ವೈದ್ಯಕೀಯ ಲೋಕದ ಕರಾಳ ಮಾಫಿಯಾದ ರೋಚಕ ಅನಾವರಣ

ಈಚೆಗೆ ಥ್ರಿಲ್ಲರ್ ಮಾದರಿಯ ಸಿನಿಮಾಗಳನ್ನು ಮಾಡುವವರ ಸಂಖ್ಯೆ, ನೋಡುವವರ ಸಂಖ್ಯೆಯೂ ಜಾಸ್ತಿ ಆಗಿದೆ. ಸದ್ಯ ಕನ್ನಡದಲ್ಲೂ ಅಂಥ ಪ್ರಯೋಗಗಳು ಜಾಸ್ತಿ ಆಗುತ್ತಿವೆ. ಆ ಸಾಲಿಗೆ. ‘ಡಾ. 56’ ಸಿನಿಮಾವು ಕೂಡ ಸೇರಿಕೊಂಡಿದೆ. ನಿರ್ದೇಶಕ ರಾಜೇಶ್ ಆನಂದಲೀಲಾ ವೈದ್ಯಕೀಯ ವಿಜ್ಞಾನದ ಕುರಿತ ಸಾಕಷ್ಟು ವಿಚಾರಗಳನ್ನು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಏನಿದು ‘Dr 56’?
‘Dr 56’ ಸಿನಿಮಾ ಆರಂಭವಾಗುತ್ತಿದ್ದಂತೆಯೇ ಒಂದೊಂದೇ ಕೊಲೆಗಳು ಆಗುತ್ತಿರುತ್ತವೆ. ಮೊದಲಿಗೆ ವಿಜ್ಞಾನಿ, ನಂತರ ವೈದ್ಯರ ಸರಣಿ ಕೊಲೆಗಳು ಆಗುತ್ತವೆ. ಈ ಕೊಲೆಗಳನ್ನು ಯಾರು ಮಾಡುತ್ತಿರುತ್ತಾರೆ? ಈ ಕೊಲೆ ಮಾಡುವುದರ ಹಿಂದಿನ ಉದ್ದೇಶವೇನು ಎಂಬುದನ್ನು ಕಂಡುಹಿಡಿಯಲು ಸಿಬಿಐ ಅಧಿಕಾರಿ ಪ್ರಿಯಾ (ಪ್ರಿಯಾಮಣಿ) ಆಗಮಿಸುತ್ತಾರೆ. ಆನಂತರ ನಿಜವಾದ ಕೊಲೆಗಾರ ಸಿಗುತ್ತಾನಾ? ‘Dr 56’ ಅಂದ್ರೆ ಏನು? ವೈದ್ಯಕೀಯ ವಿಜ್ಞಾನಕ್ಕೂ ಈ ಸಿನಿಮಾಕ್ಕೂ ಏನು ಸಂಬಂಧ ಅನ್ನೋದೇ ಕ್ಲೈಮ್ಯಾಕ್ಸ್

‘Dr 56’ ಪಾಸಿಟಿವ್ ಅಂಶಗಳೇನು?
ನಿರ್ದೇಶಕ ರಾಜೇಶ್ ಆನಂದಲೀಲಾ ತಮ್ಮ ಮೊದಲ ಪ್ರಯತ್ನದಲ್ಲೇ ವಿಭಿನ್ನ ಬಗೆಯ ವಿಷಯವೊಂದನ್ನು ತೆಗೆದುಕೊಂಡಿದ್ದಾರೆ. ವೈದ್ಯಕೀಯ ಕ್ಷೇತ್ರಗಳಲ್ಲಿ ನಡೆಯುವ ಸ್ಕ್ಯಾಮ್‌ಗಳನ್ನು ಬಹಳ ನೀಟ್ ಆಗಿ ತೆರೆ ಮೇಲೆ ತಂದಿದ್ದಾರೆ. ಅದಕ್ಕೆ ಅವರಿಗೆ ಒಂದಷ್ಟು ನೈಜ ಘಟನೆಗಳು ಕೂಡ ಸ್ಪೂರ್ತಿಯಾಗಿವೆ. ಅದರಲ್ಲೂ ಕೆಲ ವಿಚಾರಗಳು ‘ಓಹ್, ಹೀಗೂ ಉಂಟೇ..’ ಎಂದು ನೋಡುಗರು ಉದ್ಘರಿಸುವಂತಿವೆ. ಈ ವಿಚಾರಗಳನ್ನಿಟ್ಟುಕೊಂಡು ಒಂದು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಕಥೆ ಹೇಳುವುದಕ್ಕೆ ನಿರ್ದೇಶಕರು ಸಾಕಷ್ಟು ಅಧ್ಯಯನ ಮಾಡಿರುವುದು ಗೊತ್ತಾಗುತ್ತದೆ. ನೋಬಿನ್ ಪೌಲ್‌ ಅವರ ಹಿನ್ನೆಲೆ ಸಂಗೀತ ನಿರ್ದೇಶನ ಇದಕ್ಕೆ ಸಾಥ್ ನೀಡಿದೆ. ಒಂದು ಥ್ರಿಲ್ಲರ್ ಸಿನಿಮಾಗೆ ಬೇಕಾದ ಫೀಲ್ ಅನ್ನು ಹಿನ್ನೆಲೆ ಸಂಗೀತದ ಮೂಲಕ ನೀಡಿದ್ದಾರೆ ನೋಬಿನ್ ಪೌಲ್‌. ರಾಕೇಶ್ ಛಾಯಾಗ್ರಹಣ ಕೂಡ ಮೆಚ್ಚುಗೆ ಪಡೆದುಕೊಳ್ಳುತ್ತದೆ.
ಸಿನಿಮಾದ ಅವಧಿ ಚಿಕ್ಕದಾಗಿದ್ದು, ಅನಗತ್ಯವಾಗಿ ದೃಶ್ಯಗಳನ್ನು ಸೇರಿಸಿಲ್ಲ. ಆದರೆ ದ್ವಿತಿಯಾರ್ಧದಲ್ಲಿ ಬರವ ವೈದ್ಯ ಮತ್ತು ಪ್ರಿಯಾಮಣಿ ನಡುವಿನ ಮಾತುಕತೆಯ ದೃಶ್ಯವನ್ನು ಇನ್ನಷ್ಟು ರೋಚಕವಾಗಿಸಬಹುದಿತ್ತು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

 

 

Please follow and like us:

Leave a Reply

Your email address will not be published. Required fields are marked *

Next Post

ಕೆಮ್ಮು, ಶೀತ, ಜ್ವರ ಇದ್ದರೆ ಕೋವಿಡ್ ಟೆಸ್ಟ್ ಕಡ್ಡಾಯ

Fri Dec 23 , 2022
    ಚೀನಾ ಸೇರಿದಂತೆ ಇತರೆ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ರಾಜ್ಯ ಸರ್ಕಾರ ಕೂಡಾ ಈ ನಿಟ್ಟಿನಲ್ಲಿ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ.ಕೆಮ್ಮು, ಶೀತ, ಜ್ವರ ಇತರೆ ಸಮಸ್ಯೆಯಿಂದ (ಐಎಲ್‌ಎ – ಸಾರಿ) ಬಳಲುತ್ತಿರುವವರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.ಪ್ರಸ್ತುತ ಕೇವಲ ಶೇಕಡ 20ರಷ್ಟು ಮಂದಿ ಮಾತ್ರ ಬೂಸ್ಟರ್ […]

Advertisement

Wordpress Social Share Plugin powered by Ultimatelysocial