ಹೈದ್ರಾಬಾದಿ ವೆಜ್ ದಮ್ ಬಿರಿಯಾನಿ ಮಾಡುವ ವಿಧಾನ.

ಬೇಕಾಗುವ ಸಾಮಗ್ರಿಗಳು
*ಬಾಸುಮತಿ ಅಕ್ಕಿ – ೧/೪ ಕೆ.ಜಿ
*ಶುಂಠಿ ಬೆಳುಳ್ಳಿ ಪೇಸ್ಟ್ – ೧ ಚಮಚ
*ಹುರುಳಿಕಾಯಿ – ೧/೨ ಕಪ್
*ಕ್ಯಾರೆಟ್ – ೧/೨ ಕಪ್
*ಹೂಕೋಸು – ೭-೮ ಪೀಸ್
*ಹಸಿ ಬಟಾಣಿ – ೧/೨ ಕಪ್
*ದಪ್ಪ ಮೆಣಸಿನಕಾಯಿ – ೧ ಕಪ್
*ಅಚ್ಚ ಖಾರದ ಪುಡಿ – ೨ ಚಮಚ
*ಬಿರಿಯಾನಿ ಪುಡಿ – ೨ ಚಮಚ
*ಹಸಿರು ಮೆಣಸಿನಕಾಯಿ – ೫
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಹಾಲು – ೧ ಕಪ್
*ಕೇಸರಿ -೨ ಚಮಚ
*ಎಣ್ಣೆ -೧೦೦ ಮಿ.ಲೀ
*ಚಕ್ಕೆ – ೭
*ಲವಂಗ – ೭
*ಏಲಕ್ಕಿ – ೭
*ಕಪ್ಪು ಏಲಕ್ಕಿ – ೩-೪
*ಜಾಪತ್ರೆ – ೫
*ಶಾಹಿ ಜೀರಿಗೆ – ೨ ಚಮಚ
*ಅರಿಶಿನ – ೨ ಚಮಚ
*ಮೊಸರು – ೧ ಕಪ್
*ಪುದೀನ – ೩ ಚಮಚ
*ತುಪ್ಪ – ೪ ಚಮಚ
*ಒಣದ್ರಾಕ್ಷಿ – ೧೦
*ಗೋಡಂಬಿ – ೧೦
*ಉಪ್ಪು – ೨ ಚಮಚ

ಮಾಡುವ ವಿಧಾನ :

ಪ್ಯಾನಿಗೆ ಎಣ್ಣೆ ಹಾಕಿ, ಕಾದ ಮೇಲೆ ಚಕ್ಕೆ, ಲವಂಗ, ಏಲಕ್ಕಿ, ಕಪ್ಪು ಏಲಕ್ಕಿ, ಜಾಕಾಯಿ, ಶಾಹಿ ಜೀರಾ, ಶುಂಠಿ ಬೆಳುಳ್ಳಿ ಪೇಸ್ಟ್, ಉದ್ದಕ್ಕೆ ಹೆಚ್ಚಿದ ದಪ್ಪ ಮೆಣಸಿನಕಾಯಿ ಹಾಕಿ ಹದವಾಗಿ ಹುರಿಯಿರಿ. ಇದಕ್ಕೆ ಅರಿಶಿನ, ಅಚ್ಚ ಖಾರದ ಪುಡಿ, ಬಿರಿಯಾನಿ ಪುಡಿ ಹಾಕಿ ಬೇಯಿಸಿ. ನಂತರ ಮೊಸರು, ಹಸಿರು ಮೆಣಸಿನಕಾಯಿ, ಪುದೀನ, ಕೊತ್ತಂಬರಿ ಸೊಪ್ಪನ್ನು ರುಬ್ಬಿ ತೆಗೆದಿಟ್ಟುಕೊಳ್ಳಿ. ಪಾತ್ರೆಗೆ ನೀರು ಹಾಕಿ. ಸ್ವಲ್ಪ ಎಣ್ಣೆ, ಉಪ್ಪು, ಶಾಹಿ ಜೀರಿಗೆ ಹಾಗೂ ಅಕ್ಕಿ ಹಾಕಿ ಬೇಯಿಸಿರಿ. ಬೆಂದ ನಂತರ ಸೋಸಿಕೊಳ್ಳಿ. ಪಾತ್ರೆಗೆ ತುಪ್ಪ ಹಾಕಿ, ಕಾದ ಮೇಲೆ ಬೇಯಿಸಿದ ತರಕಾರಿ, ಮೊಸರು, ದ್ರಾಕ್ಷಿ, ಗೋಡಂಬಿ, ಕೇಸರಿ, ಕೊತ್ತಂಬರಿ ಸೊಪ್ಪು, ಹುರಿದ ಈರುಳ್ಳಿ ತುಪ್ಪ ಹಾಕಿ ನಂತರ ಉಪ್ಪು ಪುದೀನ, ಕೊತ್ತಂಬರಿ ಸೊಪ್ಪು, ಹಾಕಿ ಫ್ರೈ ಮಾಡಿ, ಅರ್ಧಕಪ್ಪು ಮೊಸರು, ಹಸಿಮೆಣಸಿನಕಾಯಿ ಹಾಕಿ, ಇನ್ನೊಂದು ಪಾತ್ರೆಯಲ್ಲಿ ಅನ್ನಕ್ಕೆ ಪಾತ್ರೆಯ ಅರ್ಧದಷ್ಟು ನೀರು ಹಾಕಿ ಅದಕ್ಕೆ ಶಾಹಿಜೀರ, ಸ್ವಲ್ಪ ಉಪ್ಪು, ೧ ಸ್ಪೂನ್ ಎಣ್ಣೆ ಹಾಕಿ ಅದು ಕುದಿಯುತ್ತಿರುವಾಗ, ಅರ್ಧ ಗಂಟೆ ನೆನೆಸಿದ ಅಕ್ಕಿ ಹಾಕಿ ಮುಕ್ಕಾಲು ಬೇಯಿಸಿ, ಸೋಸಿಕೊಂಡು ಒಂದು ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಮುಕ್ಕಾಲು ಬೆಂದ ತರಕಾರಿ ಒಂದು ಲೇಯರ್ ಹಾಕಿ. ಅದರ ಮೇಲೆ ೨ ಚಮಚ ಮೊಸರು, ಗೋಡಂಬಿ, ದ್ರಾಕ್ಷಿ, ಅನ್ನ ಹಾಕಿ. ಇನ್ನೊಂದು ಲೇಯರ್ ಇದೇ ರೀತಿ ಮಾಡಿ ಮೇಲೆ ೨ ಚಮಚ ತುಪ್ಪ , ಹಾಲಿನಲ್ಲಿ ನೆನೆಸಿದ ಕೇಸರಿ ದಳ ಹಾಕಿ ಸಣ್ಣ ಉರಿಯಲ್ಲಿ ೧೫ ನಿಮಿಷ ದಮ್ ಮಾಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

370ನೇ ವಿಧಿ ಪುನಃಸ್ಥಾಪಿಸುವ ವರೆಗೆ ಭಾರತದ ಜತೆ ಮಾತುಕತೆ ಇಲ್ಲ.

Wed Jan 18 , 2023
ಇಸ್ಲಾಮಾಬಾದ್: ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಸಂವಿಧಾನದ 370ನೇ ವಿಧಿಯ ಪುನಸ್ಥಾಪನೆವರೆಗೆ ಭಾರತದ ಜತೆ ಸಂಧಾನ ಮಾತುಕತೆ ಇಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಝ್ ಶರೀಫ್ ಅವರ ಕಚೇರಿ ಮಂಗಳವಾರ ಸ್ಪಷ್ಟಪಡಿಸಿದೆ. “ಜಮ್ಮು ಕಾಶ್ಮೀರ ಸಮಸ್ಯೆ ಬಗೆಹರಿಸುವ ಸಂಬಂಧ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆ ಗಂಭೀರ ಹಾಗೂ ಪ್ರಾಮಾಣಿಕ ಮಾತುಕತೆಯನ್ನು ಬೇಷರತ್ ಆಗಿ ಪುನಾರಂಭಿಸಲಾಗುತ್ತದೆ” ಎಂಬ ತನ್ನ ನೀತಿಗೆ ಪಾಕ್ ಪ್ರಧಾನಿ ಕಚೇರಿ ತಿದ್ದುಪಡಿ ಮಾಡಿದೆ. “ಜಮ್ಮು ಮತ್ತು […]

Advertisement

Wordpress Social Share Plugin powered by Ultimatelysocial