ಸೋನು ಸೂದ್ ನಿಜ ಜೀವನದಲ್ಲಿ ಹೀರೋ ಎಂಬುದು ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಭಾರತದ ಜನರಿಗೆ ಅರ್ಥವಾಗಿದೆ.

ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ಸೋನು ಸೂದ್ ನಿಜ ಜೀವನದಲ್ಲಿ ಹೀರೋ ಎಂಬುದು ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಭಾರತದ ಜನರಿಗೆ ಅರ್ಥವಾಗಿದೆ.ಮೊದಲ ಲಾಕ್‌ಡೌನ್ ಸಮಯದಲ್ಲಿ ಸರ್ಕಾರದ ಇಲಾಖೆಯೊಂದು ಮಾಡಬಹುದಾದ ಕೆಲಸಗಳನ್ನು ಸೋನು ಸೂದ್ ಒಬ್ಬರೇ ಸಣ್ಣ ಗುಂಪಿನ ಸಹಾಯದೊಂದಿಗೆ ಮಾಡಿದ್ದರು.ದೇಶದ ಹಲವು ನಗರಗಳಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಸ್ವಂತ ಖರ್ಚಿನಲ್ಲಿ ತಲುಪಿಸಿದ್ದರು ಸೋನು ಸೂದ್.ಲಾಕ್‌ಡೌನ್ ಸಮಯದಲ್ಲಿ ಸೋನು ಸೂದ್ ಮಾಡಿದ ಸಹಾಯಕ್ಕಾಗಿ ಅವರನ್ನು ಮಸೀಹಾ (ದೇವರು) ಎಂದು ಕರೆಯಲಾಗುತ್ತದೆ. ಲಾಕ್‌ಡೌನ್ ನಂತರವೂ ಅವರು ತಮ್ಮ ಸಾಮಾಜಿಕ ಕಾರ್ಯಗಳನ್ನು ಹಾಗೆಯೇ ಮುಂದುವರೆಸಿದ್ದಾರೆ. ಇದೀಗ ಅಚಾನಕ್ಕಾಗಿ 19 ವರ್ಷದ ಬಾಲಕನ ಜೀವ ಉಳಿಸುವ ಮೂಲಕ ಸೋನು ಸೂದ್ ಮತ್ತೊಮ್ಮೆ ತಾವು ನಿಜ ಜೀವನದ ಹೀರೋ ಎಂಬುದನ್ನು ಸಾಬೀತು ಮಾಡಿದ್ದಾರೆ.ಸೋನು ಸೂದ್ ಇದೀಗ ಪಂಜಾಬ್ ಚುನಾವಣೆ ಪ್ರಚಾರದಲ್ಲಿ ತೊಡಿಗಿಸಕೊಂಡಿದ್ದಾರೆ. ಸೋನು ಸೂದ್‌ರ ಸಹೋದರಿ ಮಾಳವಿಕ ಸೂದ್ ಪಂಜಾಬ್‌ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸೋನು ಸೂದ್ ರಾತ್ರಿ ತಮ್ಮ ಕಾರಿನಲ್ಲಿ ಪ್ರಯಾಣಿಸುವಾಗ ಫ್ಲೈ ಓವರ್‌ ಒಂದರ ಮೇಲೆ ಅಪಘಾತವೊಂದು ಸಂಭವಿಸಿದೆ.ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವಕ  ಕಾರಿನಿಂದ ಇಳಿದು ಬಂದ ಸೋನು ಸೂದ್ ಹಾಗೂ ಅವರ ಕೆಲವು ಗೆಳೆಯರು ಅಪಘಾತಕ್ಕೆ ಒಳಗಾಗಿದ್ದ ಮಾರುತಿ ಡಿಜೈರ್ ಕಾರಿನ ಬಳಿ ಧಾವಿಸಿದ್ದಾರೆ. ಕಾರಿನ ಒಳಗೆ ಸುಮಾರು 19 ವರ್ಷದ ಬಾಲಕ ತೀವ್ರಗಾಯದೊಂದಿಗೆ ಡ್ರೈವಿಂಗ್ ಸೀಟ್‌ ಮೇಲೆ ಪ್ರಜ್ಞಾ ಶೂನ್ಯನಾಗಿ ಬಿದ್ದಿದ್ದ. ಆದರೆ ಕಾರಿಗೆ ಸೆಂಟ್ರಲ್ ಲಾಕ್ ಇದ್ದಿದ್ದರಿಂದ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸ್ವಾದಿಷ್ಟಕರವಾದ ಸಿಹಿ ತಿನಿಸು ಮಾಲ್ಪುವಾ ಹೀಗೆ ಮಾಡಿ

Thu Feb 10 , 2022
  ಸಿಹಿ ಯಾರಿಗೆ ತಾನೇ ಬೇಡ ಹೇಳಿ. ಮಕ್ಕಳಿಗಂತೂ ಸಿಹಿ ತಿನಿಸು ಇದ್ದರೆ ಊಟ ಕೂಡ ಬೇಡ ಎನ್ನುತ್ತಾರೆ. ಇಲ್ಲಿ ರುಚಿಕರವಾದ ಮಾಲ್ಪುವಾ ಮಾಡುವ ವಿಧಾನ ಇದೆ. ಹಬ್ಬಕ್ಕೆ ಮನೆಯಲ್ಲಿ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು – 1/2 ಕಪ್, ಖೋವಾ – 1/4 ಕಪ್, ಸಕ್ಕರೆ – ಸಕ್ಕರೆ‌ 1/2 ಕಪ್, ಹಾಲು – 3/4 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – […]

Advertisement

Wordpress Social Share Plugin powered by Ultimatelysocial