ಪ್ರತೀ ದಿನ 9 ಸಾವಿರ ಮಂದಿ ಮೃತ್ಯು..!!

ಚೀನದಲ್ಲಿ ಕೊರೊನಾ ಕೇಕೆ ಹೆಚ್ಚಾಗಿದ್ದು, ಪ್ರತೀ ದಿನ 9 ಸಾವಿರಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಯುನೈಟೆಡ್‌ ಕಿಂಗ್‌ಡಮ್‌ನ ಆರೋಗ್ಯ ಸಂಸ್ಥೆಯೊಂದು ಅಂದಾಜಿಸಿದೆ. ಸದ್ಯ ಚೀನವು ಪ್ರತೀ ದಿನದ ಕೊರೊನಾ ಮಾಹಿತಿ ನೀಡುವುದನ್ನು ನಿಲ್ಲಿಸಿದ್ದು, ನಿಖರ ಮಾಹಿತಿ ಗೊತ್ತಾಗುತ್ತಿಲ್ಲ.ಈ ಸಂಸ್ಥೆಯ ಪ್ರಕಾರ ಡಿಸೆಂಬರ್‌ ತಿಂಗಳೊಂದರಲ್ಲೇ ಅಲ್ಲಿ 1 ಲಕ್ಷ ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈ ಅವಧಿಯಲ್ಲಿ 1.80 ಕೋಟಿ ಪ್ರಕರಣಗಳು ಕಾಣಿಸಿಕೊಂಡಿವೆ. ಜನವರಿ ಮಧ್ಯಭಾಗದ ಹೊತ್ತಿಗೆ ದಿನವೂ 37 ಲಕ್ಷ ಪ್ರಕರಣಗಳು ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಜ. 23ರ ವೇಳೆಗೆ 5.84 ಲಕ್ಷ ಮಂದಿ ಸಾವನ್ನಪ್ಪಲಿದ್ದಾರೆ ಎಂದು ಈ ಸಂಸ್ಥೆ ಹೇಳಿದೆ.ಭಾರತೀಯ ವಿದ್ಯಾರ್ಥಿ ಸಾವು..!!ವೈದ್ಯಕೀಯ ಶಿಕ್ಷಣಕ್ಕೆಂದು ಚೀನಕ್ಕೆ ತೆರಳಿದ್ದ ತಮಿಳುನಾಡು ಮೂಲಕ ವಿದ್ಯಾರ್ಥಿಯೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಚೀನದಲ್ಲಿ ಇಂಟರ್ನ್ಶಿಪ್‌ ಮಾಡುತ್ತಿದ್ದ ವಿದ್ಯಾರ್ಥಿ ಅಬ್ದುಲ್‌ ಶೇಖ್‌ ಡಿ. 11ರಂದು ಭಾರತದಿಂದ ವಾಪಸ್‌ ಆಗಿದ್ದರು. ಅಲ್ಲಿಗೆ ಹೋದ ಮೇಲೆ ದಿಢೀರ್‌ ಆರೋಗ್ಯದಲ್ಲಿ ಬದಲಾವಣೆಯಾಗಿ ಸಾವನ್ನಪ್ಪಿದ್ದಾರೆ. ಇವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಪೊಲೀಸರ ಸೋಗಿನಲ್ಲಿ ಬಂದು 80 ಲಕ್ಷ ದರೋಡೆ.

Mon Jan 2 , 2023
ಪೊಲೀಸರು ಅಂತ ಕಾರ್ ಗೆ ಅಡ್ಡಹಾಕಿ ದರೋಡೆ ಮಾಡಿದ ನಾಲ್ವರು ತುಮಕೂರಿನಿಂದ 80 ಲಕ್ಷ ಹಣವನ್ನು ಕಾರ್ ನಲ್ಲಿ ಸೇಲಂಗೆ ತೆಗೆದುಕೊಂಡು ಹೋಗುತ್ತಿದ್ದ ಕುಮಾರಸ್ವಾಮಿ, ಹಾಗೂ ಚಾಲಕ ಚಂದನ್ ಮಾಲೀಕರ ಆದೇಶದ ಮೇರೆಗೆ ಹೊರಟಿದ್ದ ಇಬ್ಬರು ಹಣವನ್ನು ಕುಮಾರಸ್ವಾಮಿ ,ಚಂದನ್ ಕಾರಿನ ಮಧ್ಯ ಭಾಗದಲ್ಲಿ ಎರಡು ಬ್ಯಾಗ್ ಗಳಲ್ಲಿ ಹಿಂಬದಿಯಾ ಸೀಟಿನಲ್ಲಿ ಇಟ್ಟುಕೊಂಡು ಪ್ರಯಾಣ ತುಮಕೂರಿನಿಂದ ಸೇಲಂಗೆ ಪ್ರಯಾಣ ಇದೇ ತಿಂಗಳ 27 ನೇ ತಾರೀಕು ಕೆ ಹೆಚ್ ರಸ್ತೆ […]

Advertisement

Wordpress Social Share Plugin powered by Ultimatelysocial