ಜೀತ ಮಾಡಲು ಸಿದ್ಧರಾದ ಸ್ಯಾಂಡಲ್ವುಡ್ ಡೈನಾಮಿಕ್‌ ಹೀರೋ ದೇವರಾಜ್‌…?

ನಟ ಡೈನಾಮಿಕ್‌ ಹೀರೋ ದೇವರಾಜ್‌ ಅಭಿನಯದ “ಹುಲಿಯಾ’, “ಕಂಬಾಲಹಳ್ಳಿ’ ಚಿತ್ರಗಳ ಬಗ್ಗೆ ಅನೇಕರಿಗೆ ಗೊತ್ತಿರಬಹುದು. 90ರ ದಶಕದಲ್ಲಿ ತೆರೆಗೆ ಬಂದಿದ್ದ ಸಾಮಾಜಿಕ ಅಸಮಾನತೆಯ ಕಥಾಹಂದರ ಹೊಂದಿದ್ದ ಈ ಚಿತ್ರಗಳು ಆಗಿನ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದವು. ಇದೀಗ ಅಂಥದ್ದೇ ಮತ್ತೂಂದು ಚಿತ್ರದಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ದೇವರಾಜ್‌ ತಯಾರಾಗುತ್ತಿದ್ದಾರೆ.

ಹೌದು, ಸಾಹಿತಿ ಕುಂ. ವೀರಭದ್ರಪ್ಪ ಅವರ “ಉಡ’ ಎನ್ನುವ ಕಥೆ ಈಗ “ಮಾನ’ ಎನ್ನುವ ಹೆಸರಿನಲ್ಲಿ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ನಟ ದೇವರಾಜ್‌ ಜೀತ ಮಾಡುವ ಕೂಲಿ ಆಳು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸುಮಾರು ಮೂರುವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಡೇವಿಡ್‌ ಸೆಬಾಸ್ಟಿಯನ್‌ “ಮಾನ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಇದೇ ದಸರಾ ಹಬ್ಬದ ಸಂದರ್ಭದಲ್ಲಿ “ಮಾನ’ ಚಿತ್ರದ ಮುಹೂರ್ತ ಸರಳವಾಗಿ ನೆರವೇರಿದೆ. ಮುಹೂರ್ತದ ಬಳಿಕ ಮಾತನಾಡಿದ ನಟ ದೇವರಾಜ್‌, “ಇದೊಂದು ಸಾಮಾಜಿಕ ಕಥಾಹಂದರ ಸಿನಿಮಾ. ಕುಂ. ವೀರಭದ್ರಪ್ಪ ನನ್ನ ಮೆಚ್ಚಿನ ಲೇಖಕರಲ್ಲೊಬ್ಬರು. ಅವರ ಅನೇಕ ಕಥೆಗಳು ನನಗೆ ಇಷ್ಟ.

ಈ ಹಿಂದೆ ಕೂಡ ಅವರ ಕಥೆಯನ್ನು ಇಟ್ಟುಕೊಂಡು “ಕೆಂಡದಮಳೆ’ ಸಿನಿಮಾ ಮಾಡಿ¨ªೆ. ಕಥೆ ಕೇಳಿದ ಕೂಡಲೇ ಇಷ್ಟವಾಯ್ತು. ಹಾಗಾಗಿ ಈ ಪಾತ್ರ ಒಪ್ಪಿಕೊಂಡೆ. ಇದರಲ್ಲಿ ನನ್ನದು ಜೀತ ಮಾಡುವ ಕೂಲಿಯ ಪಾತ್ರ. ಮೇಲ್ನೋಟಕ್ಕೆ “ಹುಲಿಯಾ’ ಥರದ ಪಾತ್ರದಂತೆ ಕಂಡರೂ, ಆ ಸಿನಿಮಾಕ್ಕೂ ಇದಕ್ಕೂ ತುಂಬ ವ್ಯತ್ಯಾಸ, ವಿಭಿನ್ನತೆ ಇದೆ. “ಹುಲಿಯಾ’ ಉತ್ತರ ಕರ್ನಾಟಕದಲ್ಲಿ ನಡೆಯುವಂಥ ಕಥೆ ಇದು ದಕ್ಷಿಣ ಕರ್ನಾಟಕದಲ್ಲಿ ನಡೆಯುವಂಥ ಕಥೆ. ನನ್ನ ಪಾತ್ರದ ವೇಷಭೂಷಣ, ಭಾಷೆ ಎಲ್ಲವೂ ಹಳೇ ಮೈಸೂರು ಶೈಲಿಯಲ್ಲಿರುತ್ತದೆ. ಸಿನಿಮಾದ ಸಬ್ಜೆಕ್ಟ್ ತುಂಬ ಹ್ಯೂಮರಸ್‌ ಆಗಿದೆ ಹಾಗೆಯೇ ಸಿನಿಮಾ ಕೂಡ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ’ ಎಂದು “ಮಾನ’ ಚಿತ್ರದ ಕಥೆ ಮತ್ತು ಪಾತ್ರ ಪರಿಚಯ ಮಾಡಿಕೊಟ್ಟರು.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಡೇವಿಡ್‌, “ಇದೊಂದು ನೈಜ ಘಟನೆ ಆಧರಿತ 70ರ ದಶಕದ ಕಥೆ. ಕುಂವಿ ಅವರ ಕಥೆಯನ್ನು ಅವರೊಂದಿಗೆ ಚರ್ಚಿಸಿ ಸಿನಿಮಾ ರೂಪದಲ್ಲಿ ತೆರೆಮೇಲೆ ತರುತ್ತಿದ್ದೇವೆ. ಜಮೀನಾªರರು, ಕೂಲಿ, ಜೀತ, ಸಾಮಾಜಿಕ ಅಸಮಾನತೆಯ ವಿರುದ್ದದ ಹೋರಾಟದ ಸುತ್ತ ಇಡೀ ಸಿನಿಮಾ ನಡೆಯುತ್ತದೆ.

ಹಳೇ ಮೈಸೂರು, ಚನ್ನಪಟ್ಟಣ ಹಿನ್ನೆಲೆಯಾಗಿಟ್ಟುಕೊಂಡು ಸಿನಿಮಾದ ಕಥೆ ಸಾಗುತ್ತದೆ. ದೇವರಾಜ್‌, ಉಮಾಶ್ರೀ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದ ಮುಖ್ಯಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಇದೇ ತಿಂಗಳಿನಲ್ಲಿ ಚಿತ್ರೀಕರಣ ಶುರುವಾಗಲಿದೆ’ ಎಂದು ಮಾಹಿತಿ ನೀಡಿದರು. ಕಾಂತಲಕ್ಷ್ಮೀ ರಮೇಶ ಬಾಬು “ಮಾನ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಸದ್ಯ ಮುಹೂರ್ತ ನಡೆಸಿ ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ, ಮುಂದಿನ ವರ್ಷದ ಮಧ್ಯ ಭಾಗದಲ್ಲಿ “ಮಾನ’ವನ್ನು ತೆರೆಗೆ ತರುವ ಯೋಚನೆ ಹಾಕಿಕೊಂಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಬುಲೆಟ್ ನಿಂದ ವ್ಯಕ್ತಿಯ ಜೀವ ಉಳಿಸಿದ ಸ್ಮಾರ್ಟ್ ಫೋನ್...!

Wed Oct 13 , 2021
ಮಾರ್ವೆಲ್ ಹೀರೋ ಹಲ್ಕ್ ಮತ್ತು ಮೋಟೋ ಜಿ 5 ಒಟ್ಟಿಗೆ ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಿದೆ. ಕಳೆದ ವಾರ ಬ್ರೆಜಿಲ್‌ನಲ್ಲಿ ನಡೆದ ದರೋಡೆ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಅಲ್ಲಿಯೇ ಇದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿ ಗುಂಡು ಹಾರಿಸಿದ್ದಾನೆ. ಇದು ನೇರವಾಗಿ Moto G5 ಸ್ಮಾರ್ಟ್‌ಫೋನ್‌ಗೆ ಬಡಿದು, ದಿಕ್ಕನ್ನು ಬದಲಾಯಿಸಿ ಮತ್ತು ಸೊಂಟಕ್ಕೆ ಬಡಿಯಿತು. ಇಂತಹ ಸಣ್ಣ ಗಾಯದಿಂದ ಬದುಕುಳಿದ ವ್ಯಕ್ತಿ ಸಾವಿನಿಂದ ಪಾರಾಗಿದ್ದಾನೆ. ಇದನ್ನು ಹೊರತುಪಡಿಸಿ ಬುಲೆಟ್ […]

Advertisement

Wordpress Social Share Plugin powered by Ultimatelysocial