Durai Murugan: ಕರ್ನಾಟಕ ನೀರಿನ ಹೆಸರಿನಲ್ಲಿ ತಮಿಳುನಾಡು ರೈತರನ್ನು ವಂಚಿಸಿದೆ: ದುರೈ ಮುರುಗನ್

ವದೆಹಲಿ: ಸಂಕಷ್ಟ ಸೂತ್ರದಲ್ಲಿ ನೀರು ಹರಿಸಲು ಕಾವೇರಿ ನೀರು (Kaveri Water) ನಿಯಂತ್ರಣ ಸಮಿತಿ ಸೂಚಿಸಿದ್ದು, ಆದೇಶದಂತೆ ನೀರು ಹರಿಸದೇ ಕುಡಿಯುವ ನೀರಿನ ಹೆಸರಿನಲ್ಲಿ ಕರ್ನಾಟಕ ತಮಿಳುನಾಡು (Tamil Nadu) ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ತಮಿಳುನಾಡು ಜಲ ಸಂಪನ್ಮೂಲ ಸಚಿವ ದುರೈ ಮುರುಗನ್ (Durai Murugan) ಆರೋಪಿಸಿದ್ದಾರೆ.

 

ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶಕ್ಕೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ ಅವರು, CWRC ಅಂಕಿ ಅಂಶಗಳ ಆಧರಿಸಿ ನೀರು ಬಿಡಲು ಸೂಚಿಸಿದೆ. ಅತ್ಯಂತ ಕಡಿಮೆ ನೀರು ಬಿಡಲು ಸೂಚಿಸಿದರೂ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೇಳಿದೆ. CWRC ಆದೇಶ ಪಾಲನೆ ಮಾಡದಿರುವುದು ಸುಪ್ರೀಂಕೋರ್ಟ್ (Supreme Court) ಆದೇಶದ ಉಲ್ಲಂಘನೆ ಎಂದಿದ್ದಾರೆ.

ಲಿಬಿಯಾದಲ್ಲಿ ಭೀಕರ ಪ್ರವಾಹ: 5,300 ಮಂದಿ ಸಾವು – 10 ಸಾವಿರಕ್ಕೂ ಹೆಚ್ಚು ಜನ ನಾಪತ್ತೆ

ಕಾವೇರಿ ಜಲಾನಯನದಿಂದ 6.75 ಟಿಎಂಸಿ ಮಾತ್ರ ಕುಡಿಯುವ ನೀರಿಗೆ ಬಳಕೆ ಮಾಡಬೇಕು. ಕುಡಿಯುವ ನೀರು ಹೊರತುಪಡಿಸಿ 27 ಟಿಎಂಸಿ ನೀರು ಉಳಿಯಲಿದೆ. ಆದರೆ ಕರ್ನಾಟಕ ಕುಡಿಯುವ ನೀರಿನ ಹೆಸರಿನಲ್ಲಿ ತಮಿಳುನಾಡು ರೈತರನ್ನು ವಂಚಿಸಿದೆ. ರೈತರ ಕಲ್ಯಾಣಕ್ಕೆ ಅಡ್ಡಿಯಾಗುವ ಇಂತಹ ನಿರ್ಧಾರಗಳನ್ನು ತಮಿಳುನಾಡು ಸರ್ಕಾರ ಒಪ್ಪುವುದಿಲ್ಲ ಎಂದು ಕಿಡಿಕಾರಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

Chaitra Kundapur: ಸ್ವಾಮೀಜಿ ಬಂಧನವಾದ್ರೆ ದೊಡ್ಡ ನಾಯಕರ ಹೆಸರುಗಳು ಬಹಿರಂಗ- ತಲ್ಲಣ ಸೃಷ್ಟಿಸಿದ ಚೈತ್ರಾ ಕುಂದಾಪುರ ಹೇಳಿಕೆ

Thu Sep 14 , 2023
ಬೆಂಗಳೂರು, ಸೆಪ್ಟೆಂಬರ್‌ 14: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ದಿನಗಳ ಕಾಲ ಸಿಸಿಬಿ ಕಸ್ಟಡಿಯಲ್ಲಿರುವ ಹಿಂದುತ್ವ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸ್ಪೋಟಕ ಹೇಳಿಕೆವೊಂದನ್ನು ನೀಡಿದ್ದಾರೆ. ಸ್ವಾಮೀಜಿ ಬಂಧನವಾದರೆ, ದೊಡ್ಡ-ದೊಡ್ಡವರ ಹೆಸರುಗಳು ಬಹಿರಂಗವಾಗಲಿವೆ ಎಂದು ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ ಮಹಿಳಾ ಪುನರ್ವಸತಿ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆತಂದಾಗ ಚೈತ್ರಾ ಈ ಆರೋಪ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್‌ನ ಬಾಕಿ ಬಿಲ್‌ಗಳನ್ನು ಪಡೆಯಲು ದೂರುದಾರ ಗೋವಿಂದ ಬಾಬು ಪೂಜಾರಿ ಸಂಚು ನಡೆಸಿದ್ದಾರೆ ಎಂದು ಇದೇ […]

Advertisement

Wordpress Social Share Plugin powered by Ultimatelysocial