ಶಸ್ತ್ರಚಿಕಿತ್ಸೆ ವೇಳೆ ರಕ್ತನಾಳವನ್ನೇ ಕತ್ತರಿಸಿ, ತಾಯಿ ಮಗು ಸಾವು.

ತ್ತರ ಪ್ರದೇಶದ : ಮಾವಾನಾ ಪಟ್ಟಣದ ಪರೀಕ್ಷಿತ್‌ಗಢ ರಸ್ತೆಯಲ್ಲಿರುವ ರತನ್ ನರ್ಸಿಂಗ್ ಹೋಂನಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಕಲಿ ವೈದ್ಯನೊಬ್ಬ ರಕ್ತನಾಳವನ್ನೇ ಕತ್ತರಿಸಿದ್ದು, ಮಹಿಳೆ ಮತ್ತು ಆಕೆಯ ನವಜಾತ ಶಿಶು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆ ವೇಳೆ ನರ್ಸಿಂಗ್ ಹೋಮ್​ಗೆ ಕರೆತರಲಾಗಿದೆ. ಹೆರಿಗೆ ಸಮಯದಲ್ಲಿ ನಕಲಿ ವೈದ್ಯ ಮಹಿಳೆಯ ರಕ್ತನಾಳಗಳ ಪೈಕಿ ಒಂದನ್ನು ಕತ್ತರಿಸಿದ್ದು ತೀವ್ರ ರಕ್ತಸ್ರಾವವಾಗಿದ್ದು, ತಾಯಿ-ಮಗು ಮೃತಪಟ್ಟಿದ್ದಾರೆ. ಇಬ್ಬರ ಸಾವಿಗೆ ವೈದ್ಯನ ನಿರ್ಲಕ್ಷ್ಯವೇ ಕಾರಣ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಗಲಾಟೆಯ ತೀವ್ರಗೊಳ್ಳುತ್ತಿದ್ದಂತೆ ವೈದ್ಯರು ಮತ್ತು ನರ್ಸಿಂಗ್ ಹೋಂ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕಾಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಿ, ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಾವಾನಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐಪಿಎಸ್ ಅಧಿಕಾರಿಯ ಮದುವೆ ಉಡುಗೊರೆಯೇ ಕಳವು.

Fri Jan 27 , 2023
ಬೆಂಗಳೂರು, ಜನವರಿ 27: ಬೆಂಗಳೂರಿನ ಹೃದಯಭಾಗದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಐಪಿಎಸ್ ಅಧಿಕಾರಿಯೊಬ್ಬರ ಮದುವೆಯ ಆರತಕ್ಷತೆ ವೇಳೆ 1 ಲಕ್ಷ ರೂಪಾಯಿ ಮೌಲ್ಯದ ಉಡುಗೊರೆಗಳು ಕಳ್ಳತನವಾಗಿದೆ. ಶಂಕಿತ ವ್ಯಕ್ತಿ ಖಾಸಗಿ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದರಲ್ಲಿ ಡೆಕೋರೇಟರ್ ಕೆಲಸ ಮಾಡುತ್ತಿದ್ದಾನೆ. ಐಪಿಎಸ್ ಅಧಿಕಾರಿ ನೀಡಿದ ದೂರಿನ ಮೇರೆಗೆ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 29 ವರ್ಷದ ಡಾ ಮೆಲ್ವಿನ್ ವರ್ಗೀಸ್ ಅವರು ತಮ್ಮ ಮೊದಲ ಪ್ರಯತ್ನದಲ್ಲಿ 2018 ರಲ್ಲಿ UPSC ಪರೀಕ್ಷೆಯಲ್ಲಿ […]

Advertisement

Wordpress Social Share Plugin powered by Ultimatelysocial