ದುಬೈನಲ್ಲಿ ಮಾಲಾಶ್ರೀ, ನಟಿಯ ವೆಕೇಷನ್​ ಹೀಗಿತ್ತು..!!

ಸ್ಯಾಂಡಲ್​ವುಡ್ ನಟಿ ಮಾಲಾಶ್ರೀ ಅವರು ದುಬೈ ಪ್ರವಾಸದ ಕೆಲವೊಂದು ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.ದುಬೈ ಜನರಂತೆ ಪೋಷಾಕು ಧರಿಸಿ ಬ್ಲಾಕ್ ಗಾಗಲ್ಸ್ ಧರಿಸಿಕೊಂಡಿದ್ದರು ನಟಿ. ನಟಿಯ ಹಿಂದೆ ಕಣ್ಣು ಹಾಯಿಸಿದಷ್ಟು ದೂರಕ್ಕೆ ಮರಳಿನ ರಾಶಿ ಕಾಣಬಹುದು.ನಟಿಯ ಮುಖದ ಸುತ್ತ ಪ್ರಿಂಟೆಟ್ ಕ್ಲೋತ್ ಕವರ್ ಮಾಡಿರುವುದನ್ನು ಕಾಣಬಹುದು. ಕೆಂಪು, ಬಿಳಿ, ಕಪ್ಪು ಬಣ್ಣದ ಕಾಂಬಿನೇಷನ್​ನಲ್ಲಿತ್ತು ನಟಿಯ ತಲೆಯ ಮೇಲಿದ್ದ ಬಟ್ಟೆ.ಮಾಲಾಶ್ರೀ ಅವರು ದುಬೈ ಎಂದು ಕ್ಯಾಪ್ಶನ್ ಕೊಟ್ಟು ಫೋಟೋವನ್ನು ಶೇರ್ ಮಾಡಿದ್ದಾರೆ. ನಟಿಯ ಫೋಟೋಗಳಿಗೆ 6 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.ಮಾಲಾಶ್ರೀ ವಿದೇಶ ಪ್ರವಾಸ ಹೋಗುತ್ತಿರುವುದು ಇದೇ ಮೊದಲೇನಲ್ಲ. ಅವರು ಈ ಹಿಂದೆಯೂ ಪ್ಯಾರಿಸ್ ಸೇರಿದಂತೆ ಹಲವು ಸ್ಥಳಗಳಿಗೆ ವೆಕೇಷನ್ ಹೋಗಿ ಫೋಟೋಸ್ ಶೇರ್ ಮಾಡಿದ್ದಾರೆ.ನಟಿ ಈ ಹಿಂದೆ ಹಂಚಿಕೊಂಡಿದ್ದ ಫೋಟೋದಲ್ಲಿ ಪ್ಯಾರಿಸ್ ನಗರದಲ್ಲಿ ನಟಿ ಸುತ್ತಾಡುತ್ತಿರುವುದನ್ನು ಕಾಣಬಹುದು. ಇದರಲ್ಲಿ ನಟಿ ಬ್ಲೂ ಜೀನ್ಸ್ ಹಾಗೂ ಪ್ರಿಂಟೆಡ್ ಶರ್ಟ್ ಧರಿಸಿದ್ದರು.ಮಾಲಾಶ್ರೀ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 60 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ನಟಿ ತಮ್ಮ ಪ್ರವಾಸ ಹಾಗೂ ಇವೆಂಟ್ ಫೋಟೋಸ್ ಶೇರ್ ಮಾಡುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರತೀ ದಿನ 9 ಸಾವಿರ ಮಂದಿ ಮೃತ್ಯು..!!

Mon Jan 2 , 2023
ಚೀನದಲ್ಲಿ ಕೊರೊನಾ ಕೇಕೆ ಹೆಚ್ಚಾಗಿದ್ದು, ಪ್ರತೀ ದಿನ 9 ಸಾವಿರಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಯುನೈಟೆಡ್‌ ಕಿಂಗ್‌ಡಮ್‌ನ ಆರೋಗ್ಯ ಸಂಸ್ಥೆಯೊಂದು ಅಂದಾಜಿಸಿದೆ. ಸದ್ಯ ಚೀನವು ಪ್ರತೀ ದಿನದ ಕೊರೊನಾ ಮಾಹಿತಿ ನೀಡುವುದನ್ನು ನಿಲ್ಲಿಸಿದ್ದು, ನಿಖರ ಮಾಹಿತಿ ಗೊತ್ತಾಗುತ್ತಿಲ್ಲ.ಈ ಸಂಸ್ಥೆಯ ಪ್ರಕಾರ ಡಿಸೆಂಬರ್‌ ತಿಂಗಳೊಂದರಲ್ಲೇ ಅಲ್ಲಿ 1 ಲಕ್ಷ ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈ ಅವಧಿಯಲ್ಲಿ 1.80 ಕೋಟಿ ಪ್ರಕರಣಗಳು ಕಾಣಿಸಿಕೊಂಡಿವೆ. ಜನವರಿ ಮಧ್ಯಭಾಗದ ಹೊತ್ತಿಗೆ ದಿನವೂ 37 ಲಕ್ಷ […]

Advertisement

Wordpress Social Share Plugin powered by Ultimatelysocial