D.RAVI:ಐಪಿಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವರ್ಗಾವಣೆ;

ಬೆಂಗಳೂರು: ಐಪಿಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರ ವರ್ಗಾವಣೆ ಆದೇಶವನ್ನು ಸರ್ಕಾರ ತಡೆಹಿಡಿದಿದೆ.

ಜನವರಿ 27ರಂದು ಸರ್ಕಾರ ರವಿ ಚನ್ನಣ್ಣವರ್​ ಸೇರಿದಂತೆ 9 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿಯಾಗಿರುವ ರವಿ ಚನ್ನಣ್ಣವರ್​ ಅವರನ್ನು ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸರ್ಕಾರ ವರ್ಗಾವಣೆ ಮಾಡಿತ್ತು.

ಆದರೆ, ಇದೀಗ ಸರ್ಕಾರ ವರ್ಗಾವಣೆ ಆದೇಶವನ್ನು ಏಕಾಏಕಿ ತಡೆಹಿಡಿದಿದ್ದು, ಈ ಬಗ್ಗೆ ಜ. 28ರಂದು ಆದೇಶ ಹೊರಡಿಸಿದೆ. ತಕ್ಷಣ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ರವಿ ಚನ್ನಣ್ಣವರ್ ವರ್ಗಾವಣೆಗೆ ಸರ್ಕಾರ ಬ್ರೇಕ್​ ಹಾಕಿದೆ. ​

ಕೆಲ ದಿನಗಳಿಂದ ರವಿ ಚನ್ನಣ್ಣವರ್​ ಅವರು ತುಂಬಾ ಸುದ್ದಿಯಲ್ಲಿದ್ದಾರೆ. ಅವರ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ಆರೋಪಗಳು ಕೇಳಿಬಂದಿದೆ. ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼಎಲ್‌ ಇಟಿ,ಟಿಆರ್‌,ಎಫ್‌ ನ ʼಮೂವರು ಉಗ್ರವಾದಿಗಳನ್ನು ಜಮ್ಮು-ಕಾಶ್ಮೀರ ದಲ್ಲಿ ಬಂಧಿಸಿದ್ದಾರೆ.

Sat Jan 29 , 2022
  ಗಂದೇರ್ಬಲ್: ಸಿಆರ್‌ಪಿಎಫ್‌ನ 24 ರಾಷ್ಟ್ರೀಯ ರೈಫಲ್ಸ್ ಮತ್ತು 115 ಬೆಟಾಲಿಯನ್ ಪಡೆಗಳೊಂದಿಗೆ ಗಂದೇರ್‌ಬಾಲ್ ಪೊಲೀಸರು ಶುಕ್ರವಾರ ನಿಷೇಧಿತ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ), ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನೊಂದಿಗೆ ನಂಟು ಹೊಂದಿದ್ದ ಮೂವರು ಉಗ್ರರನ್ನು ಶನಿವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.ಬಂಧತ ಉಗ್ರರನ್ನು ಶೋಪಿಯಾನ್ ಜಿಲ್ಲೆಯ ಬ್ರಾರಿಪೊರಾದ ನಿವಾಸಿ ಫೈಸಲ್ ಮನ್ಜೂರ್, ಝೈಪೊರಾದ ಅಜರ್ ಯಾಕೂಬ್, ಕುಲ್ಗಾಂನ ಬೇಗಂ ನಿವಾರಿ ನಾಸಿರ್ ಅಹ್ಮದ್ ದಾರ್ ಎಂದು ಗುರ್ತಿಸಲಾಗಿದೆ. ಇದನ್ನೂ ಓದಿ:ಕಾಶ್ಮೀರ ದಲ್ಲಿ ಬಂಧಿಸಿದ್ದಾರೆ. […]

Advertisement

Wordpress Social Share Plugin powered by Ultimatelysocial