ಡಾ. ಎಂ. ಎಸ್. ಆಶಾದೇವಿ ಅವರು ಬರಹಗಾರ್ತಿ.

 

ಡಾ. ಎಂ. ಎಸ್. ಆಶಾದೇವಿ ಅವರು ಬರಹಗಾರ್ತಿಯಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ.ಫೆಬ್ರುವರಿ 26, ಆಶಾದೇವಿ ಅವರ ಜನ್ಮದಿನ. ಅವರು ಜನಿಸಿದ್ದು ದಾವಣಗೆರೆಯ ನೇರಳಿಗೆ ಎಂಬಲ್ಲಿ. ತಂದೆ ಸೋಮಶೇಖರ್. ತಾಯಿ ಅನಸೂಯಾ. ಇವರ ಕುಟುಂಬದವರು ಚನ್ನಗಿರಿ ಸಮೀಪದ ಹಿರೇಕೋಗಲೂರಿನವರು. ಆಶಾದೇವಿಯ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದರು. ಹಾಗೂ ಪ್ರಖ್ಯಾತ ವಿಮರ್ಶಕರಾದ ಪ್ರೊ. ಡಿ.ಆರ್. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ‘ನವೋದಯ ವಿಮರ್ಶೆ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ’ ಎಂಬ ಮಹಾಪ್ರಬಂಧಕ್ಕಾಗಿ ಪಿಎಚ್.ಡಿ ಗಳಿಸಿದರು.ಆಶಾದೇವಿ ಅವರು ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.ಆಶಾದೇವಿ ಅವರ ಕೃತಿಗಳಲ್ಲಿ’ಸ್ತ್ರೀಮತವನುತ್ತರಿಸಲಾಗದೇ?’ ಸಾಹಿತ್ಯ ಸಂಸ್ಕೃತಿ ಕುರಿತ ಲೇಖನಗಳನ್ನೊಳಗೊಂಡಿದೆ.’ಉರಿಚಮ್ಮಾಳಿಗೆ’ ಎಂಬುದು ಡಿ. ಆರ್.ನಾಗರಾಜ ಅವರ ‘ದಿ ಪ್ಲೇಮಿಂಗ್ ಫೀಟ್’ ಕೃತಿಯ ಅನುವಾದವಾಗಿದೆ. ಭಾರತದ ಬಂಗಾರ ಪಿ.ಟಿ.ಉಷಾ ಇವರ ಮತ್ತೊಂದು ಕೃತಿ. ‘ಹುದುಗಲಾರದ ದುಃಖ’ ವಸಂತ ಕಣ್ಣಬಿರನ್ ಅವರ ಮೂಲದ ಅನುವಾದಿತ ಕೃತಿ. ‘ನಡುವೆ ಸುಳಿವ ಆತ್ಮ’ ಸ್ತ್ರೀ ಸಂಕಂಥನದ ಚಹರೆಗಳ ಮೇಲೆ ಬೆಳಕು ಚೆಲ್ಲುವ ಕೃತಿ. ‘ನಾರೀಕೇಳಾ’ ಪ್ರಜಾವಾಣಿಯ ಭಾನುವಾರದ ಪುರವಣಿ ‘ಮುಕ್ತಛಂದ’ದಲ್ಲಿ ಮೂಡಿಬಂದ ಅಂಕಣಗಳ ಸಂಕಲನ.ವಚನ ಪ್ರವೇಶ, ಡಿ.ಆರ್. ನಾಗರಾಜ್ ಬೆಲೆಬಾಳುವ ಬರಹಗಳು, ಗೌರಿ ಲಂಕೇಶ್ ಕಂಡ ಹಾಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಸಂಪುಟದಲ್ಲಿ ‘ವಿಮರ್ಶೆ’, ನಾಡೋಜ ಕೆ. ಜಿ. ಎನ್. ಕುರಿತ ‘ನನ್ನಿಯ ನೇಕಾರ’ ಮುಂತಾದವು ಇವರ ಸಂಪಾದನೆಗಳಲ್ಲಿ ಸೇರಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿವಾಹ ಸಂಭ್ರಮದಲ್ಲಿದ್ದ ವಧು ಹೃದಯಾಘಾತದಿಂದ ಸಾವು,

Mon Feb 27 , 2023
ಗುಜರಾತ್: ವಿವಾಹ ಸಂಭ್ರಮದಲ್ಲಿದ್ದ ವಧು ಹೃದಯಾಘಾತದಿಂದ ಸಾವನ್ನಪ್ಪಿರುವ ಈ ಅಹಿತಕರ ಘಟನೆ ಗುಜರಾತ್‌ನ ಭಾವನಗರದಲ್ಲಿರುವ ಗವಾನೇಶ್ವರ ಮಹಾದೇವ ದೇವಸ್ಥಾನದ ಮುಂಭಾಗದಲ್ಲಿ ನಡೆದಿದೆ.ಕುಟುಂಬವು ಮಗಳ ಮದುವೆ ಸಂಭ್ರಮದಲ್ಲಿತ್ತು.ಮದುವೆಯ ಕಾರ್ಯಗಳು ಸಹ ನಡೆಯುತ್ತಿತ್ತು. ಆದ್ರೆ, ಜವರಾಯ ಇದನ್ನು ಸಹಿಸಲಾಗದೇ, ವಧುವಿನ ಪ್ರಾಣಪಕ್ಷಿಯನ್ನು ಹಾರಿಸಿಕೊಂಡು ಹೋಗಿದ್ದಾನೆ.ವಧು ಹೇತಲ್ ಮೃತ ದುರ್ದೈವಿ. ಈಕೆ ವಿಶಾಲ್ ಎಂಬುವರನ್ನು ವಿವಾಹವಾಗಬೇಕಿತ್ತು. ಮದುವೆಯ ಸಂಭ್ರಮದಲ್ಲಿದ್ದ ಹೇತಲ್‌ಗೆ ತಲೆತಿರುಗುವಿಕೆಯಿಂದ ಮೂರ್ಛೆ ಹೋದರು. ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ, ಆಕೆ […]

Advertisement

Wordpress Social Share Plugin powered by Ultimatelysocial