ಸಿಕ್ಕಿ ಬಿದ್ದ ಬೆಂಗಳೂರಿನ ನಕಲಿ ಪೊಲೀಸ್!

 

 

ಬೆಂಗಳೂರು, ಜನವರಿ 10; ಆಕೆ ತಾನು ಪೊಲೀಸ್ ಎಂದು ಹೇಳಿಕೊಂಡು ಓಡಾಡುತ್ತಿದ್ದಳು. ರಸ್ತೆ ಬದಿ ವ್ಯಾಪಾರ ಮಾಡುವವರ ಬಳಿಕ, ಬಜ್ಜಿ ಬಿರಿಯಾನಿಯನ್ನು ಬಿಟ್ಟಿಯಾಗಿ ತಿಂದು ತೇಗುತ್ತಿದ್ದಳು.ಅಲ್ಲದೇ ಪಾರ್ಸೆಲ್ ಸಹ ಕಟ್ಟಿಸಿಕೊಂಡು ದುಡ್ಡು ಕೊಡದೇ ಓಡಾಡುತ್ತಿದ್ದಳು, ಹಣ ಕೇಳಿದರೆ ಬೆದರಿಕೆ ಹಾಕುತ್ತಿದ್ದಳು.ಮಹಿಳೆ ಪುಕ್ಕಟೆಯಾಗಿ ಬಜ್ಜಿ ತಿಂದು ಮತ್ತೆ ಪಾರ್ಸೆಲ್ ಕೇಳಿದಾಗ ವ್ಯಾಪಾರಿ 100 ರೂ. ಹಣ ಕೇಳಿದ್ದಾನೆ. ಆಗ ಪೊಲೀಸರ ಬಳಿ ಹಣ ಕೇಳುತ್ತಿಯಾ? ಎಂದು ಗಲಾಟೆ ಮಾಡಿದ್ದಾಳೆ. ಆಗ ಗಸ್ತು ಪೊಲೀಸರನ್ನು ಕರೆಸಿದಾಗ ಮಹಿಳೆ ನಕಲಿ ಪೊಲೀಸ್ ಎಂಬುದು ಬೆಳಕಿಗೆ ಬಂದಿದೆ.ಇದು ಉದ್ಯಾನಗರಿ ಬೆಂಗಳೂರಿನ ಬ್ಯಾಟರಾಯನಪುರ, ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ತಾನು ಪೊಲೀಸ್ ಎಂದು ಓಡಾಡುತ್ತಿದ್ದ ಸುಮಾರು 50 ವರ್ಷ ವಯಸ್ಸಿನ ಮಹಿಳೆಯ ಕಥೆ. ಈ ನಕಲಿ ಪೊಲೀಸ್‌ಳನ್ನು ಕೊಡಿಗೆಹಳ್ಳಿ ಪೊಲೀಸರು ಈಗ ಬಂಧಿಸಿದ್ದಾರೆ.ಒಂದು ವರ್ಷದಿಂದ ಕಾಟ ಆರೋಪಿಯ ಹೆಸರು ಲೀಲಾವತಿ. ಸುಮಾರು ಒಂದು ವರ್ಷದಿಂದ ಈಕೆ ಬೀದಿ ಬದಿ ವ್ಯಾಪಾರಿಗಳಿಗೆ ತಾನು ಪೊಲೀಸ್ ಎಂದು ಕಾಟ ಕೊಡುತ್ತಿದ್ದಳು.ಬಿಟ್ಟಿಯಾಗಿ ತರಕಾರಿ ತೆಗೆದುಕೊಂಡು ಹೋಗುತ್ತಿದ್ದಳು. ವ್ಯಾಪಾರಿಗಳ ಬಳಿ ಹೋಗಿ ಬಜ್ಜಿ, ಬಿರಿಯಾನಿ ತಿನ್ನುತ್ತಿದ್ದಳು, ಹಣವನ್ನೂ ಕೊಡದೇ ಮನೆಗೆ ಸಹ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದಳು.ಶುಕ್ರವಾರ ಶೇಕ್ ಸಲಾಂ ಎಂಬುವವರ ಬಜ್ಜಿ ಅಂಗಡಿಯಲ್ಲಿ ಬಿಟ್ಟಿಯಾಗಿ ಬಜ್ಜಿ ತಿಂದಿದ್ದಾಳೆ. ಬಳಿಕ ಮನೆಗೆ ಪಾರ್ಸೆಲ್ ಕೇಳಿದ್ದಾಳೆ. ಆಗ ಅವರು 100 ರೂ. ನೀಡುವಂತೆ ಕೇಳಿದ್ದಾರೆ. ಆಗ ಗಲಾಟೆ ನಡೆದಿದೆ.ಲೀಲಾವತಿ ವರ್ತನೆ ನೋಡಿದ ಸ್ಥಳದಲ್ಲಿದ್ದವರು 112 ಗಸ್ತು ವಾಹನಕ್ಕೆ ಫೋನ್ ಮಾಡಿದ್ದಾರೆ. ಆದರೆ ಓಡಲು ಯತ್ನಿಸಿದ ಆಕೆಯನ್ನು ಹಿಡಿಯಲಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ ಆಕೆ ನಕಲಿ ಪೊಲೀಸ್‌ ಎಂಬುದು ಸಾಬೀತಾಗಿದೆ.ಕೌಟುಂಬಿಕ ಹಿನ್ನಲೆ ಲೀಲಾವತಿ ವಿದ್ಯಾವಂತೆ. ಪತಿ ಇಂಜಿನಿಯರ್, ಮಗಳು ವೈದ್ಯ ಮತ್ತು ಮಗ ಇಂಜಿನಿಯರ್. ಆರ್ಥಿಕವಾಗಿ ಕುಟುಂಬ ಸದೃಢವಾಗಿದ್ದರೂ ಸಹ ಈಕೆ ತಾನು ಪೊಲೀಸ್ ಎಂದು ಹೇಳಿಕೊಂಡು ಬೀದಿ ಬದಿ ವ್ಯಾಪಾರಿಗಳನ್ನು ಹೆದರಿಸಿ ಬಿಟ್ಟಿಯಾಗಿ ಆಹಾರ, ತರಕಾರಿ ತೆಗೆದುಕೊಂಡು ಹೋಗುತ್ತಿದ್ದಳು.ಬಜ್ಜಿ, ಗೋಬಿ ಮಂಚೂರಿ, ತರಕಾರಿ ವ್ಯಾಪಾರಿಗಳು, ಬೇಕರಿ, ಪಾನಿಪೂರಿ ಮಾರಾಟ ಮಾಡುವವರಿಗೆ ಲೀಲಾವತಿ ಹಲವು ದಿನಗಳಿಂದ ಕಾಟ ಕೊಡುತ್ತಿದ್ದಳು. ಇವಳು ಪೊಲೀಸ್ ಎಂದು ನಂಬಿದ್ದ ವ್ಯಾಪಾರಿಗಳು ಸಹ ಆಕೆ ಹೇಳಿದಂತೆ ಕೇಳುತ್ತಿದ್ದರು.ಆದರೆ ಈಗ ಲೀಲಾವತಿ ದುಡ್ಡು ಕೊಡದೆ ಕಿರಿಕ್ ಮಾಡಿದಾಗ ಆಕೆಯ ನಿಜಬಣ್ಣ ಬಯಲಾಗಿದೆ. ಆಕೆ ನಕಲಿ ಪೊಲೀಸ್ ಎಂದು ಗೊತ್ತಾಗಿದ್ದು, ಅಸಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ 9 ಸೇವೆಗಳನ್ನು ಪಡೆಯಬವುದು.!

Tue Jan 10 , 2023
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದಲ್ಲಿನ ಸಾರ್ವಜನಿಕ ವಲಯದ ಅತಿದೊಡ್ಡ ಸಾಲದಾತ ತನ್ನ ಗ್ರಾಹಕರ ಅನುಕೂಲಕ್ಕಾಗಿ ವಿವಿಧ ಆನ್ಲೈನ್ ಮತ್ತು ಮೊಬೈಲ್ ಸೇವೆಗಳನ್ನು ಒದಗಿಸುತ್ತದೆ. SBI WhatsApp ಬ್ಯಾಂಕಿಂಗ್ ನಿಮ್ಮ ಎಲ್ಲಾ ಬ್ಯಾಂಕಿಂಗ್ ಪ್ರಶ್ನೆಗಳನ್ನು ನಿರ್ವಹಿಸಲು ಬ್ಯಾಂಕ್ ಪರಿಚಯಿಸಿದ ಹಲವಾರು ತೊಂದರೆ ಮುಕ್ತ ಆಯ್ಕೆಗಳಲ್ಲಿ ಒಂದಾಗಿದೆ. SBI ಸೇವೆಗಳನ್ನು ಬಳಸಲು QR ಕೋಡ್ ಅನ್ನು ತ್ವರಿತವಾಗಿ ಸ್ಕ್ಯಾನ್ ಮಾಡಲು ನಿಮ್ಮ ಮೊಬೈಲ್ ಸಾಧನವನ್ನು ಮಾತ್ರ ನೀವು ಬಳಸಬೇಕಾಗುತ್ತದೆ. ನೀವು ಎಸ್ಬಿಐ […]

Advertisement

Wordpress Social Share Plugin powered by Ultimatelysocial