವರ್ ಮಾಡಿರುವುದನ್ನು ಕಾಣಬಹುದು. ಕೆಂಪು, ಬಿಳಿ, ಕಪ್ಪು ಬಣ್ಣದ ಕಾಂಬಿನೇಷನ್​ನಲ್ಲಿತ್ತು ನಟಿಯ ತಲೆಯ ಮೇಲಿದ್ದ ಬಟ್ಟೆ.ಮಾಲಾಶ್ರೀ ಅವರು ದುಬೈ ಎಂದು ಕ್ಯಾಪ್ಶನ್ ಕೊಟ್ಟು ಫೋಟೋವನ್ನು ಶೇರ್ ಮಾಡಿದ್ದಾರೆ. ನಟಿಯ […]

Advertisement

Wordpress Social Share Plugin powered by Ultimatelysocial